• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕೊರೊನಾ' ಈಗ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ!

|

ತಿರುವನಂತಪುರಂ, ನವೆಂಬರ್ 19: ಈ ಕೊರೊನಾ ಹಾವಳಿ ಯಾವಾಗ ಮುಗಿಯುತ್ತದೆಯೋ ಎಂದು ಎಲ್ಲರೂ ಕಾದು ಚಡಪಡಿಸುತ್ತಿದ್ದಾರೆ. ಕೊರೊನಾ ವೈರಸ್ ಬಂದ ಆರಂಭದಲ್ಲಿ ಕೇಂದ್ರ ಸಚಿವರು ಸೇರಿದಂತೆ ಅನೇಕರು 'ಗೋ ಕರೋನಾ' ಎಂದು ಘೋಷಣೆ ಕೂಗಿದ್ದು ನೆನಪಿರಬಹುದು. ಆದರೆ ಈಗ ಅನೇಕರು 'ಕೊರೊನಾಗೆ ಜೈ' ಎಂದು ಘೋಷಣೆ ಕೂಗುತ್ತಿದ್ದಾರೆ. ಕೊರೊನಾ ಸೋಂಕನ್ನೇ ಬಂಡವಾಳವನ್ನಾಗಿಸಿಕೊಂಡು ಅನೇಕರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಜೈಕಾರ ಹಾಕುತ್ತಿದ್ದಾರೆ ಎಂದು ನೀವು ಭಾವಿಸಿದ್ದರೆ ತಪ್ಪು.

ಕೇರಳದ ದಕ್ಷಿಣ ಕೊಲ್ಲಂನಲ್ಲಿ 'ಕೊರೊನಾಗೆ ಜೈ' ಎಂಬ ಘೋಷಣೆ ಕೇಳಿಬರುತ್ತಿದೆ. ಕೊಲ್ಲಂ ಪಾಲಿಕೆಯ ಚುನಾವಣೆಯ ಮಥಿಲಿಲ್ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಹೆಸರು ಕೊರೊನಾ ಥಾಮಸ್!

GHMC ಚುನಾವಣೆ: ಡಾ.ಕೆ.ಸುಧಾಕರ್‌ಗೆ 4 ಅಸೆಂಬ್ಲಿಗಳ ಹೊಣೆ

ಕೊರೊನಾ ಥಾಮಸ್ ಹೆಸರು ವಿಚಿತ್ರವಾಗಿ ಕಾಣಿಸಬಹುದು. ಆದರೆ ಕೊರೊನಾ ವೈರಸ್, ಕೊರೊನಾ ಥಾಮಸ್ ಅವರ ಸ್ನೇಹಿಯಲ್ಲ. ಈ ವೈರಸ್ ಕೊರೊನಾ ಥಾಮಸ್ ಅವರನ್ನೂ ಕಾಡಿತ್ತು. ಕೋವಿಡ್ ಸೋಂಕಿನ ನಡುವೆಯೇ 24 ವರ್ಷದ ಕೊರೊನಾ ಥಾಮಸ್ ಅಕ್ಟೋಬರ್‌ನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲಿಂದ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ.

ಹೈದರಾಬಾದ್ ಪಾಲಿಕೆ ಚುನಾವಣೆಗೆ ಪವನ್ ಕಲ್ಯಾಣ್ ಪಕ್ಷ ಎಂಟ್ರಿ

ತಾಯಿ ಮತ್ತು ನವಜಾತ ಶಿಶು ಇಬ್ಬರೂ ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅದರ ನಡುವೆಯೇ ಅವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಸವಾಲು ಎದುರಾಗಿದೆ. ಬಿಜೆಪಿ ಪರ ಒಲವು ಹೊಂದಿರುವ ಕುಟುಂಬದ ಜಿನು ಸುರೇಶ್ ಅವರನ್ನು ಮದುವೆಯಾದ ಕೊರೊನಾ ಥಾಮಸ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಪತಿಯೇ ಸ್ಫೂರ್ತಿಯಾಗಿದ್ದಾರೆ. ಮುಂದೆ ಓದಿ.

24 ವರ್ಷದ ಹಿಂದೆ ಹೀಗಿರಲಿಲ್ಲ

24 ವರ್ಷದ ಹಿಂದೆ ಹೀಗಿರಲಿಲ್ಲ

ಕೊರೊನಾ ಥಾಮಸ್ ಅವರ ಹೆಸರು ಕಂಡಾಗ ಜನರು ಅವರತ್ತ ವಿಚಿತ್ರ ನೋಟ ಹರಿಸುತ್ತಿದ್ದಾರೆ. ಈ ಹಿಂದೆ 24 ವರ್ಷಗಳಲ್ಲಿ ಅವರಿಗೆ ಈ ರೀತಿ ಅನುಭವ ಆಗುತ್ತಿರಲಿಲ್ಲ. ಏಕೆಂದರೆ ಕೊರೊನಾ ಎಂಬ ವೈರಸ್ ಪ್ರಸಿದ್ಧವಾಗಿದ್ದು ಇತ್ತೀಚಿನ ದಿನಗಳಲ್ಲಿ. ಆದರೆ ಅವರ ತಂದೆ ಎರಡು ದಶಕದ ಹಿಂದೆಯೇ ಅವರಿಗೆ ಈ ಹೆಸರು ನೀಡಿದ್ದರು. ಈಗ ಜನರು ತಮ್ಮಲ್ಲಿ ಒಬ್ಬರು ಎಂದು ಒಪ್ಪಿಕೊಂಡಿದ್ದಾರೆ. ಅದು ಮತಪತ್ರಗಳಲ್ಲಿಯೂ ಕಾಣಿಸಲಿದೆ ಎಂಬ ವಿಶ್ವಾಸ ಕೊರೊನಾ ಥಾಮಸ್ ಅವರದು.

