ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್: ಕಾಡಿನಲ್ಲಿ 3ಕಿಮೀ ನಡೆದು ದಿನಸಿ ತಲುಪಿಸಿದ ಡಿಸಿ..!

|
Google Oneindia Kannada News

ತಿರುವನಂತಪುರಂ, ಮಾರ್ಚ್ 31: ಕೊರೊನಾ ಮಹಾಮಾರಿ ಎಬ್ಬಿಸಿರುವ ಸುಂಟರಗಾಳಿಗೆ ಜಗತ್ತಿನ ದೈನಂದಿನ ಜನ ಜೀವನವೇ ತತ್ತರಿಸಿ ಹೋಗಿದೆ. ಭಾರತದಲ್ಲೂ ಸೋಂಕು ಹರಡುವುದನ್ನು ತಡೆಗಟ್ಟಲು ಏಪ್ರೀಲ್ 14 ರವೆರೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

ಲಾಕ್‌ಡೌನ್ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೀವ್ರ ನಿಗಾ ವಹಿಸಿರುವುದರಿಂದ ಮನೆ ಇಲ್ಲದವರು, ನಿರ್ಗತಿಕರು, ಬಡವರು, ದಿನಗೂಲಿ ಕಾರ್ಮಿಕರು, ಹಳ್ಳಿಗರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ರೀತಿ ಕಳೆದ ಒಂದು ವಾರದಿಂದ ದಿನಸಿ ಹಾಗೂ ಅಗತ್ಯ ವಸ್ತುಗಳು ಸಿಗದೇ ಕೇರಳದ ಬುಡಕಟ್ಟು ಗ್ರಾಮವೊಂದರ ಜನ ಪರಿತಪಿಸುತ್ತಿದ್ದರು.

ತಂದೆ ಸಾವು; ಫೇಸ್‌ಬುಕ್ ಮೂಲಕ ಅಂತಿಮ ದರ್ಶನ ಪಡೆದ ಕೊರೊನಾ ರೋಗಿ!ತಂದೆ ಸಾವು; ಫೇಸ್‌ಬುಕ್ ಮೂಲಕ ಅಂತಿಮ ದರ್ಶನ ಪಡೆದ ಕೊರೊನಾ ರೋಗಿ!

ಈ ಸುದ್ದಿ ತಿಳಿದು ಪತ್ತನಂತಿಟ್ಟ ಜಿಲ್ಲಾಧಿಕಾರಿ ದಟ್ಟವಾದ ಕಾಡಿನಲ್ಲಿ 3 ಕಿಲೋ ಮೀಟರ್ ನಡೆದುಕೊಂಡು, ತಲೆ ಮೇಲೆ ದಿನಸಿಯನ್ನು ಹೊತ್ತು ಹೋಗಿ ಸಂಕಷ್ಟದಲ್ಲಿರುವರಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸಿ ಬಂದಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದೆ ಓದಿ...

ಪೆರಿಯಾರ್ ವನ್ಯಜೀವಿಧಾಮದಂಚಿನಲ್ಲಿ

ಪೆರಿಯಾರ್ ವನ್ಯಜೀವಿಧಾಮದಂಚಿನಲ್ಲಿ

ಕೇರಳದಲ್ಲಿಯೂ ಲಾಕ್‌ಡೌನ್ ಕಟ್ಟುನಿಟ್ಟಾಗಿ ಇರುವುದರಿಂದ ಪತ್ತನಂತಿಟ್ಟ ಜಿಲ್ಲೆಯ ಪೆರಿಯಾರ್ ವನ್ಯಜೀವಿಧಾಮದಂಚಿನಲ್ಲಿರುವ ಬುಡುಕಟ್ಟು ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಒಂದು ವಾರದಿಂದ ಆಹಾರ ಸಾಮಗ್ರಿ ಇಲ್ಲದೇ ಪರದಾಡುತ್ತಿದ್ದ ಈ ಬುಡಕಟ್ಟು ಜನಕ್ಕೆ ಕೊನ್ನಿ ಕ್ಷೇತ್ರದ ಶಾಸಕ ಕೆ ಯು ಜಾನಿಶ್ ಹಾಗೂ ಪತ್ತನಂತಿಟ್ಟ ಜಿಲ್ಲಾಧಿಕಾರಿ ಪಿ ಬಿ ನೂಹ್ ಅವರು ಮೂರು ಕಿಲೋ ಮೀಟರ್ ಕಾಡಿನಲ್ಲಿ ನಡೆದುಕೊಂಡೇ ಹೋಗಿ ಆಹಾರ ಸಾಮಗ್ರಿಗಳನ್ನು ತಲುಪಿಸಿ ಬಂದಿದ್ದಾರೆ.

