ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಕೇರಳದಲ್ಲಿ ಒಂದೇ ದಿನದಲ್ಲಿ ದಾಖಲಾಯಿತು ಅತಿ ಹೆಚ್ಚು ಪ್ರಕರಣ

|
Google Oneindia Kannada News

ತಿರುವನಂತಪುರಂ, ಮೇ 22: ಕೊರೊನಾ ವೈರಸ್ ಹತ್ತಿಕ್ಕುವಲ್ಲಿ ಸಫಲವಾಗಿದ್ದ ಕೇರಳಕ್ಕೆ ಇಂದು ಬಹುದೊಡ್ಡ ಆಘಾತವಾಗಿದೆ. ಆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರ ಸಂಖ್ಯೆ ಕಂಡು ಬಂದಿದೆ.

ರಾಜ್ಯದ ವೈದ್ಯಕೀಯ ಇಲಾಖೆ ಮಾಹಿತಿ ಪ್ರಕಾರ ಶುಕ್ರವಾರ ಒಂದೇ ದಿನ 42 ಜನರಿಗೆ ಮಾರಕ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.

ಕೇರಳ: 24 ಹೊಸ ಕೋವಿಡ್ 19 ಕೇಸ್, 28 ಹಾಟ್ ಸ್ಪಾಟ್ಕೇರಳ: 24 ಹೊಸ ಕೋವಿಡ್ 19 ಕೇಸ್, 28 ಹಾಟ್ ಸ್ಪಾಟ್

ಕಣ್ಣೂರಿನಲ್ಲಿ, ಕಾಸರ್‌ಗೋಡ್ ತಲಾ 7, ಕೋಳಿಕ್ಕೋಡ 5, ಪಾಲಕ್ಕಾಡ್ 5, ತ್ರಿಶೂರ್ 4, ಮಲಪ್ಪುರಂ 4, ಕೊಟ್ಟಾಯಂ 2, ಕೊಲ್ಲಂ, ಪಥನಮಿತ್ತ ಮತ್ತು ವಯನಾಡ್ 7. ಅವರಲ್ಲಿ 21 ಮಂದಿ ಮಹಾರಾಷ್ಟ್ರದಿಂದ ಬಂದವರು. 17 ಮಂದಿ ವಿದೇಶದಿಂದ ಬಂದವರಾಗಿದ್ದಾರೆ. 4 ಜನ ಮೊದಲು ರಾಜ್ಯದಲ್ಲಿ ಕಂಡು ಬಂದಿದ್ದ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿಸಿಕೊಂಡಿದ್ದಾರೆ.

Covid19 In Kerala: 42 New Covid Posotive Cases In Kerala State

ಇವರೆಗೆ ಕೇರಳದಲ್ಲಿ 738 ಜನರಿಗೆ ಕೊರೊನಾ ರೋಗ ಪತ್ತೆಯಾಗಿದೆ. ರಾಜ್ಯದಲ್ಲಿ 84258 ಜನ ನಿಗಾವಣೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು 609 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿರುವುದಕ್ಕೆ ಜನ ಭಯಭೀತರಾಗಬೇಡಿ. ಕೊರೊನಾ ಎದುರಿಸಲು ರಾಜ್ಯ ಸಮರ್ಥವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

English summary
Covid19 In Kerala: 42 New Covid Posotive Cases In Kerala State. this highest case register in single day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X