ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಕೊರೊನಾ ಜಾಗೃತಿ ವಿಡಿಯೋ ಹಂಚಿಕೊಂಡ ತರೂರ್

|
Google Oneindia Kannada News

ತಿರುವನಂತಪುರಂ, ಮಾರ್ಚ್ 17: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕೊರೊನಾವೈರಸ್ ಪೀಡಿತರನ್ನು ಸಂಭಾಳಿಸಿದ ರಾಜ್ಯ ಎನಿಸಿಕೊಂಡಿರುವ ಕೇರಳ ತನ್ನ ಜನತೆಗೆ ವಿಶಿಷ್ಟ ರೀತಿಯಲ್ಲಿ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

Recommended Video

Italy reports 3,590 more coronavirus cases, its biggest one-day increase

ಜಾಗತಿಕ ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ಹರಡುವುದನ್ನು ತಡೆಗಟ್ಟುವುದು, ಕೊವಿಡ್19 ಪೀಡಿತರ ಚಿಕಿತ್ಸೆ ಬಗ್ಗೆ ಕೇರಳ ಹೇಗೆ ಜಾಗೃತಿ ಮೂಡಿಸುತ್ತಿದೆ ಎಂಬುದನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

ಕೊರೊನಾವೈರಸ್ ಭೀತಿ ನಡುವೆ ಈ ಮೆಡಿಕಲ್ ಶಾಪ್‌ಗೆ ಹ್ಯಾಟ್ಸಾಫ್!ಕೊರೊನಾವೈರಸ್ ಭೀತಿ ನಡುವೆ ಈ ಮೆಡಿಕಲ್ ಶಾಪ್‌ಗೆ ಹ್ಯಾಟ್ಸಾಫ್!

ಕೇರಳದಲ್ಲಿ ಯಂತ್ರಮಾನವ(Robots) ಬಳಸಿ ಜನತೆಗೆ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿಡಿಯೋವೊಂದನ್ನು ಶಶಿ ತರೂರ್ ಹಂಚಿಕೊಂಡಿದ್ದಾರೆ.

Coronavirus: Robots in Kerala dispensing sanitisers, advices people how to prevent

ಆರಂಭದಿಂದಲೂ ಸೂಕ್ತ ಪರೀಕ್ಷೆ, ಜಾಗೃತಿ ಅಭಿಯಾನ, ರೋಗ ಪೀಡಿತರಿಗೆ ಚಿಕಿತ್ಸೆ ನೀಡುತ್ತಾ ಬಂದಿರುವ ಕೇರಳ ಮೊದಲ ಮೂವರು ಸೋಂಕಿತರು ಗುಣಮುಖರಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಒಂದೆಡೆ ಮಾಸ್ಕ್ ಗಳನ್ನು ಕೇವಲ 2 ರುಗೆ ಮಾರಾಟ ಮಾಡುವ ಮೂಲಕ ಕೊಚ್ಚಿಯ ಮೆಡಿಕಲ್ ಶಾಪ್ ನೆರವಾಗುತ್ತಿದೆ. ಇನ್ನೊಂದೆಡೆ ಮಧ್ಯಾಹ್ನದ ಬಿಸಿಯೂಟ ತಪ್ಪಿಸಿಕೊಂಡಿರುವ ವಿದ್ಯಾರ್ಥಿಗಳ ಮನೆಗೆ ಸರ್ಕಾರವೇ ಊಟ ಒದಗಿಸುತ್ತಿದೆ.

ವೈರಸ್ ಭೀತಿ: ಗೃಹಬಂಧನಕ್ಕೊಳಗಾದ ಕೇಂದ್ರ ಸಚಿವ ಮುರಳೀಧರನ್ವೈರಸ್ ಭೀತಿ: ಗೃಹಬಂಧನಕ್ಕೊಳಗಾದ ಕೇಂದ್ರ ಸಚಿವ ಮುರಳೀಧರನ್

ಪ್ರಸ್ತುತ ಕೇರಳದಲ್ಲಿ ಒಟ್ಟು 24 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಮೂರು ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟಾರೆ ಈ ಸೋಂಕು ತಗುಲಿದವರ ಸಂಖ್ಯೆ 126ಕ್ಕೆ ಏರಿಕೆ ಆಗಿದೆ. ಮಾರ್ಚ್ 17ರ ಈ ಸಮಯಕ್ಕೆ ಭಾರತದಲ್ಲಿ ಮೂವರು ಕೊವಿಡ್19ಕ್ಕೆ ಬಲಿಯಾಗಿದ್ದಾರೆ.

ಈ ನಡುವೆ ಕೊವಿಡ್ 19 ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಕ್ಲಿನಿಕಲ್ ಟ್ರಯಲ್ ಆರಂಭವಾಗಿದೆ ಎಂದು ಅಮೆರಿಕ ಘೋಷಿಸಿದೆ. ಕೊವಿಡ್ 19ಗೆ ಚುಚ್ಚುಮದ್ದು ಸಿಕ್ಕರೂ ಎಲ್ಲೆಡೆ ಲಭ್ಯವಾಗಲು ಇನ್ನೂ ಕೆಲ ತಿಂಗಳುಗಳು ಹಿಡಿಯಲಿದೆ.

ಕೊರೊನಾವೈರಸ್ ಹರಡದಂತೆ ಎಲ್ಲೆಡೆ ಸ್ವಚ್ಛತೆ ಅಭಿಯಾನ

ವಿಶ್ವದೆಲ್ಲೆಡೆ 182, 438 ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 7,157 ದಾಟಿದೆ. ಚೀನಾದಲ್ಲಿ 3213 ಮಂದಿ ಮೃತರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಇಟಲಿಯಲ್ಲಿ 2158 ಸಾವನ್ನಪ್ಪಿದ್ದಾರೆ.

English summary
An unique step taken in Kerala to curb the pandemic disease COVID-19 the world dealing with now. A video posted by Congress leader Shashi Tharoor shows robots dispensing sanitisers in a building in Kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X