ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಸೆ.30ರೊಳಗೆ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೊನಾ ಲಸಿಕೆ: ಪಿಣರಾಯಿ ವಿಜಯನ್

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 11: ಕೇರಳದಲ್ಲಿ ಸೆಪ್ಟೆಂಬರ್ 30ರೊಳಗೆ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಕೋವಿಡ್ -19 ಮೌಲ್ಯಮಾಪನ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ವಿಜಯನ್, ರಾಜ್ಯದಲ್ಲಿ ಸೆಪ್ಟೆಂಬರ್ 3 ರಿಂದ 9 ರ ವರೆಗೆ ಕೇವಲ ಶೇ. 2 ರಷ್ಟು ಸಕ್ರಿಯ ಪ್ರಕರಣಗಳಿಗೆ ಆಕ್ಸಿಜನ್ ಬೆಡ್ ಗಳು ಬೇಕಾಗಿದ್ದು, ಕೇವಲ ಶೇ. 1 ರಷ್ಟು ಸೋಂಕಿತರು ಐಸಿಯುಗೆ ದಾಖಲಾಗಿದ್ದಾರೆ ಎಂದರು.

45 ವರ್ಷಕ್ಕಿಂತ ಮೇಲ್ಪಟ್ಟ ಶೇ. 93 ರಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದರೆ, ಶೇ. 50 ರಷ್ಟು ಜನರು ಎರಡನೇ ಡೋಸ್ ಅನ್ನು ಪಡೆದಿದ್ದಾರೆ ಎಂದು ವಿಜಯನ್ ಹೇಳಿದರು.

Pinarayi Vijayan

ಇಲ್ಲಿಯವರೆಗೆ, 18 ವರ್ಷಕ್ಕಿಂತ ಮೇಲ್ಪಟ್ಟ ಶೇ .78.03 ರಷ್ಟು ಜನರು ಮೊದಲ ಡೋಸ್ ಲಸಿಕೆ ಪಡೆದರೆ, ಶೇ.30.16 ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ವಿಜಯನ್ ತಿಳಿಸಿದ್ದಾರೆ.

ಹಲವು ಟೀಕೆಗೆ ಗುರಿಯಾಗುತ್ತಿರುವ ಕೇರಳ ಸರ್ಕಾರ: ಕೊರೊನಾ ಮೊದಲ ಅಲೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಗಮನ ಸೆಳೆದಿದ್ದ ಕೇರಳ ಸರ್ಕಾರ ಎರಡನೇ ಅಲೆಯ ವೇಳೆ ತನ್ನ ವಿವಾದಾತ್ಮಕ ನೀತಿಗಳಿಂದ ಟೀಕೆಗೆ ಒಳಗಾಗುತ್ತಿದೆ.

ಮೊದಲ ಡೋಸ್‌ನ 4 ವಾರದಲ್ಲೇ ಎರಡನೇ ಡೋಸ್‌ಗೆ ಅನುಮತಿ ನೀಡಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ಮೊದಲ ಡೋಸ್‌ನ 4 ವಾರದಲ್ಲೇ ಎರಡನೇ ಡೋಸ್‌ಗೆ ಅನುಮತಿ ನೀಡಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್

ರಾಜ್ಯದಲ್ಲಿ ನಿತ್ಯ 30 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದರೂ, ಪಾಸಿಟಿವಿಟಿ ದರ ಶೇ.15ಕ್ಕಿಂಹೆಚ್ಚಿದ್ದರೂ ಕಾಲೇಜು, ವಿವಿಗಳನ್ನು ತೆರೆಯಲು ನಿರ್ಧರಿಸಿದೆ.

ಮಂಗಳವಾರವಷ್ಟೇ ವಾರಾಂತ್ಯ ಹಾಗೂ ರಾತ್ರಿ ಕರ್ಫ್ಯೂ ರದ್ದು ಮಾಡಿದ್ದ ಕೇರಳ ಸರ್ಕಾರದ ಇದೀಗ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಅಪಾಯಕಾರಿ ನಿರ್ಧಾರ ಪ್ರಕಟಿಸಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ದಿನೇ ದಿನೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವಾಗ ಇಂಥ ನಿರ್ಧಾರಗಳು ಬೇಕಿರಲಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕೇರಳದಲ್ಲಿ ಬಕ್ರೀದ್‌ ಹಾಗೂ ಓಣಂ ಹಬ್ಬಕ್ಕೆ ಕೋವಿಡ್‌ ನಿಯಮಗಳನ್ನು ಸಡಿಲಗೊಳಿಸಲಾಗಿತ್ತು. ಇದಾದ ಬಳಿಕ ಭಾರೀ ಪ್ರಮಾಣದಲ್ಲಿ ಕೋವಿಡ್‌ ಸೋಂಕು ಸ್ಫೋಟಗೊಂಡಿತ್ತು. ಹೀಗಾಗಿ ವೀಕೆಂಡ್‌ ಕರ್ಫ್ಯೂ ಹಾಗೂ ನೈಟ್‌ ಕರ್ಫ್ಯೂ ಜಾರಿಗೊಳಿಸಿತ್ತು. ಇದರಿಂದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದ್ದು, ಹೀಗಾಗಿ ಅವುಗಳನ್ನು ಮಂಗಳವಾರ ರದ್ದುಗೊಳಿಸಿತ್ತು. ಇದಾದ ಬೆನ್ನಲ್ಲೇ ಕಾಲೇಜು ತೆರೆಯುವ ನಿರ್ಧಾರ ಪ್ರಕಟಿಸಿದೆ.

