ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ವೈನ್ ಸ್ಟೋರ್ ನಲ್ಲಿ ಕ್ವಾಟರ್ ಕೊಳ್ಳಲು ಅದೇನು ಶಿಸ್ತು, ಅದೆಂತಹ ಸಂಯಮ

|
Google Oneindia Kannada News

ಮಹಾರಾಷ್ಟ್ರ ನಂತರ ಅತಿಹೆಚ್ಚು ಕೊರೊನಾ ಸೋಂಕಿತರು ಇರುವುದು ಕೇರಳದಲ್ಲಿ. ಇತರ ರಾಜ್ಯಗಳಿಗೆ ಹೋಲಿಸಿದರೆ, ಮುಂಜಾಗೃತಾ ಕ್ರಮ ತೆಗೆದುಕೊಳ್ಳುವುದರಲ್ಲಿ ಕೇರಳ ಒಂದು ಹೆಜ್ಜೆ ಮುಂದೆ ಎಂದರೆ ತಪ್ಪಾಗಲಾರದು.

ಇತ್ತೀಚೆಗೆ ಒಂದು ವಿಡಿಯೋ ಸಾಮಾಜಿಕ ತಾಣದಲ್ಲಿ ಭರ್ಜರಿ ಸದ್ದು ಮಾಡಿತ್ತು. ಅದು, ಕೇರಳದ ಒಂದು ಊರಿನ ಬಸ್ಟ್ ಸ್ಟ್ಯಾಂಡ್ ನಲ್ಲಿ ಸ್ಯಾನಿಟೈಸರ್ ಅನ್ನು ಅಳವಡಿಸಲಾಗಿತ್ತು. ಬಸ್ಸಿನಿಂದ ಇಳಿಯುವವರು, ಬಸ್ಸಿಗೆ ಹತ್ತುವವರು ಇದನ್ನು ಬಳಸುವುದು ಕಡ್ಡಾಯ.

ಮಾರಣಾಂತಿಕ ಕೊರೊನಾ ವೈರಸ್: ಕೋಡಿಶ್ರೀಗಳ ಬಹುನಿರೀಕ್ಷಿತ ಭವಿಷ್ಯಮಾರಣಾಂತಿಕ ಕೊರೊನಾ ವೈರಸ್: ಕೋಡಿಶ್ರೀಗಳ ಬಹುನಿರೀಕ್ಷಿತ ಭವಿಷ್ಯ

ಕೇರಳದ ಬಹುತೇಕ ಪುರುಷ ಸಮುದಾಯ ಏನು ಬೇಕಾದರೂ ಬಿಟ್ಟಾರು, ಆದರೆ ಎಣ್ಣೆಯನ್ನು ಮಾತ್ರ ಬಿಡಲೊಲ್ಲರು. ಕೊರೊನಾ ಒಂದು ಸಾಂಕ್ರಾಮಿಕ ರೋಗವಾಗಿರುವುದರಿಂದ, ವೈನ್ ಸ್ಟೋರ್ ನಲ್ಲಿ ಒಂದು ನಿಯಮ ಪಾಲಿಸಿದರೆ ಮಾತ್ರ ಅಂಗಡಿ ಓಪನ್ ಮಾಡಲು ಅನುಮತಿ ನೀಡಲು ಅಲ್ಲಿನ ಸರಕಾರ ನಿರ್ಧರಿಸಿತ್ತು.

Coronavirus: People In Kerala, Maintaining Distance To Collect The Liquor

ಅದು, ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಂಡರೆ ಮಾತ್ರ ಮದ್ಯ ಸರಬರಾಜು ಮಾಡಲು ಅಲ್ಲಿನ ಅಬಕಾರಿ ಇಲಾಖೆ ನಿರ್ಧರಿಸಿತು. ಅದನ್ನು ರಾಜ್ಯದ ಎಲ್ಲಾ ಮದ್ಯದ ಅಂಗಡಿಗಳಿಗೆ ಆದೇಶವನ್ನು ಪಾಲಿಸುವಂತೆ ಸೂಚಿಸಿತು.

ಈ ಲೇಖನದಲ್ಲಿರುವುದು ಕೇರಳದ ಕಣ್ಣೂರು ಜಿಲ್ಲೆಯ, ತಲಸ್ಸೆರಿ ಪಟ್ಟಣದ ಫೋಟೋ. ಆರು ಅಡಿ ಅಂತರ ಕಾಯ್ದುಕೊಂಡು, ಜನ ಮದ್ಯ ಖರೀದಿಸುತ್ತಿದ್ದಾರೆ. ಈ ಫೋಟೋ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕೊರೊನಾ ವೈರಸ್ ಬಗ್ಗೆ ಭವಿಷ್ಯ: ಸೂರ್ಯಗ್ರಹಣದ ಪ್ರಭಾವ, ಇನ್ನೊಂದು ವಾರ ಕಷ್ಟಕಷ್ಟಕೊರೊನಾ ವೈರಸ್ ಬಗ್ಗೆ ಭವಿಷ್ಯ: ಸೂರ್ಯಗ್ರಹಣದ ಪ್ರಭಾವ, ಇನ್ನೊಂದು ವಾರ ಕಷ್ಟಕಷ್ಟ

ಕೊರೊನಾ ಊರೆಲ್ಲಾ ಸದ್ದು ಮಾಡುತ್ತಿದ್ದರೂ, ಆರೋಗ್ಯದ ದೃಷ್ಟಿಯನ್ನು ನೋಡಿಕೊಳ್ಲದೇ, ಇಂತಹ ಸಮಯದಲ್ಲೂ ಇವರಿಗೆ ಮದ್ಯ ಬೇಕಾ ಎಂದು ವ್ಯಂಗ್ಯವಾಡಲಾಗುತ್ತಿರುವುದು ಒಂದೆಡೆಯಾದರೆ, ಇವರ ಶಿಸ್ತು, ಸಂಯಮಕ್ಕೆ ಒಂದು ಸಲಾಂ, ಜೀವನದಲ್ಲೂ ಇದೇ ಶಿಸ್ತನ್ನು ಪಾಲಿಸಲಿ ಎಂದೂ ಅಣಕವಾಡಲಾಗುತ್ತಿದೆ.

ಇನ್ನು, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾದ ನಂತರ, ಕರ್ನಾಟಕದಲ್ಲಿ ಶನಿವಾರದಿಂದ (ಮಾರ್ಚ್ 21) ಮುಂದಿನ ಹತ್ತು ದಿನ ಬಾರ್ ಎಂಡ್ ರೆಸ್ಟೋರೆಂಟ್ ಇರುವುದಿಲ್ಲ. ಆದರೆ, ಪಾರ್ಸೆಲ್ ತೆಗೆದುಕೊಂಡು ಹೋಗುವವರು ಎಣ್ಣೆ ಸೇವನೆ ಮುಂದುವರಿಸಬಹುದು.

English summary
Coronavirus: People In Kerala, Maintaining Distance To Collect The Liquor
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X