ವಿಶಿಷ್ಟ ಹೆಸರು ನೀಡಿದ್ದ ತಂದೆ

ವಿಶಿಷ್ಟ ಹೆಸರು ನೀಡಿದ್ದ ತಂದೆ

ವೃತ್ತಿಯಿಂದ ಕಲಾವಿದರಾದ ತಂದೆ ಥಾಮಸ್ ಮ್ಯಾಥ್ಯೂ ಅವರು ತಮ್ಮ ಅವಳಿ ಮಕ್ಕಳಿಗೆ ಕೊರೊಲ್ ಮತ್ತು ಕೊರೊನಾ ಎಂದು ಹೆಸರು ಇರಿಸಿದ್ದರು. ಅವರ ಅವಳಿ ಸಹೋದರ ಕೊರೊಲ್ ಮ್ಯಾಥ್ಯೂ ಅವರಿಗಿಂತ 20 ನಿಮಿಷ ದೊಡ್ಡವರು. ಇಬ್ಬರು ಮಕ್ಕಳಿಗೂ ವಿಭಿನ್ನ ಹೆಸರು ಇಡಲು ಬಯಸಿದ್ದ ಮ್ಯಾಥ್ಯೂ ಅವರು ಕೊರೊಲ್ ಮತ್ತು ಕೊರೊನಾ ಎಂಬ ಹೆಸರುಗಳನ್ನು ಆಯ್ದುಕೊಂಡಿದ್ದರು.

'ಇಷ್ಟು ವರ್ಷ ನನ್ನಹೆಸರಿನಿಂದ ನನಗೆ ಯಾವ ಸಮಸ್ಯೆಯೂ ಆಗಿರಲಿಲ್ಲ. ಆದರೆ ಈಗ ಜನರು ನನ್ನ ಕಡೆಗೆ ಕುತೂಹಲದಿಂದ ನೋಡುತ್ತಾರೆ. ನಾನು ಮುಕ್ತವಾಗಿ ಮಾತನಾಡಲು ಆರಂಭಿಸಿದ ಬಳಿಕ ಅವರಿಗೂ ಅರ್ಥವಾಗುತ್ತಿದೆ' ಎಂದಿದ್ದಾರೆ ಕೊರೊನಾ.

ಮನೆಯವರ ವಿರೋಧವಿತ್ತು

ಮನೆಯವರ ವಿರೋಧವಿತ್ತು

ವೈರಸ್ ವಿರುದ್ಧದ ಮೊದಲ ಸುತ್ತಿನ ಹೋರಾಟದಲ್ಲಿ ಗೆಲುವು ಕಂಡ ಕೊರೊನಾ, ಈಗ ಚುನಾವಣಾ ರಂಗದ ಹೋರಾಟಕ್ಕೆ ಧುಮುಕಿದ್ದಾರೆ. ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಅವರ ವಿವಾಹಕ್ಕೆ ಮನೆಯವರ ವಿರೋಧವಿತ್ತು. ವೃತ್ತಿಯಿಂದ ಪೇಂಟರ್ ಆಗಿರುವ ಜಿನು ಸುರೇಶ್ ಬೇರೆ ಸಮುದಾಯಕ್ಕೆ ಸೇರಿದವರು ಎಂಬ ಆಕ್ಷೇಪ ಇತ್ತು. ಈಗ ಎಲ್ಲವೂ ಸರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

  ಭಾರತಕ್ಕೇ ಗಡಿಪಾರು ಮಾಡ್ತಾರಾ!! | Oneindia Kannada
  ಎಡಪಕ್ಷಗಳದ್ದೇ ಆಡಳಿತ

  ಎಡಪಕ್ಷಗಳದ್ದೇ ಆಡಳಿತ

  ಆಸಕ್ತಿಕರ ಸಂಗತಿಯೆಂದರೆ ಕೊಲ್ಲಂ ಪಾಲಿಕೆಯು ಎಡಪಕ್ಷಗಳ ಪ್ರಾಬಲ್ಯದಲ್ಲಿದೆ. ಅದು ರಚನೆಯಾದ 20 ವರ್ಷಗಳಿಂದಲೂ ಎಡಪಕ್ಷಗಳೇ ಪಾಲಿಕೆ ಆಡಳಿತ ನಡೆಸುತ್ತಿವೆ. ಆದರೆ ಈ ಬಾರಿ ಬೇರೆ ಪಕ್ಷಗಳೂ ಇಲ್ಲಿ ಹಿಡಿತ ಪಡೆದುಕೊಳ್ಳುವ ಸೂಚನೆ ಕಾಣಿಸುತ್ತಿದೆ. ರಾಜಕೀಯ ಎಂದರೆ ಆಗೊಲ್ಲ ಎನ್ನುತ್ತಿದ್ದ ಕೊರೊನಾ ಥಾಮಸ್, ಬಿಜೆಪಿ ಕಾರ್ಯಕರ್ತರಾಗಿರುವ ಪತಿಯ ಒತ್ತಾಸೆಯಂತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಈ ವಾರ್ಡ್‌ನಲ್ಲಿ ಎರಡನೆಯ ಸ್ಥಾನ ಪಡೆದಿತ್ತು. ಈ ಬಾರಿ ಸ್ಪರ್ಧಿಸಿಸುವ ಯುವ ಮುಖ ಕೊರೊನಾ ಅವರಿಗೆ ಜನರು ಅವಕಾಶ ನೀಡುತ್ತಾರೆ ಎಂಬ ಭರವಸೆ ಇದೆ.

  English summary
  Corona Thomas is the BJP candidate in Kerala's Kollam corporation's Mathilil Ward.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X