ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿ ಭಾಗದಲ್ಲಿ ಸಮುದಾಯಕ್ಕೆ ಹರಡಿದ ಕೋವಿಡ್ ಸೋಂಕು

|
Google Oneindia Kannada News

ತಿರುವನಂತಪುರಂ, ಜುಲೈ 17 : ಪುಲುವಿಲ್ಲಾ ಸೇರಿದಂತೆ ತಿರುವನಂತರಪುರದ ಕರಾವಳಿ ಭಾಗದಲ್ಲಿ ಕೊರೊನಾ ವೈರಸ್ ಸೋಂಕು ಸಮುದಾಯಕ್ಕೆ ಹಬ್ಬಿದೆ. ಕೇರಳ ರಾಜ್ಯದಲ್ಲಿ ಶುಕ್ರವಾರ 791 ಹೊಸ ಪ್ರಕರಣಗಳು ದಾಖಲಾಗಿವೆ.

ಕೇರಳದ ರಾಜಧಾನಿ ತಿರುವನಂತಪುರದ ಕರಾವಳಿ ತೀರದ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿರುವುದು ಶುಕ್ರವಾರ ಖಚಿತವಾಗಿದೆ. 532 ಪ್ರಕರಣಗಳು ಸ್ಥಳೀಯರಿಂದಲೇ ಹಬ್ಬಿರುವುದು ತಿಳಿದುಬಂದಿದೆ.

ಮಹಾರಾಷ್ಟ್ರ, ಕೇರಳ, ತಮಿಳುನಾಡು ಕೋವಿಡ್ ಕೇಸುಗಳ ವಿವರ ಮಹಾರಾಷ್ಟ್ರ, ಕೇರಳ, ತಮಿಳುನಾಡು ಕೋವಿಡ್ ಕೇಸುಗಳ ವಿವರ

ಶುಕ್ರವಾರ ರಾಜ್ಯದಲ್ಲಿ ದಾಖಲಾದ 791 ಪ್ರಕರಣಗಳಲ್ಲಿ 42 ಪ್ರಕರಣಗಳ ಮೂಲ ಪತ್ತೆಯೇ ಆಗಿಲ್ಲ. ಇಂದು ತ್ರಿಷುರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರ ಮೃತಪಟ್ಟಿದ್ದಾನೆ. ಒಟ್ಟು ಮೃತಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಹೊಸದಾಗಿ 3,693 ಕೊರೊನಾ ಸೋಂಕಿತರು ಪತ್ತೆ ಕರ್ನಾಟಕದಲ್ಲಿ ಹೊಸದಾಗಿ 3,693 ಕೊರೊನಾ ಸೋಂಕಿತರು ಪತ್ತೆ

Covid-19 Community Spread Thiruvananthapuram Coastal Areas

ತಿರುವನಂತಪುರದಲ್ಲಿ ಶುಕ್ರವಾರ 246 ಹೊಸ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 237 ಪ್ರಕರಣಗಳು ಸ್ಥಳೀಯವಾಗಿಯೇ ಹಬ್ಬಿವೆ. ರಾಜ್ಯದ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,515.

ಕೊರೊನಾ ಹೋರಾಟದಲ್ಲಿ ಕರ್ನಾಟಕ-ಕೇರಳ 'ಮಾದರಿ': ಬಿಎಸ್ವೈ-ಪಿಣರಾಯಿ 'ವಿಕ್ಟರಿ' ಕೊರೊನಾ ಹೋರಾಟದಲ್ಲಿ ಕರ್ನಾಟಕ-ಕೇರಳ 'ಮಾದರಿ': ಬಿಎಸ್ವೈ-ಪಿಣರಾಯಿ 'ವಿಕ್ಟರಿ'

ಪುಲುವಿಲ್ಲಾ ಸೇರಿದಂತೆ ಕರಾವಳಿ ಪ್ರದೇಶದ ಹಲವು ಗ್ರಾಮಗಳು ರಾಜಧಾನಿಗೆ ಹೊಂದಿಕೊಂಡಂತೆ ಇವೆ. ಈ ಪ್ರದೇಶಗಳಲ್ಲಿ ಕೋವಿಡ್ ಹರಡದಂತೆ ತಡೆಯಲು ಕಠಿಣ ಕಂಟೈನ್ಮೆಂಟ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಮಾತನಾಡಿದ್ದು, "ತಿರುವನಂತಪುರದ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಕೋವಿಡ್ - 19 ಪ್ರಕರಣಗಳು ದಾಖಲಾಗಿವೆ. ಪರಿಸ್ಥಿತಿಯನ್ನು ಅವಲೋಕನ ಮಾಡಿದ ಬಳಿಕ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ" ಎಂದು ಹೇಳಿದ್ದಾರೆ.

ಕರಾವಳಿ ಪ್ರದೇಶದಲ್ಲಿನ ಗ್ರಾಮಗಳನ್ನು ಮೂರು ಝೋನ್‌ಗಳಾಗಿ ವಿಂಗಡನೆ ಮಾಡಲಾಗುತ್ತಿದೆ. ಹಿರಿಯ ಅಧಿಕಾರಿಯನ್ನು ಪ್ರತಿ ಝೋನ್‌ಗೆ ಉಸ್ತುವಾರಿಯಾಗಿ ನೇಮಕ ಮಾಡಲಾಗುತ್ತದೆ.

English summary
Covid-19 community spread confirmed in the coastal areas of Thiruvananthapuram, Kerala. State capital reported 246 fresh cases on July 17, 2020 and 237 cases were due to local spread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X