• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಂ ಪಿಣರಾಯಿ ಪುತ್ರಿ ವೀಣಾಗೆ ಕೊರೊನಾ, ಪಿಪಿಇ ಕಿಟ್ ಧರಿಸಿ ಮತದಾನ

|

ತಿರುವನಂತಪುರಂ, ಏಪ್ರಿಲ್ 7: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿಜಯನ್‌ಗೆ ಕೊರೊನಾ ಸೋಂಕು ತಗುಲಿದ್ದು, ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ್ದಾರೆ.

ಏಪ್ರಿಲ್ 6 ರಂದು ಕೇರಳ ವಿಧಾನಸಭೆಗೆ ಮತಯದಾನ ನಡೆಸಿತ್ತು, ಈ ಸಂದರ್ಭದಲ್ಲಿ ಪಿಪಿಇ ಕಿಟ್ ಧರಿಸಿ ಮತಗಟ್ಟೆಗೆ ಆಗಮಿಸಿದ್ದ ವೀಣಾ ವಿಜಯನ್ ಪ್ರತ್ಯೇಕವಾಗಿ ಮತ ಚಲಾಯಿಸಿದರು.

ಕೇರಳ ಚುನಾವಣೆ; ಇದೇ ಮೊದಲ ಬಾರಿ ಮತ ಹಾಕದ ಮಾಜಿ ಸಿಎಂ ಅಚ್ಯುತಾನಂದನ್ಕೇರಳ ಚುನಾವಣೆ; ಇದೇ ಮೊದಲ ಬಾರಿ ಮತ ಹಾಕದ ಮಾಜಿ ಸಿಎಂ ಅಚ್ಯುತಾನಂದನ್

ವೀಣಾ ವಿಜಯನ್ ಕಣ್ಣೂರಿನ ಪಿಣರಾಯಿಯಲ್ಲಿರುವ ಆರ್‌ಸಿ ಅಮಲಾ ಶಾಲೆಯಲ್ಲಿ ಮತ ಚಲಾಯಿಸಿದರು. ಸಿಎಂ ಪಿಣರಾಯಿ ವಿಜಯನ್ ಹಾಗೂ ಅವರ ಪತ್ನಿ ಕಮಲಾ ಕೂಡ ಮಂಗಳವಾರ ಅಮಲಾ ಶಾಲೆಯಲ್ಲಿ ಮತದಾನ ಮಾಡಿದರು.

ಮಂಗಳವಾರ ಕೇರಳ ವಿಧಾನಸಭೆ ಚುನಾವಣೆ ನಡೆದಿದ್ದು, ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ಇದೇ ಮೊದಲ ಬಾರಿ ಮತದಾನ ಮಾಡಲು ಸಾಧ್ಯವಾಗಿಲ್ಲ.

ಚಿತ್ರಸುದ್ದಿ: ಬೆಂಗಳೂರು ನಿವಾಸಿ, ಕೇರಳ ಸಿಎಂ ಪುತ್ರಿ ವೀಣಾಗೆ ಮದ್ವೆಚಿತ್ರಸುದ್ದಿ: ಬೆಂಗಳೂರು ನಿವಾಸಿ, ಕೇರಳ ಸಿಎಂ ಪುತ್ರಿ ವೀಣಾಗೆ ಮದ್ವೆ

97 ವರ್ಷದ ಅಚ್ಯುತಾನಂದನ್ ಅವರು ತಮ್ಮ ಪುತ್ರನ ನಿವಾಸದಲ್ಲಿ ತಂಗಿದ್ದು, ಅವರ ಮತವು ಅಲಪ್ಪುಳದಲ್ಲಿದ್ದ ಕಾರಣ ಮತ ಚಲಾಯಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಅಚ್ಯುತಾನಂದನ್ ಹಾಗೂ ಅವರ ಪತ್ನಿಗೆ ಅಂಚೆ ಮತದಾನಕ್ಕೆ ನೋಂದಣಿ ಮಾಡಲು ಸಾಧ್ಯವಾಗಿಲ್ಲ. ಪ್ರಯಾಣದಿಂದಾಗಿ ಮಂಗಳವಾರ ಅವರ ಆರೋಗ್ಯದಲ್ಲಿಯೂ ಕೊಂಚ ಏರುಪೇರಾಗಿದ್ದು, ಮತ ಹಾಕಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಅವರ ಪುತ್ರ ಹಾಗೂ ಮನೆಯ ಸದಸ್ಯರು ಅಂಬಲಾಪುರದಲ್ಲಿ ಮತ ಚಲಾಯಿಸಿದ್ದಾರೆ.

ಕೇರಳ, ಪುದುಚೇರಿ ತಮಿಳುನಾಡು ವಿಧಾನಸಭೆಗೆ ಇಂದು ಒಂದೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಉತ್ತಮ ಮತದಾನ ಪ್ರಮಾಣ ದಾಖಲಾಗಿದೆ. ಹಾಗೇಯೇ ಅಸ್ಸಾಂನಲ್ಲಿ ಮೂರನೇ ಹಾಗೂ ಕೊನೆ ಹಂತದ ಮತದಾನ, ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಸಹ ಯಶಸ್ವಿಯಾಗಿದೆ.

ಸಂಜೆ ಏಳರವರೆಗಿನ ವರದಿಯಂತೆ ಕೇರಳದಲ್ಲಿ 73.58%, ತಮಿಳುನಾಡಿನಲ್ಲಿ 65.11%, ಅಸ್ಸಾಂನಲ್ಲಿ 82.29% ಪುದುಚೇರಿಯಲ್ಲಿ 78.13% ಮತ್ತು ಪಶ್ಚಿಮ ಬಂಗಾಳದಲ್ಲಿ 77.38% ಮತದಾನ ದಾಖಲಾಗಿದೆ. ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

English summary
Chief Minister Pinarayi Vijayan's daughter has tested positive for COVID-19.Veena's samples returned positive on Tuesday morning,Following this, she reached the polling booth by wearing a PPE kit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X