ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಬಯಸಿದರೆ 1 ಡೋಸ್ ಪಡೆದ 4 ವಾರದಲ್ಲೇ ಕೊವಿಶೀಲ್ಡ್ 2ನೇ ಡೋಸ್!

|
Google Oneindia Kannada News

ತಿರುವನಂತಪುರಂ, ಸಪ್ಟೆಂಬರ್ 6: ಭಾರತದಲ್ಲಿ ಕೊವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದ ವ್ಯಕ್ತಿಯು ತಾನು ಬಯಸಿದರೆ 4 ವಾರಗಳಲ್ಲೇ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಆದೇಶಿಸಿದೆ. ದೇಶದಲ್ಲಿ ಪ್ರಸ್ತುತ ಒಂದು ಡೋಸ್ ಕೊವಿಶೀಲ್ಡ್ ಲಸಿಕೆ ಪಡೆದ ವ್ಯಕ್ತಿಗೆ 84 ದಿನಗಳ ನಂತರವಷ್ಟೇ ಎರಡನೇ ಡೋಸ್ ಲಸಿಕೆ ನೀಡುವುದಕ್ಕೆ ಅವಕಾಶವಿದೆ.

ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಪಿ ಬಿ ಸುರೇಶ್ ಕುಮಾರ್ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ವಿದೇಶಕ್ಕೆ ಪ್ರಯಾಣಿಸಲು ಅಗತ್ಯವಿರುವ ಅಧಿಕೃತ ಪ್ರಯಾಣಿಕರಿಗೆ ಸೂಕ್ತ ಸುರಕ್ಷತೆ ಮತ್ತು ಆರೋಗ್ಯ ಭದ್ರತೆಯನ್ನು ಒದಗಿಸುವುದು ಅಗತ್ಯವಾಗಿದೆ. ಉದ್ಯೋಗ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ವಿದೇಶ ಮತ್ತು ಅನ್ಯರಾಜ್ಯಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಈಗಿರುವ ಸಮಯದ ಮಿತಿಗಿಂತ ಕಡಿಮೆ ಅವಧಿಯಲ್ಲಿ ಏಕೆ ಲಸಿಕೆಯನ್ನು ನೀಡಬಾರದು ಎಂದು ಪ್ರಶ್ನಿಸಿದ್ದಾರೆ.

ಕೊವಿಶೀಲ್ಡ್ 1 ಮತ್ತು 2ನೇ ಡೋಸ್ ನಡುವೆ 84 ದಿನಗಳ ಅಂತರ ಏಕೆ? ಕೊವಿಶೀಲ್ಡ್ 1 ಮತ್ತು 2ನೇ ಡೋಸ್ ನಡುವೆ 84 ದಿನಗಳ ಅಂತರ ಏಕೆ?

ವಿದೇಶಕ್ಕೆ ಹೋಗುವವರು ಮತ್ತು ಹೋದವರೆಲ್ಲ ಅಲ್ಲಿನ ಶಾಶ್ವತ ನಿವಾಸಿಗಳಲ್ಲ. ತಮ್ಮ ಕಾರ್ಯ ನಿಮಿತ್ತರಾಗಿ ಹೋಗಿರುವ ಅವರು ಮರಳಿ ಭಾರತಕ್ಕೆ ವಾಪಸ್ ಬರುವ ಅಗತ್ಯವಿರುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಹೈಕೋರ್ಟ್ ಈ ಆದೇಶವನ್ನು ಹೊರಡಿಸಿದೆ. ಸರ್ಕಾರವು ಎರಡು ಡೋಸ್ ಕೊವಿಶೀಲ್ಡ್ ಲಸಿಕೆ ನಡುವೆ 84 ದಿನಗಳ ಅಂತರವನ್ನು ನಿಗದಿಗೊಳಿಸಿರುವುದು ಏಕೆ?, 84 ದಿನಗಳ ಅಂತರದ ಹಿಂದಿನ ಅಸಲಿ ಕಾರಣವೇನು?, ಕೇಂದ್ರ ಸರ್ಕಾರದ ಈ ಕಾಲಮಿತಿಯನ್ನು ಪ್ರಶ್ನಿಸಿದ್ದು ಏಕೆ?, ಅರ್ಜಿದಾರರ ಪ್ರಶ್ನೆಗೆ ಈ ಹಿಂದೆ ಕೇಂದ್ರ ಸರ್ಕಾರ ನೀಡಿದ ಉತ್ತರದಲ್ಲಿ ಏನಿತ್ತು ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ನಿಗದಿಗೊಳಿಸಿದ ಅವಧಿಪೂರ್ವದಲ್ಲಿ ಲಸಿಕೆ ಪಡೆಯಲು ಅವಕಾಶ