ಕೇರಳದಲ್ಲಿ ನಿಪಾ ವೈರಸ್ ಪ್ರಕರಣಗಳು ಹೆಚ್ಚಳ: ಕೋವಿಡ್‌ ನಡುವೆಯೂ ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ಮಾರಣಾಂತಿಕ ನಿಫಾ ವೈರಸ್‌ ಕೂಡ ಕಾಣಿಸಿಕೊಂಡಿದೆ. ಇಷ್ಟಾಗಿಯೂ ಸರ್ಕಾರ ಈ ಅಪಾಯಕಾರಿ ನಿರ್ಧಾರ ತೆಗೆದುಕೊಂಡಿದೆ.

ಬುಧವಾರ ಕೂಡ ಕೇರಳದಲ್ಲಿ 30,196 ಕೊರೊನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದು, 181 ಮಂದಿ ಸಾವಿಗೀಡಾಗಿದ್ದಾರೆ. ಹೀಗಿರುವಾಗಲೇ ಮುಖ್ಯಮಂತ್ರಿ
ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರ ವಿಶ್ವ ವಿದ್ಯಾಲಯ ಹಾಗೂ ಕಾಲೇಜುಗಳನ್ನು ಅಕ್ಟೋಬರ್ 4 ರಿಂದ ಪುನಾರಂಭಿಸುವುದಾಗಿ ಹೇಳಿದೆ. ಸರ್ಕಾರದ ಈ ನಿರ್ಧಾರ ರಾಜ್ಯದಲ್ಲಿ ಕೋವಿಡ್‌ ಮತ್ತೆ ಹೆಚ್ಚಳವಾಗುವ ಭೀತಿ ಎದುರಾಗಿದೆ.

ಈ ಬಗ್ಗೆ ಮಾತನಾಡಿರುವ ಸಿಎಂ ಪಿಣರಾಯಿ ವಿಜಯನ್‌, 'ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಅಕ್ಟೋಬರ್ 4 ರಿಂದ ಕಾಲೇಜುಗಳನ್ನು ಹಾಗೂ ವಿವಿಗಳನ್ನು ಆರಂಭಿಸುತ್ತಿದ್ದೇವೆ' ಎಂದಿದ್ದಾರೆ. ಅದಕ್ಕೂ ಮುನ್ನ ಸೆ.10 ರಂದು ವಿವಿಧ ಕಾಲೇಜುಗಳ ಪ್ರಾಚಾರ್ಯರ ಸಭೆಯೂ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದಲೂ ಕೇರಳದಲ್ಲಿ ಪ್ರತಿ ನಿತ್ಯ 30 ಸಾವಿರದ ಆಸುಪಾಸಿನಲ್ಲಿ ಕೊರೊನಾ ಸೋಂಕಿತರು ವರದಿಯಾಗುತ್ತಿರುವ ಬೆನ್ನಿಗೇ ನಿಫಾ ವೈರಾಣು ಸೋಂಕು ಸಹ ಮತ್ತೊಮ್ಮೆ ಅಬ್ಬರಿಸಲು ಆರಂಭಿಸಿದೆ. ನಿಫಾದಿಂದ ಭಾನುವಾರ 12 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ನಾಲ್ಕು ದಿನಗಳ ಮುನ್ನ ಬಾಲಕನಲ್ಲಿ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಆತನ ರಕ್ತದ ಮಾದರಿಯನ್ನು ಪುಣೆಯ ಎನ್‌ಐವಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಬಾಲಕನಿಗೆ ನಿಫಾ ಸೋಂಕು ತಗುಲಿರುವುದು ವರದಿಯಲ್ಲಿ ದೃಢಪಟ್ಟಿದೆ.

2018ರ ಮೇ 19ರಂದು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ನಿಫಾ ಸೋಂಕು ಕೇರಳದಲ್ಲಿ ಪತ್ತೆಯಾಗಿತ್ತು. ಸುಮಾರು 17 ಸೋಂಕಿತರು ತೀವ್ರ ಜ್ವರದಿಂದಾಗಿ ಮೃತಪಟ್ಟಿದ್ದಾರೆ.

''ಶನಿವಾರ ತಡರಾತ್ರಿಯಿಂದ ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮುಂಜಾನೆ 5 ಗಂಟೆಗೆ ಮೃತಪಟ್ಟಿದ್ದಾನೆ. ಬಾಲಕನೊಂದಿಗೆ ಸಂಪರ್ಕಕ್ಕೆ ಬಂದವರನ್ನು ಹುಡುಕಿ, ಅವರನ್ನು ಕೂಲಂಕಷ ತಪಾಸಣೆಗೆ ಒಳಪಡಿಸುವ ಕಾರ್ಯ ಪ್ರಗತಿಯಲ್ಲಿದೆ.

ಬಾಲಕನ ಜತೆಗಿದ್ದ ಪೋಷಕರನ್ನು ಕ್ವಾರಂಟೈನ್‌ನಲ್ಲಿ ಇರಿಸಿದ್ದೇವೆ,'' ಎಂದು ಕೇರಳ ಆರೋಗ್ಯ ಸಚಿವೆ ವೀನಾ ಜಾರ್ಜ್‌ ತಿಳಿಸಿದ್ದಾರೆ.

English summary
Kerala Chief Minister Pinarayi Vijayan on Friday said the state government aims to complete the first dose of vaccination to all above 18 years by September 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X