ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ದೇಶದಲ್ಲಿ ಮೊದಲ ಫಲಿತಾಂಶ ನೆಗೆಟಿವ್, ಬದುಕು ಪಾಸಿಟಿವ್

|
Google Oneindia Kannada News

ತಿರುವನಂತಪುರಂ, ಫೆಬ್ರವರಿ.10: ಮರಣದ ಮನೆಯಿಂದ ಭಾರತಕ್ಕೆ ಬಂದಿದ್ದ ಮಹಿಳೆಯ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿದೆ. ಕೊರೊನಾ ವೈರಸ್ ಸುಳಿಯಲ್ಲಿ ಸಿಲುಕಿದ್ದ ಮೂವರು ಭಾರತೀಯರಲ್ಲಿ ಒಬ್ಬ ಮಹಿಳೆ ಬಚಾವ್ ಆಗಿದ್ದಾಳೆ.

ಚೀನಾದ ವುಹಾನ್ ನಗರದ ಮೂಲಕ ಕೇರಳಕ್ಕೆ ಆಗಮಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮೊದಲ ಬಾರಿಗೆ ಕೊರೊನಾ ವೈರಸ್ ಪರೀಕ್ಷೆಗೊಳಪಡಿಸಿದಾಗ ಫಲಿತಾಂಶವು ಪಾಸಿಟಿವ್ ಆಗಿತ್ತು. ಬಳಿಕ ನಿರಂತರ ಚಿಕಿತ್ಸೆಯ ನಂತರದಲ್ಲಿ ಸೋಮವಾರ ಮರುಪರೀಕ್ಷೆ ನಡೆಸಿದಾಗ ಕೊರೊನಾ ವೈರಸ್ ನೆಗೆಟಿವ್ ಎಂದು ಫಲಿತಾಂಶ ಬಂದಿದೆ.

CoronaVirus:ಚೀನಾದಲ್ಲಿ ಹುಟ್ಟಿದ ಸೋಂಕು ವಿಶ್ವಕ್ಕೆ ಹರಡಿದ್ದು ಹೇಗೆ? CoronaVirus:ಚೀನಾದಲ್ಲಿ ಹುಟ್ಟಿದ ಸೋಂಕು ವಿಶ್ವಕ್ಕೆ ಹರಡಿದ್ದು ಹೇಗೆ?

ಕೇರಳ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 34ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದ ಅನುಮಾನದ ಮೇಲೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Coronavirus: First Positive Case In Kerala Comes Out Negative

ರಕ್ತ ಪರೀಕ್ಷೆ ವೇಳೆ ನೆಗೆಟಿವ್ ಫಲಿತಾಂಶ:

ಥ್ರಿಸ್ಸುರಾ ಮೂಲದ ಮಹಿಳೆಗೆ ಕೊರೊನಾ ವೈರಸ್ ಸೋಂಕಿರುವ ಶಂಕೆ ಹಿನ್ನೆಲೆಯಲ್ಲಿ ರಕ್ತದ ಮಾದರಿಯನ್ನು ಅಲಪ್ಪುಜಾದಲ್ಲಿ ಇರುವ ರೋಗಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಕೇಂದ್ರ(NIV)ಕ್ಕೆ ಕಳುಹಿಸಿ ಕೊಡಲಾಗಿತ್ತು. ಈ ವೇಳೆ ಫಲಿತಾಂಶವು ನೆಗೆಟಿವ್ ಎಂದು ಬಂದಿದ್ದು, ಪುಣೆಯಲ್ಲಿರುವ NIV ಕೇಂದ್ರ ಕಚೇರಿಯಿಂದ ಸ್ಪಷ್ಟನೆ ಸಿಗಬೇಕಿದೆಯಷ್ಟೇ ಎಂದು ಕೇರಳ ಆರೋಗ್ಯ ಇಲಾಖೆ ತಿಳಿಸಿದೆ.

ಕೇರಳದಾದ್ಯಂತ 3,252 ಜನರಿಗೆ ತುರ್ತು ನಿಗಾ ಘಟಕದಲ್ಲಿರಿಸಿ ಪರೀಕ್ಷೆ ನಡೆಸಲಾಗುತ್ತಿದ್ದು, 3,218 ಜನರನ್ನು ಗೃಹಬಂಧನದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೇರಳದಿಂದ ಪುಣೆಯ ಎನ್ಐವಿ ಕೇಂದ್ರಕ್ಕೆ 345 ಜನರ ರಕ್ತದ ಮಾದರಿಯನ್ನು ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಗಿದೆ ಎಂದು ಕೇರಳ ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.

English summary
Coronavirus: First Positive Case In Kerala Comes Out Negative After Treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X