ನಿಗದಿಗೊಳಿಸಿದ ಅವಧಿಪೂರ್ವದಲ್ಲಿ ಲಸಿಕೆ ಪಡೆಯಲು ಅವಕಾಶ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನೀತಿಯ ಪ್ರಕಾರ, ನಿಗದಿಗೊಳಿಸಿದ ಅವಧಿ ಪೂರ್ವದಲ್ಲಿ ಲಸಿಕೆ ಪಡೆದುಕೊಳ್ಳುವುದಕ್ಕೆ ಕೆಲವು ಸಂದರ್ಭದಲ್ಲಿ ಅವಕಾಶ ನೀಡಬೇಕು. ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕೆ ಪಡೆದುಕೊಳ್ಳುವವರಿಗೂ ಈ ಅನುಮತಿಯನ್ನು ನೀಡಬೇಕು ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ. ಕೇಂದ್ರ ಸರ್ಕಾರದ ಪ್ರಕಾರ, "ಕೊವಿಡ್-19 ಲಸಿಕೆ ವಿತರಣೆ ಸ್ವಯಂಪ್ರೇರಿತವಾಗಿದ್ದು, ಲಸಿಕೆ ಸ್ವೀಕರಿಸಲು ಯಾರಿಂದಲೂ ಯಾವುದೇ ರೀತಿ ಬಲವಂತವಿಲ್ಲ. ಆದ್ದರಿಂದ ಅವಶ್ಯಕತೆ ಮತ್ತು ಸೋಂಕಿನಿಂದ ಉತ್ತಮ ರೀತಿ ರಕ್ಷಣೆ ಒದಗಿಸಲು ಎರಡೂ ಡೋಸ್ ಲಸಿಕೆ ನೀಡುವುದನ್ನು ಸಲಹೆ ಎಂದು ಪರಿಗಣಿಸಬೇಕಿದೆ," ಎಂದು ಕೋರ್ಟ್ ಹೇಳಿದೆ.

ಲಸಿಕೆ ಪಡೆದುಕೊಳ್ಳಲು ನಿರಾಕರಿಸುವ ಹಕ್ಕನ್ನು ವ್ಯಕ್ತಿ ಹೊಂದಿರುತ್ತಾನೆ. ಮೂಲ ಪ್ರೋಟೋಕಾಲ್ ಪ್ರಕಾರ, ಅವರು ತಮ್ಮ ಪಾಕೆಟ್‌ನಿಂದ ಹಣ ಖರ್ಚು ಮಾಡಿ ಲಸಿಕೆ ಖರೀದಿಸುವಾಗ ರಾಜ್ಯ ಸರ್ಕಾರವು ಯಾವುದೇ ರೀತಿ ನಿಲುವು ತಾಳುವಂತಿಲ್ಲ. ನಾಲ್ಕು ವಾರಗಳ ನಂತರ ಎರಡನೇ ಡೋಸ್ ಅನ್ನು ಸ್ವೀಕರಿಸಲು ಅನುಮತಿಸಬಾರದು ಎಂದು ರಾಜ್ಯ ಸರ್ಕಾರ ಹೇಳುವುದಕ್ಕೆ ಯಾವುದೇ ಕಾರಣವಿಲ್ಲ ಎಂದಿದೆ.

