ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ ಆರೋಪ, ಸಿಪಿಐಎಂ ಶಾಸಕ ಅಮಾನತು

|
Google Oneindia Kannada News

ತಿರುವನಂತಪುರಂ, ನವೆಂಬರ್ 26: ಪಕ್ಷದ ಮಹಿಳಾ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳದ ಆಡಳಿತರೂಢ ಸಿಪಿಐ(ಎಂ) ತನ್ನ ಶಾಸಕನನ್ನು ಅಮಾನತುಗೊಳಿಸಿದೆ.

ಶೋರನೂರು ಶಾಸಕ ಪಿಕೆ ಶಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಈಗ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿ, 6 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.

ಕೇರಳದ ಶಾಸಕ ಪಿಕೆ ಶಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇರಳದ ಶಾಸಕ ಪಿಕೆ ಶಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಸಿಪಿಐಎಂನ ಯೂಥ್ ವಿಂಗ್ ನ ಮಹಿಳಾ ಸದಸ್ಯೆಯೊಬ್ಬರು ಪಿಕೆ ಶಶಿ ವಿರುದ್ಧ ಆರೋಪ ಹೊರೆಸಿ, ಪಕ್ಷದ ಹಿರಿಯ ಮುಖಂಡರಿಗೆ ಪತ್ರ ಬರೆದಿದ್ದರು. ಈ ಕುರಿತಂತೆ ತನಿಖೆ ನಡೆಸಿದ ಸಿಪಿಐ(ಎಂ)ನ ಪ್ರಮುಖರು, ಪಕ್ಷದ ಕೇಂದ್ರ ಕಚೇರಿ ಸಭೆ ನಡೆಸಿ ತನ್ನ ತೀರ್ಮಾನವನ್ನು ಪ್ರಕಟಿಸಿದರು.

CPI(M) suspends MLA PK Sasi from party on sexual harassment charges

ಡೆಮಾಕ್ರಾಟಿಕ್ ಯೂಥ್ ಫೆಡೆರೇಷನ್ ಆಫ್ ಇಂಡಿಯಾ (ಡಿಎಫ್ ವೈಐ)ನ ಮಹಿಳಾ ಸದಸ್ಯೆಯೊಬ್ಬರು, ತಮಗಾದ ನೋವನ್ನು ಪತ್ರದ ಮೂಲಕ ತೋಡಿಕೊಂಡಿದ್ದರು. ಕಳೆದ ಆಗಸ್ಟ್ ತಿಂಗಳಿನಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್ ಗೆ ಪತ್ರ ತಲುಪಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಂತರ ಮಾರ್ಕ್ಸ್ ವಾಗಿ ಪಕ್ಷದ ಹಿರಿಯ ನಾಯಕಿ ಬೃಂದಾ ಕಾರಟ್ ಹಾಗೂ ಸೀತಾರಾಮ್ ಯೆಚೂರಿಗೂ ಪತ್ರ ಕಳಿಸಲಾಗಿತ್ತು.

ಚಡ್ಡಿ ಧರಿಸುವ ವಿದ್ಯಾರ್ಥಿನಿಯರನ್ನು ವೇಶ್ಯೆ ಎನ್ನುವುದು ಸರಿಯೆ?ಚಡ್ಡಿ ಧರಿಸುವ ವಿದ್ಯಾರ್ಥಿನಿಯರನ್ನು ವೇಶ್ಯೆ ಎನ್ನುವುದು ಸರಿಯೆ?

ಕಾನೂನು ಸಚಿವ ಎಕೆ ಬಾಲನ್, ಕಣ್ಣೂರು ಸಂಸದ, ಕೇಂದ್ರ ಸಮಿತಿ ಸದಸ್ಯ ಪಿಕೆ ಶ್ರೀಮತಿ ಅವರಿದ್ದ ಸಮಿತಿಯು ಈ ಪ್ರಕರಣದ ತನಿಖೆ ಕೈಗೊಂಡಿತ್ತು. ದೂರಿತ್ತ ಮಹಿಳೆ ಜತೆ ಅಸಭ್ಯವಾಗಿ ನಡೆದುಕೊಂಡು, ಲೈಂಗಿಕ ಕಿರುಕುಳ ನೀಡಿಲ್ಲ, ಆದರೆ, ಅಸಭ್ಯವಾಗಿ ಮಹಿಳಾ ಕಾರ್ಯಕರ್ತೆ ಜತೆ ಮಾತುಕತೆ ನಡೆಸಿದ್ದಾರೆ. ಇದರಿಂದ ಪಕ್ಷದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ, ಇದು ನನ್ನ ರಾಜಕೀಯ ಬದುಕು ಅಂತ್ಯಗೊಳಿಸಲು ಮಾಡಿರುವ ಕುತಂತ್ರ, ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ.(ಪಿಟಿಐ)

English summary
The ruling CPI(M) in Kerala on Monday suspended its Shoranur MLA, PK Sasi, against whom sexual harassment charges were leveled by a woman party worker, for six months from the party's primary membership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X