ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯೊಳಗೇ ಸೋಂಕು ಹರಡುವಿಕೆ ಹೆಚ್ಚಾಗಿದೆ; ಆತಂಕ ವ್ಯಕ್ತಪಡಿಸಿದ ಕೇರಳ ಆರೋಗ್ಯ ಸಚಿವೆ

|
Google Oneindia Kannada News

ತಿರುವನಂತಪುರಂ, ಆಗಸ್ಟ್‌ 27: ಕೊರೊನಾ ಎರಡನೇ ಅಲೆ ಪ್ರಭಾವ ತಗ್ಗುತ್ತಿದ್ದಂತೆ ಬಹುಪಾಲು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಯಿತು. ಆದರೆ ಕೇರಳದಲ್ಲಿ ಮಾತ್ರ ಪ್ರಕರಣಗಳ ಸಂಖ್ಯೆ ತಗ್ಗಲೇ ಇಲ್ಲ. ಕೆಲ ದಿನಗಳಿಂದ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದರೂ, ಗುರುವಾರ ಏಕಾಏಕಿ ಸಂಖ್ಯೆ ಏರಿಕೆಯಾಗಿದೆ.

ದೇಶದಲ್ಲಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಕೇರಳದ ಪಾಲು ಅತಿ ಹೆಚ್ಚಿದೆ. ದೇಶದಲ್ಲಿ ಗುರುವಾರ 46,164 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈ ದಿನನಿತ್ಯದ ಕೊರೊನಾ ಪ್ರಕರಣದಲ್ಲಿ ಶೇಕಡಾ 68ರಷ್ಟು ಪ್ರಕರಣಗಳು ಕೇರಳದ್ದೇ ಆಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ. 46,164 ಪ್ರಕರಣಗಳಲ್ಲಿ ಕೇರಳ ಪ್ರಕರಣಗಳು 30,007 ಆಗಿವೆ.

Coronavirus Transmission Within Homes Increasing Says Kerala Health Minister

ಕೇರಳದಲ್ಲಿ ಕೊರೊನಾ ಏರಿಕೆ ಕುರಿತು ಮಾಹಿತಿ ನೀಡಿರುವ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, 'ರಾಜ್ಯದಲ್ಲಿ ಮನೆಯೊಳಗೇ ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚಾಗುತ್ತಿದೆ' ಎಂದಿದ್ದಾರೆ.

ಸದ್ಯಕ್ಕೆ ರಾಜ್ಯದ ಕೊರೊನಾ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ, ಕೊರೊನಾ ಸೋಂಕಿನ ಹರಡುವಿಕೆ ಮನೆಯೊಳಗೇ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಇಂಥ ಪ್ರಕರಣಗಳು ರಾಜ್ಯದಲ್ಲಿ ಅಧಿಕವಿದೆ ಎಂದಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಈ ಸಂಬಂಧ ಅಧ್ಯಯನ ನಡೆಸಿದ್ದು, ಈ ಮಾಹಿತಿ ಪ್ರಕಾರ 35% ಕೊರೊನಾ ಪ್ರಕರಣಗಳು ಮನೆಯ ಪರಿಧಿಯೊಳಗೇ ಹರಡಿದ್ದಾಗಿದೆ.

ಕೊರೊನಾ ಏಕಾಏಕಿ ಏರಿಕೆ; ಈ ಎರಡು ರಾಜ್ಯಗಳಿಗೆ ಕೇಂದ್ರದ ಸೂಚನೆಕೊರೊನಾ ಏಕಾಏಕಿ ಏರಿಕೆ; ಈ ಎರಡು ರಾಜ್ಯಗಳಿಗೆ ಕೇಂದ್ರದ ಸೂಚನೆ

'ಮನೆಯಲ್ಲಿನ ಒಬ್ಬ ಸದಸ್ಯರಿಗೆ ಸೋಂಕು ತಗುಲಿದರೆ, ಅದು ಮನೆಯಲ್ಲಿರುವ ಇತರೆ ಎಲ್ಲಾ ಸದಸ್ಯರಿಗೂ ಹರಡುತ್ತದೆ. ಜನರು ಹೋಂ ಕ್ವಾರಂಟೈನ್ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದು ಇದಕ್ಕೆ ಕಾರಣವಾಗಿದೆ. ಮನೆಯೊಳಗೆ ಎಲ್ಲಾ ಸೌಲಭ್ಯವಿದ್ದವರು ಮಾತ್ರ ಮನೆಯಲ್ಲಿ ಚಿಕಿತ್ಸೆ ಪಡೆದುಕೊಂಡರೆ ಸೂಕ್ತ. ಇಲ್ಲವೆಂದರೆ ಕೋವಿಡ್ ಕಾಳಜಿ ಕೇಂದ್ರಗಳಿಗೆ ದಾಖಲಾಗಿ' ಎಂದು ವೀಣಾ ಜಾರ್ಜ್ ಮನವಿ ಮಾಡಿದ್ದಾರೆ.