2ನೇ ಡೋಸ್ ಲಸಿಕೆಗೆ ಪ್ರಾರಂಭಿಕ ಶಿಷ್ಟಾಚಾರ

2ನೇ ಡೋಸ್ ಲಸಿಕೆಗೆ ಪ್ರಾರಂಭಿಕ ಶಿಷ್ಟಾಚಾರ

ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ ಅಂತರವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯಲ್ಲಿ ನಾಲ್ಕನೇ ಪ್ರತಿವಾದಿ ಆಗಿರುವ ಕೇಂದ್ರ ಸರ್ಕಾರಕ್ಕೂ ಹೈಕೋರ್ಟ್ ನಿರ್ದೇಶನವನ್ನು ನೀಡಿದೆ. "ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ ವ್ಯಕ್ತಿಯು 4 ವಾರಗಳ ನಂತರದಲ್ಲಿ 2ನೇ ಡೋಸ್ ಪಡೆದುಕೊಳ್ಳಲು ಅಗತ್ಯವಿರುವ ತಿದ್ದುಪಡಿಗಳನ್ನು CoWin ಅಪ್ಲಿಕೇಷನ್ ನಲ್ಲಿ ಮಾಡಿರಿ. ಕೊವಿಶೀಲ್ಡ್ ಲಸಿಕೆಯ ನಡುವಿನ ಅಂತರವನ್ನು ತೀರ್ಮಾನಿಸುವಲ್ಲಿ ಪ್ರಾರಂಭಿಕ ಹಂತದಲ್ಲಿ ಬಳಸಿಕೊಂಡಿರುವ ಶಿಷ್ಟಾಚಾರವನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.

84 ದಿನಗಳ ಅಂತರವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ

84 ದಿನಗಳ ಅಂತರವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ

ಕಿಟೆಕ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪನಿಯು ತನ್ನ ಉದ್ಯೋಗಿಗಳಿಗೆ 84 ದಿನಗಳೊಳಗೆ ಎರಡೂ ಡೋಸ್ ಕೊವಿಶೀಲ್ಡ್ ಲಸಿಕೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲು ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಕಂಪನಿಯು ಸಲ್ಲಿಸಿದ ಅರ್ಜಿಗೆ ಕೇಂದ್ರ ಸರ್ಕಾರವು ಸಲ್ಲಿಸಿದ ಕೌಂಟರ್ ಅಫಿಡವಿಟ್ ನಲ್ಲಿ ಕೊವಿಶೀಲ್ಡ್ ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವೆ 84 ದಿನಗಳ ಅಂತರವಿದ್ದರೆ ಲಸಿಕೆಯು ಹೆಚ್ಚು ಸುರಕ್ಷಿತವಾಗಿರಲಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಉಲ್ಲೇಖಿಸಲಾಗಿತ್ತು.

ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ಇರುವುದೇನು?

ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ಇರುವುದೇನು?

"ಭಾರತದ ರಾಷ್ಟ್ರೀಯ ಕೋವಿಡ್ ಲಸಿಕೆ ವಿತರಣೆ ಅಭಿಯಾನವನ್ನು ವೈಜ್ಞಾನಿಕ ಮತ್ತು ಸಾಂಕ್ರಾಮಿಕ ರೋಗ ಪುರಾವೆಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾರ್ಗಸೂಚಿಗಳು ಮತ್ತು ಜಾಗತಿಕ ಉತ್ತಮ ಅಭ್ಯಾಸಗಳ ಆಧಾರದ ಮೇಲೆ ರಚಿಸಲಾಗಿದೆ," ಎಂದು ಅಫಿಡವಿಟ್ ಆರಂಭದಲ್ಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೋವಿಡ್ -19 ಲಸಿಕೆ ವಿತರಣೆ ಅಡಿಯಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಲಭ್ಯವಿರುವ ಮತ್ತು ಹೊಸ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಪರಿಷ್ಕರಣೆಗೆ ಒಳಪಡಿಸಲಾಗಿದೆ ಕೊವಿಡ್-19 ಲಸಿಕೆ ವಿತರಣೆಯ ರಾಷ್ಟ್ರೀಯ ತಜ್ಞರ ಸಮಿತಿ(NEGVAC)ಯು ತಿಳಿಸಿತ್ತು.

