ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಿಂದ ಕೊರೊನಾ ರೋಗಿಗಳ ವೈಯಕ್ತಿಕ ಮಾಹಿತಿ ಸೋರಿಕೆ?

|
Google Oneindia Kannada News

ತಿರುವನಂತಪುರಂ, ಮೇ 06 : ದೇಶವೇ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ಮತ್ತೊಂದು ಕಡೆ ಕೊರೊನಾ ಸೋಂಕಿತರ ವೈಯಕ್ತಿಕ ಮಾಹಿತಿಯನ್ನು ಆಸ್ಪತ್ರೆಗಳು ಬಹಿರಂಗ ಪಡಿಸಿವೆ ಎಂಬ ದೂರು ಕೇಳಿ ಬಂದಿದೆ.

Recommended Video

ಕೊವಿಡ್ ಪರಿಹಾರದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ | Siddaramaiah | Oneindia Kannada

ಕೇರಳ ಹೈಕೋರ್ಟ್‌ಗೆ ಬುಧವಾರ ಅರ್ಜಿಯೊಂದು ಸಲ್ಲಿಕೆಯಾಗಿದೆ. ಕೊರೊನಾ ರೋಗಿಯ ವೈಯಕ್ತಿಕ ಮಾಹಿತಿಯನ್ನು ಆಸ್ಪತ್ರೆ ಸೋರಿಕೆ ಮಾಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದ್ದು, ಈ ಕುರಿತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ.

ಕೊರೊನಾ ಮುಕ್ತ ರಾಜ್ಯದತ್ತ ಕೇರಳ ಹೆಜ್ಜೆ, ಎಷ್ಟು ಕೇಸ್ ಸಕ್ರಿಯವಾಗಿದೆ?ಕೊರೊನಾ ಮುಕ್ತ ರಾಜ್ಯದತ್ತ ಕೇರಳ ಹೆಜ್ಜೆ, ಎಷ್ಟು ಕೇಸ್ ಸಕ್ರಿಯವಾಗಿದೆ?

ಹೈಕೋರ್ಟ್ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದೆ. ಮೇ 11ರಂದು ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದೆ. ದೇಶದ ಬೇರೆ ರಾಜ್ಯಗಳಲ್ಲಿಯೂ ಇಂತಹ ಪ್ರಕರಣಗಳು ನಡೆದಿರಬಹುದಾಗಿದೆ. ಹೈಕೋರ್ಟ್ ನೀಡುವ ಆದೇಶ ಕುತೂಹಲಕ್ಕೆ ಕಾರಣವಾಗಿದೆ.

19 ದಿನಗಳ ಚಿಕಿತ್ಸೆಯಿಂದ ಕೊರೊನಾ ವೈರಸ್ ಮಂಗಮಾಯ! 19 ದಿನಗಳ ಚಿಕಿತ್ಸೆಯಿಂದ ಕೊರೊನಾ ವೈರಸ್ ಮಂಗಮಾಯ!

COVID19 Patients Personal Details Leak By Hospitals Petition To Court

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಅನ್ವಯ ಕೋವಿಡ್ -19 ರೋಗಿಯ ಹೆಸರು, ವಿಳಾಸ, ಭಾವಚಿತ್ರ, ಮೊಬೈಲ್ ನಂಬರ್ ಸೇರಿದಂತೆ ಇತರ ಮಾಹಿತಿಯನ್ನು ಬಹಿರಂಗ ಮಾಡುವಂತಿಲ್ಲ. ಆದರೆ, ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೊರೊನಾ ವೈರಸ್‌ಗೆ ಲಸಿಕೆ ಸಿದ್ಧ: ಇಸ್ರೇಲ್ ಸಚಿವಾಲಯ ಘೋಷಣೆಕೊರೊನಾ ವೈರಸ್‌ಗೆ ಲಸಿಕೆ ಸಿದ್ಧ: ಇಸ್ರೇಲ್ ಸಚಿವಾಲಯ ಘೋಷಣೆ

ಒಬ್ಬ ವ್ಯಕ್ತಿಗೆ ಕೋವಿಡ್ - 19 ಸೋಂಕು ತಗುಲಿರುವುದು ಖಚಿತವಾದ ತಕ್ಷಣ ಅವರಿಗೆ ಒಂದು ನಂಬರ್ ನೀಡಲಾಗುತ್ತದೆ. ಆ ಪೇಷೆಂಟ್‌ ನಂಬರ್ ಅನ್ನು ಮಾತ್ರ ಎಲ್ಲಾ ಕಡೆ ನಮೂದಿಸಲಾಗುತ್ತದೆ. ಉಳಿದಂತೆ ಯಾವ ಮಾಹಿತಿಯನ್ನು ಬಹಿರಂಗ ಮಾಡುವಂತಿಲ್ಲ.

ಕೋವಿಡ್ - 19 ರೋಗಿಯನ್ನು ಆಸ್ಪತ್ರೆಯ ಪ್ರತ್ಯೇಕ ಐಸೋಲೇಷನ್ ವಾರ್ಡ್‌ನಲ್ಲಿ ಇಡಲಾಗುತ್ತದೆ. ರೋಗಿಯ ಟ್ರಾವೆಲ್ ಹಿಸ್ಟರಿ ಸೇರಿದಂತೆ ಅಗತ್ಯ ಮಾಹಿತಿಯನ್ನು ಆಸ್ಪತ್ರೆ ಕಲೆ ಹಾಕುತ್ತದೆ. ಆದರೆ, ಅದು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.

English summary
A petition has been moved in the Kerala high court alleging possible leak of personal details of COVID19 patients by hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X