ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ನಿರ್ವಹಣೆಯಲ್ಲಿ ಮತ್ತೆ ದೇಶಕ್ಕೆ ಮಾದರಿಯಾದ ಪಿಣರಾಯಿ ಸರಕಾರ

|
Google Oneindia Kannada News

ತಿರುವನಂತಪುರಂ, ಮೇ 13: ಕೊರೊನಾ ಮೊದಲನೇ ಅಲೆಯಿಂದಲೇ ತಮ್ಮದೇ ವಿಶಿಷ್ಟ ಕಾರ್ಯತಂತ್ರ/ಮಾರ್ಗಸೂಚಿಯಿಂದ ಸುದ್ದಿ ಮಾಡಿದ್ದ ಕೇರಳ, ಈಗ, ಲಸಿಕೆ ಬಳಕೆಯಲ್ಲೂ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ.

Recommended Video

ಮತ್ತೊಮ್ಮೆ ದೇಶಕ್ಕೆ ಮಾದರಿಯಾದ ಕೇರಳ ಸರ್ಕಾರ | Oneindia Kannada

ಕೆಲವು ದಿನಗಳ ಹಿಂದೆ ಲಸಿಕೆ ಸದ್ಬಳಕೆ ವಿಚಾರದಲ್ಲಿ ಪ್ರಧಾನಿ ಮೋದಿಯಿಂದ ಮೆಚ್ಚುಗೆ ಪಡೆದಿದ್ದ ಕೇರಳ ಸರಕಾರ, ಲಸಿಕೆ ಜೀರೋ ವೇಸ್ಟೇಜ್ ಮೂಲಕ ನಾಡಿಗೆ ಮಾದರಿಯಾಗಿದೆ.

ಸೀರಂನಿಂದ ನೇರವಾಗಿ ಕೋವಿಶೀಲ್ಡ್ ಖರೀದಿಸಿದ ಕೇರಳ, ಬಂತು 3.5 ಲಕ್ಷ ಕೊರೊನಾ ಲಸಿಕೆಸೀರಂನಿಂದ ನೇರವಾಗಿ ಕೋವಿಶೀಲ್ಡ್ ಖರೀದಿಸಿದ ಕೇರಳ, ಬಂತು 3.5 ಲಕ್ಷ ಕೊರೊನಾ ಲಸಿಕೆ

ಇಷ್ಟೇ ಅಲ್ಲದೇ, ರಾಜ್ಯಕ್ಕೆ ನಿಗದಿಯಾಗಿದ್ದ ಕೋಟಾದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾದ ಒಂದು ಲಕ್ಷ ರೆಮ್ಡಿಸಿವಿರ್ ಲಸಿಕೆಯನ್ನು ಕೇಂದ್ರ ಸರಕಾರಕ್ಕೆ ಹಿಂದಿರುಗಿಸಿದೆ. ಆ ಮೂಲಕ, ಲಸಿಕೆ ಅಭಾವವಿರುವ ರಾಜ್ಯಗಳಿಗೆ ಹೆಚ್ಚುವರಿಯಾಗಿ ಕೇರಳದ ಕೋಟಾದಿಂದ ಉಪಯೋಗವಾಗಲಿದೆ.

Covid 19, Kerala Leads By Example, Zero Wastage, Returned One Lac Vaccine To Center

"ಕೇರಳ ಸರಕಾರ ನಮ್ಮಲ್ಲಿ ಹೆಚ್ಚುವರಿಯಾಗಿ ಉಳಿದಿರುವ ಒಂದು ಲಕ್ಷ ಲಸಿಕೆಯನ್ನು ಕೇಂದ್ರ ಸರಕಾರಕ್ಕೆ ಹಿಂದಿರುಗಿಸಿದ್ದೇವೆ. ಆ ಮೂಲಕ, ಅಭಾವವಿರುವ ರಾಜ್ಯಗಳಿಗೆ ಇದರಿಂದ ಉಪಯೋಗವಾಗಲಿ" ಎಂದು ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ತಿಂಗಳ ಮೇ ಹದಿನಾರರವರೆಗೆ ಬೇಕಾಗುವಷ್ಟು ರೆಮ್ಡಿಸಿವಿರ್ ಲಸಿಕೆಯನ್ನು ಎಲ್ಲಾ ರಾಜ್ಯಗಳಿಗೆ ಹಂಚಲಾಗಿತ್ತು. ಏಪ್ರಿಲ್ 21-ಮೇ 16ರ ಅವಧಿಗೆ 53ಲಕ್ಷ ಲಸಿಕೆಯನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ಹಂಚಿತ್ತು.

ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಲಸಿಕೆಯ ಅಭಾವ ಕಾಡುತ್ತಿತ್ತು. ಜೊತೆಗೆ, ಕಾಳಸಂತೆಯಲ್ಲೂ ಇದು ಮಾರಾಟವಾಗಿತ್ತು. ಬೇರೆ ರಾಜ್ಯಗಳ ಪರಿಸ್ಥಿತಿ ಹೀಗಿರುವಾಗ, ಪಿಣರಾಯಿ ವಿಜಯನ್ ಸರಕಾರದ ಕಾರ್ಯವೈಖರಿ ಇತರರಿಗೂ ಮಾದರಿಯಾಗುವಂತದ್ದು.

English summary
Covid 19, Kerala Leads By Example, Zero Wastage, Returned One Lac Vaccine To Center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X