ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು; ಪರೀಕ್ಷೆಗೆ ಹೊಸ ಹೆಜ್ಜೆ ಇಟ್ಟ ಕೇರಳ ಸರ್ಕಾರ

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 07: ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಸೋಂಕಿತರ ಸ್ಯಾಂಪಲ್ ಸಂಗ್ರಹ ಮಾಡಲು ಸರ್ಕಾರ ಕೇಂದ್ರಗಳನ್ನು ತೆರೆದಿದೆ. ರಾಜ್ಯದಲ್ಲಿ ಸೋಂಕಿತ ಸಂಖ್ಯೆ 327.

Recommended Video

ಕುಟುಂಬವನ್ನು ನೆನೆದು ಕಣ್ಣೀರು ಹಾಕಿದ ಮಹಿಳಾ ಡಾಕ್ಟರ್ | Oneindia Kannada

ದಕ್ಷಿಣ ಕೋರಿಯಾ ಮಾದರಿಯಲ್ಲಿ ಕೊರೊನಾಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಸ್ಯಾಂಪಲ್ ಸಂಗ್ರಹ ಕೇಂದ್ರ ಆರಂಭಿಸಲಾಗಿದೆ. ಪ್ರಾಯೋಗಿಕವಾಗಿ ಎರ್ನಾಕುಲಂ ವೈದ್ಯಕೀಯ ಕಾಲೇಜಿನಲ್ಲಿ ಕೇಂದ್ರ ಆರಂಭವಾಗಿದ್ದು, ಜಿಲ್ಲೆಯಲ್ಲಿ ಇನ್ನೂ ಮೂರು ಕೇಂದ್ರ ಆರಂಭಿಸಲಾಗುತ್ತಿದೆ.

ಕೇರಳದಲ್ಲಿ ಕೊರೊನಾ ವಿರುದ್ಧ ಸೆಣಸಾಡಿ ಗೆದ್ದು ಬಂದ 93 ವರ್ಷದ ವ್ಯಕ್ತಿಕೇರಳದಲ್ಲಿ ಕೊರೊನಾ ವಿರುದ್ಧ ಸೆಣಸಾಡಿ ಗೆದ್ದು ಬಂದ 93 ವರ್ಷದ ವ್ಯಕ್ತಿ

ಗಾಜಿನಿಂದ ನಿರ್ಮಾಣವಾಗಿರುವ ಕೇಂದ್ರ ಇದಾಗಿದೆ. ಅದರಲ್ಲಿರುವ ಸಿಬ್ಬಂದಿ ಆಗಮಿಸಿದ ವ್ಯಕ್ತಿಯನ್ನು ಮುಟ್ಟದೇ ಕೇಂದ್ರದಿಂದಲೇ ಗಂಟಲು ದ್ರವವನ್ನು ಪಡೆಯುವಂತಹ ವ್ಯವಸ್ಥೆ ಮಾಡಲಾಗಿದೆ. ಸೋಂಕು ತಗುಲಿದೆ ಎಂದು ಶಂಕೆ ಇರುವ ವ್ಯಕ್ತಿ ಕೇಂದ್ರಕ್ಕೆ ತೆರಳಿ ಸ್ಯಾಂಪಲ್‌ಗಳನ್ನು ನೀಡಬಹುದಾಗಿದೆ.

Covid Sample Collection Kiosk At Kerala

ಎರ್ನಾಕುಲಂ ಜಿಲ್ಲಾಧಿಕಾರಿ ಎಸ್. ಸುಹಾಸ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಸ್ಯಾಂಪಲ್ ಸಂಗ್ರಹ ಮಾಡುವ 4 ಕೇಂದ್ರಗಳನ್ನು ಕೋವಿಡ್ -19 ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಆರಂಭಿಸಲಾಗುತ್ತಿದೆ. ಇದು ಸ್ಯಾಂಪಲ್ ಸಂಗ್ರಹ ಮಾಡುವ ಸುರಕ್ಷಿತ ವಿಧಾನವೂ ಆಗಿದೆ" ಎಂದು ಹೇಳಿದ್ದಾರೆ.

ಇಂತಹ ಕೇಂದ್ರಗಳಿಂದಾಗಿ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ಬಂದಾಗ ಗಂಟಲು ದ್ರವದ ಮಾದರಿ ಸಂಗ್ರಹ ಮಾಡಿದ ಬಳಿಕ ಪಿಪಿಇ ಕಿಟ್ ಬದಲಾವಣೆ ಮಾಡುವುದು ತಪ್ಪಲಿದೆ. ಈಗಾಗಲೇ ದೇಶದಲ್ಲಿ ಪಿಪಿಇ ಕಿಟ್‌ಗಳ ಕೊರತೆ ಇದೆ. ಈ ಪ್ರಯೋಗ ಯಶಸ್ವಿಯಾದರೆ ಕೇರಳದಲ್ಲಿ ಇನ್ನೂ ಹಲವು ಕೇಂದ್ರ ತೆರೆಯಲಾಗುತ್ತದೆ.

ಭಾರತದಲ್ಲಿ 24 ಗಂಟೆಗಳಲ್ಲಿ 704 ಕೊರೊನಾ ಸೋಂಕಿತ ಪ್ರಕರಣಭಾರತದಲ್ಲಿ 24 ಗಂಟೆಗಳಲ್ಲಿ 704 ಕೊರೊನಾ ಸೋಂಕಿತ ಪ್ರಕರಣ

ಒಂದು ಕೇಂದ್ರ ನಿರ್ಮಾಣ ಮಾಡಲು ಸುಮಾರು 40 ಸಾವಿರ ರೂ.ಗಳು ಬೇಕಾಗುತ್ತದೆ. ಒಂದು ಗಂಟೆಯಲ್ಲಿ 40 ರಿಂದ 50 ಸ್ಯಾಂಪಲ್‌ಗಳನ್ನು ಸಿಬ್ಬಂದಿ ಸಂಗ್ರಹ ಮಾಡಬಹುದಾಗಿದೆ. ಹೆಚ್ಚು ಕೊರೊನಾ ಪ್ರಕರಣ ದಾಖಲಾದ ಜಿಲ್ಲೆಗಳಲ್ಲಿ ಮೊದಲು ಸರ್ಕಾರ ಕೇಂದ್ರವನ್ನು ಆರಂಭಿಸಲಿದೆ.

English summary
Kerala government has set up a walk-in COVID-19 sample collection kiosk at Ernakulam medical college hospital. The model of the kiosk is based on South Korea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X