ಆರೋಗ್ಯ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಜನರಿಗೆ ಸಲಹೆ ನೀಡಿದ್ದಾರೆ. ಹೋಂ ಕ್ವಾರಂಟೈನ್‌ನಲ್ಲಿರುವವರು ಕೋಣೆಯಿಂದ ಹೊರಗೆ ಬರಲೇಬಾರದು. ಸೋಂಕಿತರಿರುವ ಮನೆಯಲ್ಲಿ ಎಲ್ಲರೂ ಮಾಸ್ಕ್‌ ಧರಿಸಿರಬೇಕು. ಸೋಂಕು ಹರಡದಂತೆ ರೂಪಿಸಿರುವ ನಿಯಮಗಳನ್ನು ಪಾಲಿಸಲೇಬೇಕು ಎಂದು ಹೇಳಿದ್ದಾರೆ.

ಕೊರೊನಾ ಸೋಂಕು ಹರಡದಂತೆ ಕೆಲವು ನಿರ್ದೇಶನಗಳ ಪಟ್ಟಿಯನ್ನು ಆರೋಗ್ಯ ಸಚಿವರು ಬಿಡುಗಡೆ ಮಾಡಿದ್ದಾರೆ.

Coronavirus Transmission Within Homes Increasing Says Kerala Health Minister

ಕೇರಳದಲ್ಲಿ ಶೇ 80ರಷ್ಟು ಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ
'ಕೇರಳದಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವುದಕ್ಕೆ ಹೆಚ್ಚು ಒತ್ತು ನೀಡಬೇಕು. ಒಬ್ಬ ಸೋಂಕಿತನ ಸಂಪರ್ಕದಲ್ಲಿರುವವರ ಪತ್ತೆಯಲ್ಲಿ ಕೇರಳ ತುಂಬಾ ಹಿಂದೆ ಉಳಿದಿದೆ. ಇದರ ಜೊತೆಗೆ ಕೇರಳದಲ್ಲಿ ಶೇ.80ರಷ್ಟು ಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿದ್ದು, ಅವರ ಬಗ್ಗೆ ಗಮನ ಹರಿಸುವುದು ಮುಖ್ಯ,' ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಗುರುವಾರ ಹೇಳಿದ್ದರು.

ದೇಶದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಕೊವಿಡ್-19 ಕೇಸ್ ದಾಖಲಿಸಿದ ಕೇರಳ!ದೇಶದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಕೊವಿಡ್-19 ಕೇಸ್ ದಾಖಲಿಸಿದ ಕೇರಳ!

ಸಮರ್ಪಕ ಕ್ರಮಕ್ಕೆ ಸೂಚಿಸಿರುವ ಕೇಂದ್ರ: ಗುರುವಾರ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗಿದ್ದು, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಸೋಂಕಿತರ ಸಂಪರ್ಕ ಪತ್ತೆ ಕಾರ್ಯ, ಲಸಿಕೆ ಹಾಗೂ ಕೊರೊನಾ ನಿಯಮಗಳ ಮೇಲೆ ಕಣ್ಣಿಡುವ ಮೂಲಕ ಕೊರೊನಾ ಹರಡುವಿಕೆ ತಡೆಯ ಪ್ರಯತ್ನಗಳನ್ನು ತೀವ್ರಗೊಳಿಸಬೇಕು ಎಂದು ಈ ರಾಜ್ಯಗಳಿಗೆ ಸೂಚಿಸಿದೆ.

ಸೋಂಕು ಹೆಚ್ಚಿರುವ ಭೌಗೋಳಿಕ ಪ್ರದೇಶಗಳಲ್ಲಿ ಸಮರ್ಪಕ ಕ್ರಮಗಳನ್ನು ತೆಗದುಕೊಳ್ಳುವ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ತಿಳಿಸಿದ್ದಾರೆ.

English summary
Latest statistics shows that the corona disease transmission within homes is increasing in state, says kerala health minister
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X