"ಕೊವಿಡ್-19 ಲಸಿಕೆ ವಿತರಣೆಯ ರಾಷ್ಟ್ರೀಯ ತಜ್ಞರ ಸಮಿತಿ(NEGVAC)ಯ ಶಿಫಾರಸ್ಸಿನ ಆಧಾರದ ಮೇಲೆ ರಾಷ್ಟ್ರೀಯ ಕೊರೊನಾವೈರಸ್ ಲಸಿಕೆ ಅಭಿಯಾನದಡಿ ನೀಡುವ ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವೆ 12 ರಿಂದ 16 ವಾರಗಳ ಅಂತರವನ್ನು ನಿಗದಿಗೊಳಿಸಲಾಗಿದೆ. ಒಂದು ಮತ್ತು ಎರಡನೇ ಡೋಸ್ ಲಸಿಕೆ ನಡುವೆ 84 ದಿನಗಳ ಅಂತರವನ್ನು ಕಾಪಾಡುವುದರಿಂದ ಕೊವಿಡ್-19 ವಿರುದ್ಧ ಲಸಿಕೆಯು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರಲಿದೆ ಎಂದು ತಾಂತ್ರಿಕ ಸಮಿತಿಯೂ ಸಹ ಸಲಹೆ ನೀಡಿದೆ," ಎಂದು ಅಫಿಡವಿಟ್ ನಲ್ಲಿ ಹೇಳಲಾಗಿದೆ.

ಅಂತರ ಹೆಚ್ಚಿಸುವುದರ ಹಿಂದೆ ವೈಜ್ಞಾನಿಕ ಆಧಾರ

ಅಂತರ ಹೆಚ್ಚಿಸುವುದರ ಹಿಂದೆ ವೈಜ್ಞಾನಿಕ ಆಧಾರ

ತೀರಾ ಅಗತ್ಯ ಸಂದರ್ಭಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣ ಬೆಳಸಲು ಇಚ್ಛೀಸುವವರ ಅನುಕೂಲಕ್ಕಾಗಿ 12 ರಿಂದ 16 ವಾರಗಳಲ್ಲಿ ನಿಗದಿತ ಅವಧಿಗೂ ಪೂರ್ವದಲ್ಲಿ ಎರಡೂ ಡೋಸ್ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಆದರೆ ವೈಜ್ಞಾನಿಕ ಆಧಾರದಲ್ಲಿ ನೋಡುವುದಾದರೆ ಎರಡು ಡೋಸ್ ಕೊವಿಶೀಲ್ಡ್ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದ್ದಲ್ಲಿ ನಡುವಿನ ಅಂತರ ಕನಿಷ್ಠ 12 ರಿಂದ 16 ವಾರ ಇರಬೇಕಾಗುತ್ತದೆ. ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ ಅಂತರವನ್ನು ವೈಜ್ಞಾನಿಕ ಕಾರಣ ಮತ್ತು ತಜ್ಞರ ಸಲಹೆಯೊಂದಿಗೆ ಸೂಕ್ತ ಅಂಕಿ-ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕಂಪನಿಯ ಅರ್ಜಿ ವಜಾಗೊಳಿಸುವಂತೆ ಸರ್ಕಾರದ ಮನವಿ

ಕಂಪನಿಯ ಅರ್ಜಿ ವಜಾಗೊಳಿಸುವಂತೆ ಸರ್ಕಾರದ ಮನವಿ

"ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಅರ್ಜಿದಾರರ ಯಾವುದೇ ಮೂಲಭೂತ ಅಥವಾ ಶಾಸನಬದ್ಧ ಹಕ್ಕುಗಳನ್ನು ಉಲ್ಲಂಘಿಸಿಲ್ಲ. ರಿಟ್ ಅರ್ಜಿಯಲ್ಲಿ ಅರ್ಜಿದಾರರು ಮುಂದಿಟ್ಟಿರುವ ಆಧಾರಗಳು ಕ್ಷುಲ್ಲಕ ಹಾಗೂ ಸಂಪೂರ್ಣ ಸುಳ್ಳಾಗಿವೆ. ಆದ್ದರಿಂದ ಅರ್ಜಿಯು ವಜಾಗೊಳಿಸಲು ಅರ್ಹವಾಗಿದೆ. ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾದ ಮತ್ತು ಅರ್ಹತೆಗಳಿಲ್ಲದ ಅರ್ಜಿಯನ್ನು ನ್ಯಾಯ ದೃಷ್ಟಿಯಿಂದ ವಜಾಗೊಳಿಸಬೇಕು," ಎಂದು ಕೇಂದ್ರ ಸರ್ಕಾರದ ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ.

English summary
Covishield 1st and 2nd Dose Distance: Kerala HC Order to allow for give vaccine after 4 Week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X