ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ಹೆಚ್ಚಳ: ಕೇರಳದಲ್ಲಿ ವಾರಾಂತ್ಯ ಸಂಪೂರ್ಣ ಲಾಕ್‌ಡೌನ್

|
Google Oneindia Kannada News

ತಿರುವನಂತಪುರಂ, ಜು.29: ಕೇರಳದಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳಲ್ಲಿ ಆತಂಕಕಾರಿಯಾದ ಹೆಚ್ಚಳ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ವಾರದಿಂದ ವಾರಾಂತ್ಯದ ಲಾಕ್‌ಡೌನ್ ಅನ್ನು ಸರ್ಕಾರ ವಿಸ್ತರಿಸಿದೆ.

ದೇಶಾದ್ಯಂತ ಎರಡನೇ ಕೋವಿಡ್‌ ಅಲೆಯ ಒಟ್ಟಾರೆ ಕೋವಿಡ್ ಪ್ರಕರಣಗಳು ವೇಗವಾಗಿ ಕುಸಿಯುತ್ತಿರುವಾಗ ದಕ್ಷಿಣ ರಾಜ್ಯದಲ್ಲಿ ಕಳೆದ ಹಲವು ವಾರಗಳಿಂದ ಹೆಚ್ಚಿನ ಸಂಖ್ಯೆಯ ಕೋವಿಡ್‌ ಸೋಂಕು ಪ್ರಕರಣಗಳನ್ನು ವರದಿ ಮಾಡುತ್ತಿದೆ.

ಕೇರಳದಲ್ಲಿ ಕೋವಿಡ್ ಪರಿಸ್ಥಿತಿ ಕೈ ಮೀರಿದೆಯೇ, ಸರ್ಕಾರದ ತಜ್ಞರು ಹೇಳಿದ್ದೇನು?ಕೇರಳದಲ್ಲಿ ಕೋವಿಡ್ ಪರಿಸ್ಥಿತಿ ಕೈ ಮೀರಿದೆಯೇ, ಸರ್ಕಾರದ ತಜ್ಞರು ಹೇಳಿದ್ದೇನು?

ಆರೋಗ್ಯ ಸಚಿವಾಲಯವು ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ ಒಂದು ದಿನದ ನಂತರ, ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ರಾಜ್ಯದ ಕೋವಿಡ್ ನಿರ್ವಹಣಾ ಪ್ರಯತ್ನಗಳಿಗೆ ನೆರವಾಗಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಿಂದ ಆರು ಸದಸ್ಯರ ತಂಡವನ್ನು ರಾಜ್ಯಕ್ಕೆ ಕಳುಹಿಸಲು ಕೇಂದ್ರ ನಿರ್ಧರಿಸಿದೆ.

Complete Weekend Lockdown In Kerala Amid Rising Covid Cases

ಕೇಂದ್ರ ಸರ್ಕಾರವು ಆರು ರೋಗಿಗಳ ತಂಡವನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಿಂದ ರಾಜ್ಯಕ್ಕೆ ಕಳುಹಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. "ಕೇರಳದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದ ನಿರಂತರ ಪ್ರಯತ್ನಗಳಿಗೆ ತಂಡವು ನೆರವಾಗಲಿದೆ," ಎಂದು ಮಾಂಡವಿಯಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಆರೋಗ್ಯ ಸಚಿವಾಲಯದ ಈ ಹಿಂದೆ ಕೇರಳ ರಾಜ್ಯವು ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದೆ. ಕೋವಿಡ್ ನಿರ್ವಹಣೆಯ ಮೂಲಕ ವಿಶ್ವದಲ್ಲೇ ಶ್ಲಾಘನೆಗೆ ಒಳಗಾಗಿದ್ದ ದಕ್ಷಿಣ ರಾಜ್ಯವು ಈಗ ದೇಶದಲ್ಲಿ ಪ್ರತಿದಿನ ಶೇಕಡ 40 ರಷ್ಟು ಪಾಸಿಟಿವ್ ಕೇಸ್‌ಗಳಿಗೆ ಕೊಡುಗೆ ನೀಡುತ್ತಿದೆ.

ಕೇರಳದಲ್ಲಿ 22,056 ಕೊರೊನಾ ಪ್ರಕರಣಗಳು ಪತ್ತೆ: 12 ಜಿಲ್ಲೆಗಳಿಗೆ ತಜ್ಞರ ತಂಡಕೇರಳದಲ್ಲಿ 22,056 ಕೊರೊನಾ ಪ್ರಕರಣಗಳು ಪತ್ತೆ: 12 ಜಿಲ್ಲೆಗಳಿಗೆ ತಜ್ಞರ ತಂಡ

ಕೇರಳದಲ್ಲಿ ಹೆಚ್ಚುತ್ತಿರುವ 'ಆರ್' ಮೌಲ್ಯಅಥವಾ ಕೊರೊನಾ ಸೋಂಕಿನ ಉತ್ಪತ್ತಿ ಪ್ರಮಾಣ ಈ ತಿಂಗಳ ಆರಂಭದಲ್ಲಿ ಹೊಸ ಅಲೆಯ ಕಳವಳವನ್ನು ಉಂಟುಮಾಡಿದೆ. ಇದು ರಾಷ್ಟ್ರೀಯ ಕೋವಿಡ್‌ ಪ್ರಕರಣಗಳ ಏರಿಕೆಗೆ ಸಹ ಕಾರಣವಾಗಬಹುದು ಎಂದು ಹೇಳಲಾಗಿದೆ.

ರಾಜ್ಯವು ದೇಶದ ಇತರ ಭಾಗಗಳಿಗಿಂತ ಹೆಚ್ಚು ವೇಗವಾಗಿ ಲಸಿಕೆ ನೀಡುತ್ತಿದ್ದರೂ, ಅದರ ಸಿರೊ-ಪಾಸಿಟಿವಿಟಿ ಅಂಕಿ ಕಡಿಮೆಯಿದೆ. ಜೂನ್ 14 ಮತ್ತು ಜುಲೈ 6 ರ ನಡುವೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ಸಿರೊಸರ್ವಿಯ ಪ್ರಕಾರ, ಕೇರಳದಲ್ಲಿ ಪ್ರತಿಕಾಯ ಅಂಶ ಶೇಕಡ 44.4 ರಷ್ಟಿದ್ದು, ಕಡಿಮೆ ಕೋವಿಡ್ ಪ್ರತಿಕಾಯಗಳನ್ನು ಹೊಂದಿದೆ. ಕೋವಿಡ್‌ಗೆ ವಸ್ತುನಿಷ್ಠ, ಪಾರದರ್ಶಕ ಮತ್ತು ಪುರಾವೆ ಆಧಾರಿತ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯನ್ನು ಮಾರ್ಗದರ್ಶನ ಮಾಡಲು ಸೆರೋಸರ್ವೇಗಳನ್ನು ರಾಜ್ಯಗಳು ಬಳಸಿಕೊಳ್ಳಬಹುದು ಎಂದು ಕೂಡಾ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿದೆ.

ಕೇರಳದಲ್ಲಿ ಬುಧವಾರ 22,056 ಹೊಸ ಕೋವಿಡ್‌ ಪ್ರಕರಣಗಳು 33,27,301 ಕ್ಕೆ ಏರಿದೆ. ಕೋವಿಡ್‌ ವೈರಸ್‌ಗೆ 31 ಮಂದಿ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 16,457 ಕ್ಕೆ ಏರಿಕೆಯಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Kerala, which has been witnessing an alarming surge in daily Covid cases, has further extended the weekend lockdown from this week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X