37 ಕುಟುಂಬಗಳಿಗೆ ದಿನಸಿ

37 ಕುಟುಂಬಗಳಿಗೆ ದಿನಸಿ

ಪತ್ತನಂತಿಟ್ಟ ಜಿಲ್ಲಾಧಿಕಾರಿ ಪಿ ಬಿ ನೂಹ್ ಹಾಗೂ ಕೊನ್ನಿ ಕ್ಷೇತ್ರದ ಶಾಸಕ ಕೆ ಯು ಜಾನಿಶ್ ಅವರು ಮೂರು ಕಿಲೋ ಮೀಟರ್ ಕಾಡಿನಲ್ಲಿ ನಡೆದುಕೊಂಡೇ ಹೋಗಿ ಆಹಾರ ಸಾಮಗ್ರಿಗಳನ್ನು ತಲುಪಿಸಿ ಬಂದಿರುವುದು ಕೇರಳದಾದ್ಯಂತ ವ್ಯಾಪಕ ಜನ ಮನ್ನಣೆಗೆ ಒಳಗಾಗಿದೆ. 37 ಕುಟುಂಬಗಳಿಗೆ ದಿನಸಿ ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳನ್ನು ತಲುಪಿಸಿ, ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಬಂದಿದ್ದಾರೆ.

ಕೊರೊನಾ ಬಗ್ಗೆ ಜಾಗೃತಿ

ಕೊರೊನಾ ಬಗ್ಗೆ ಜಾಗೃತಿ

ದೇಶದಲ್ಲಿ ಲಾಕ್‌ಡೌನ್ ಜಾರಿ ಇರುವುದರಿಂದ ಯಾರೂ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಪೊಲೀಸರು ಎಚ್ಚರಿಸುತ್ತಿದ್ದಾರೆ. ಇದರಿಂದ ಜನ ಹೊರಗೆ ಬರಲಾರದಂತೆ ನೋಡಿಕೊಳ್ಳುವುದೇ ಪೊಲೀಸರಿಗೆ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿದೆ. ಪರಿಸ್ಥಿತಿ ಹೀಗಿರುವಾಗ ಸಂಕಷ್ಟದಲ್ಲಿರುವ ಜನತೆಗೆ ಕಾಡಿನಲ್ಲಿ ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗಿ ಜಿಲ್ಲಾಧಿಕಾರಿ ಹಾಗೂ ಶಾಸಕ ಮಾಡಿರುವ ಕೆಲಸ ಇತರೆ ಅಧಿಕಾರಿಗಳನ್ನು ಕಣ್ತೆರಿಸುವಂತೆ ಮಾಡಿದೆ.

200 ಕ್ಕೂ ಹೆಚ್ಚು ಜನರಿಗೆ ಸೋಂಕು

200 ಕ್ಕೂ ಹೆಚ್ಚು ಜನರಿಗೆ ಸೋಂಕು

ಕೇರಳದಲ್ಲಿಯೂ ಕೂಡ ಕೊರೊನಾ ಮಾಹಾಮರಿ ತೀವ್ರ ತಲ್ಲಣ ಹುಟ್ಟಿಹಾಕಿದೆ. ಮಂಗಳವಾರದ ಅಂತ್ಯಕ್ಕೆ 200 ಕ್ಕೂ ಹೆಚ್ಚು ಜನರಿಗೆ ಕೇರಳದಲ್ಲಿ ಕೊರೊನಾ ಸೋಂಕು ಹರಡಿದೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಕೇರಳ ಸರ್ಕಾರ ಸೋಂಕು ಹರಡುವುದನ್ನು ತಡೆಯಲು ತೀವ್ರ ಹೆಣಗಾಡುತ್ತಿದೆ.

English summary
Kerala MLA and collector trek 3 kms to reach 37 tribal families with food, essentials
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X