ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಅನ್ನು ತಾಲಿಬಾನ್ ಉಗ್ರರಿಗೆ ಹೋಲಿಸಿದ ಸಿಪಿಐಎಂ ಮುಖಂಡ

|
Google Oneindia Kannada News

ತಿರುವನಂತಪುರಂ, ನವೆಂಬರ್ 21: ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯದ ಮುಂದೆ ಪ್ರತಿಭಟನೆ ನಡೆಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ತಾಲಿಬಾನ್ ಮತ್ತು ಖಾಲಿಸ್ಥಾನ್ ಉಗ್ರರಂತೇ ವರ್ತಿಸುತ್ತಿದ್ದಾರೆ ಎಂದು ಕಮ್ಯುನಿಸ್ಟ್ ಪಕ್ಷ(ಸಿಪಿಐಎಂ) ಪಾಲಿಟ್ ಬ್ಯೂರೋ ಸದಸ್ಯ ಎಸ್ ರಾಮಚಂದ್ರನ್ ಪಿಳೈ ದೂರಿದ್ದಾರೆ.

ಪಿಣರಾಯಿ ವಿರುದ್ದ ಒಡೆಯಿತೇ ಹಿಂದೂಗಳ ಸಹನೆಯ ಕಟ್ಟೆ: ಅಡ್ವಾಂಟೇಜ್ ಬಿಜೆಪಿ ಪಿಣರಾಯಿ ವಿರುದ್ದ ಒಡೆಯಿತೇ ಹಿಂದೂಗಳ ಸಹನೆಯ ಕಟ್ಟೆ: ಅಡ್ವಾಂಟೇಜ್ ಬಿಜೆಪಿ

"ಶಬರಿಮಲೆಯಲ್ಲಿ ಅವರೇಕೆ ರಣರಂಗ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ? ಎಲ್ಲವೂ ಶಾಂತಿಯುತವಾಗಿ ನಡೆಯಲು ಅವರು ಅನುವು ಮಾಡಿಕೊಡಬೇಕು. ಆದರೆ ಅವರು ಹಾಗೆ ಮಾಡುತ್ತಿಲ್ಲ" ಎಂದು ಪಿಳೈ ಹೇಳಿದ್ದಾರೆ.

ಮತ್ತೆ ರಣರಂಗವಾದ ಶಬರಿಮಲೆ: 70 ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ ಮತ್ತೆ ರಣರಂಗವಾದ ಶಬರಿಮಲೆ: 70 ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ

CPIM leader says, RSS behaving like Terrorists

ಗೆರಿಲ್ಲಾ ತಂತ್ರ ಬಳಸಿ ಶಬರಿಮಲೆ ಪ್ರವೇಶ: ತೃಪ್ತಿ ದೇಸಾಯಿ ಹೇಳಿಕೆಗೆರಿಲ್ಲಾ ತಂತ್ರ ಬಳಸಿ ಶಬರಿಮಲೆ ಪ್ರವೇಶ: ತೃಪ್ತಿ ದೇಸಾಯಿ ಹೇಳಿಕೆ

ಕಮ್ಯುನಿಸ್ಟ್ ಪಕ್ಷದ ಇನ್ನೋರ್ವ ಮುಖಂಡ ಕೊಡಿಯೇರಿ ಬಾಲಕೃಷ್ಣನ್ ಅವರು ಸಹ, "ಖಾಲಿಸ್ಥಾನ್ ಉಗ್ರರು ಸ್ವರ್ಣಮಂದಿರವನ್ನು ವಶಪಡಿಸಿಕೊಂಡಂತೆ ಆರೆಸ್ಸೆಸ್ ಸಹ ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಅಶಾಂತಿ ಬಿತ್ತುತ್ತಿದೆ. ಭಯೋತ್ಪಾದಕರಿಗೆ ಯಾವುದೇ ನಂಬಿಕೆ ಇರುವುದಿಲ್ಲ. ಆರೆಸ್ಸೆಸ್ ಸಹ ಒಂದು ಉಗ್ರ ಸಂಘಟನೆ. ಖಾಲಿಸ್ಥಾನಿ ಉಗ್ರರು ಸ್ವರ್ಣಮಂದಿರದಲ್ಲಿ ಮಾಡಿದ್ದನ್ನೇ ಆರೆಸ್ಸೆಸ್ ನವರು ಶಬರಿಮಲೆಯಲ್ಲಿಮಾಡುತ್ತಿದ್ದಾರೆ. ಖಾಲಿಸ್ಥಾನಿ ಉಗ್ರರೇನು ದೇವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದರಾ? ಪದ್ಧತಿ ಅನುಸರಿಸುತ್ತಿದ್ದರಾ? ಹಾಗೆಯೇ ಇವರೂ ಸಹ" ಎಂದು ಬಾಲಕೃಷ್ಣನ್ ಹೇಳಿದ್ದಾರೆ.

English summary
CPIM Politburo member S. Ramachandran Pillai said, They (RSS) are behaving like Taliban and Khalistan terrorists. Why are they trying to create trouble in Sabarimala? They should allow everything to be peaceful, they’re not doing it
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X