ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಯಾತ್ರೆಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

|
Google Oneindia Kannada News

ತಿರುವನಂತಪುರಂ, ಆಗಸ್ಟ್ 11 : ಈ ಬಾರಿ ಶಬರಿಮಲೆ ಯಾತ್ರೆ ಕೈಗೊಳ್ಳಲು ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಅವಶ್ಯಕವಾಗಿದೆ. ಭಕ್ತರು ಯಾತ್ರೆ ಕೈಗೊಳ್ಳಲು ಅವಕಾಶ ನೀಡಬೇಕೆ? ಎಂದು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

Recommended Video

KRS Mandya, ಆತಂಕದಲ್ಲಿ ಮಂಡ್ಯದ ಜನತೆ | Oneindia Kannada

ಕೇರಳ ದೇವಸ್ವಂ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಸೋಮವಾರ ಶಬರಿಮಲೆ ದೇವಾಲಯದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು. ನವೆಂಬರ್ 15 ರಿಂದ ಜನವರಿ 14ರ ತನಕ ನಡೆಯುವ ಈ ಬಾರಿಯ ಯಾತ್ರೆಯ ಸಂದರ್ಭದಲ್ಲಿ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಬರಿಮಲೆ ವಿಮಾನ ನಿಲ್ದಾಣಕ್ಕೆ ಕೇರಳ ಸರ್ಕಾರದ ಹಸಿರು ನಿಶಾನೆ ಶಬರಿಮಲೆ ವಿಮಾನ ನಿಲ್ದಾಣಕ್ಕೆ ಕೇರಳ ಸರ್ಕಾರದ ಹಸಿರು ನಿಶಾನೆ

ಭಕ್ತಾದಿಗಳ ಸುರಕ್ಷತೆ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಆನ್‌ಲೈನ್ ಕ್ಯೂ ಬುಕ್ಕಿಂಗ್ ಸಿಸ್ಟಮ್ ಮೂಲಕ ಭಕ್ತರ ಭೇಟಿಗೆ ಅವಕಾಶ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಶಬರಿಮಲೆ ಬಾಗಿಲು ತೆರೆಯಲ್ಲ; ಭಕ್ತರಿಗೆ ಇಲ್ಲ ಅಯ್ಯಪ್ಪನ ದರ್ಶನ ಶಬರಿಮಲೆ ಬಾಗಿಲು ತೆರೆಯಲ್ಲ; ಭಕ್ತರಿಗೆ ಇಲ್ಲ ಅಯ್ಯಪ್ಪನ ದರ್ಶನ

Covid Negative Certificate Mandatory For Sabarimala Yatra

ಕೋವಿಡ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಯಾತ್ರೆ ನಡೆಸಲು ಸಾಧ್ಯವಿಲ್ಲ. ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ದೇವಾಲಯ ಆಡಳಿತ ಮಂಡಳಿ ಸದಸ್ಯರು ಸಹ ಹಲವು ಸಲಹೆಗಳನ್ನು ನೀಡಿದರು.

ಶಬರಿಮಲೆ ವಿವಾದ: ವಕೀಲರ ಅಂಗಳಕ್ಕೆ ಚೆಂಡು ಎಸೆದ ಸುಪ್ರೀಂಕೋರ್ಟ್!ಶಬರಿಮಲೆ ವಿವಾದ: ವಕೀಲರ ಅಂಗಳಕ್ಕೆ ಚೆಂಡು ಎಸೆದ ಸುಪ್ರೀಂಕೋರ್ಟ್!

ದೇವಾಲಯದ ಆಡಳಿತ ಮಂಡಳಿ ಮುಖ್ಯಸ್ಥ ಎನ್. ವಾಸು ಅವರು, "ವಾರ್ಷಿಕ ಯಾತ್ರೆಯನ್ನು ಆರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಅಗತ್ಯ ವ್ಯವಸ್ಥೆಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ" ಎಂದು ಹೇಳಿದ್ದಾರೆ.

ಕೋವಿಡ್ ಭೀತಿ ಹಿನ್ನಲೆಯಲ್ಲಿ ಜೂನ್‌ ತಿಂಗಳಿನಲ್ಲಿ ತಿಂಗಳ ವಿಶೇಷ ಪೂಜೆ ವೇಳೆ ಭಕ್ತಾದಿಗಳ ಪ್ರವೇಶಕ್ಕೆ ಅವಕಾಶವನ್ನು ನೀಡಿರಲಿಲ್ಲ. ದೇವಾಲಯದ ಸಿಬ್ಬಂದಿಗಳು ಮಾತ್ರ ಪೂಜೆಗಳನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿತ್ತು.

English summary
Covid-19 negative certificate mandatory for pilgrims for Sabarimala yatra this year. Ayyappa temple yatra scheduled to be held from November 15 to January 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X