ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಪೌರತ್ವ ಕಾಯ್ದೆ ಜಾರಿ ಮಾಡಲ್ಲ: ಸಿಎಂ ಪಿಣರಾಯಿ

|
Google Oneindia Kannada News

ತಿರುವನಂತಪುರಂ, ಜೂ. 3: "ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ)ಯನ್ನು ತಮ್ಮ ಸರ್ಕಾರ ಜಾರಿಗೆ ತರುವುದಿಲ್ಲ" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ತಿಳಿಸಿದ್ದಾರೆ.

ತಮ್ಮ ಸರ್ಕಾರದ ಮೊದಲ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, "ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಸರ್ಕಾರವು ಸ್ಪಷ್ಟ ನಿಲುವನ್ನು ಹೊಂದಿದೆ. ಅದು ಮುಂದುವರಿಯುತ್ತದೆ". ನಮ್ಮ ದೇಶವು ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಜಾತ್ಯತೀತ ತತ್ವದ ಮೇಲೆ ಕೆಲಸ ಮಾಡುತ್ತಿದೆ. ಇಂದಿನ ದಿನಗಳಲ್ಲಿ ಜಾತ್ಯತೀತತೆಯನ್ನು ನಾಶಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಒಂದು ನಿರ್ದಿಷ್ಟ ಗುಂಪಿನ ಜನರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಘಟನೆಯಲ್ಲಿ ಒಂದು ಗುಂಪು ಜನರು ಧರ್ಮದ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸುತ್ತಿದ್ದಾರೆ. ಈ ಘಟನೆಯ ವಿರುದ್ಧ ಕೇರಳ ಸರ್ಕಾರವು ದೃಢವಾದ ನಿಲುವು ತೆಗೆದುಕೊಂಡಿದೆ" ಎಂದು ಹೇಳಿದರು.

ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಪುನರ್ಜನ್ಮ ನೀಡಿದ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಪುನರ್ಜನ್ಮ ನೀಡಿದ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ಧರ್ಮದ ಆಧಾರದ ಮೇಲೆ ಪೌರತ್ವ

ಧರ್ಮದ ಆಧಾರದ ಮೇಲೆ ಪೌರತ್ವ

"ಜನರಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟು ಮಾಡಲು ದೇಶದ ವಿವಿಧ ಭಾಗಗಳಲ್ಲಿ ಹಲವಾರು ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ ಇಲ್ಲಿ ನಮ್ಮ ಸಮಾಜದ ಅತ್ಯಂತ ಬಡ ಕುಟುಂಬಗಳನ್ನು ಗುರುತಿಸಲು ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಈ ಸಮೀಕ್ಷೆಯ ಭಾಗವಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ರಾಜ್ಯವು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂದು ಪುನರುಚ್ಚರಿಸಿ, ಧರ್ಮದ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸಲಾಗುವುದಿಲ್ಲ ಎಂದು ರಾಜ್ಯ ಸರ್ಕಾರವು ದೃಢವಾದ ನಿಲುವನ್ನು ತೆಗೆದುಕೊಂಡಿದೆ" ಎಂದು ತಿಳಿಸಿದರು.

ಒಂದೇ ವಾರದಲ್ಲಿ ಬೆಸ್ಕಾಂ ವಾಟ್ಸಾಪ್ ಸಹಾಯವಾಣಿಗೆ 736 ದೂರುಒಂದೇ ವಾರದಲ್ಲಿ ಬೆಸ್ಕಾಂ ವಾಟ್ಸಾಪ್ ಸಹಾಯವಾಣಿಗೆ 736 ದೂರು

ಸಿಲಿಗುರಿ ನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ

ಸಿಲಿಗುರಿ ನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ

ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕೋವಿಡ್‌ 19 ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದರು. "ಕೋವಿಡ್‌- 19 ಅಲೆ ಕೊನೆಗೊಂಡ ಕ್ಷಣದಲ್ಲಿ ನಾವು ಪೌರತ್ವ (ತಿದ್ದುಪಡಿ) ಕಾಯಿದೆ (ಸಿಎಎ) ಅನ್ನು ಜಾರಿಗೆ ತರುತ್ತೇವೆ" ಎಂದು ಪಶ್ಚಿಮ ಬಂಗಾಳದ ಸಿಲಿಗುರಿ ನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಜನವರಿ 10, 2020 ರಂದು ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ

ಜನವರಿ 10, 2020 ರಂದು ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ

ಡಿಸೆಂಬರ್ 11, 2019 ರಂದು ಭಾರತದ ಸಂಸತ್ತು ಅಂಗೀಕರಿಸಿದ ಪೌರತ್ವ (ತಿದ್ದುಪಡಿ) ಕಾಯ್ದೆ ಇನ್ನೂ ಜಾರಿಗೆ ಬರಬೇಕಿದೆ. ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಸದಸ್ಯರಿಗೆ ಪೌರತ್ವವನ್ನು ನೀಡುವ ಗುರಿಯನ್ನು ಹೊಂದಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳವನ್ನು ಎದುರಿಸಿದ ಎಲ್ಲರಿಗೂ ಪೌರತ್ವ ನೀಡುವ ಗುರಿ ಇದು ಹೊಂದಿದೆ. ಸಿಎಎ ಅನ್ನು ಡಿಸೆಂಬರ್ 12, 2019 ರಂದು ಸೂಚಿಸಲಾಯಿತು ಮತ್ತು ಜನವರಿ 10, 2020 ರಂದು ಜಾರಿಗೆ ಬಂದಿತು. ಡಿಸೆಂಬರ್ 31, 2014 ರಂದು ಅಥವಾ ಮೊದಲು ಭಾರತಕ್ಕೆ ಬಂದವರಾಗಿದ್ದಾರೆ ಮಾತ್ರ ಪೌರತ್ವ ನೀಡಲಾಗತ್ತದೆ ಎನ್ನಲಾಗಿದೆ.

ಸಿಎಎ ವಾಸ್ತವಿಕವಾಗಿತ್ತು. ಮುಂದೆಯೂ ಆಗಿರಲಿದೆ

ಸಿಎಎ ವಾಸ್ತವಿಕವಾಗಿತ್ತು. ಮುಂದೆಯೂ ಆಗಿರಲಿದೆ

ಮೇ ನಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್‌ ಶಾ, ನಾನೀಗ ಉತ್ತರ ಬಂಗಾಳಕ್ಕೆ ಬಂದಿದ್ದೇನೆ. ಸಿಎಎ ಜಾರಿಗೆ ಬರಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಸುಳ್ಳು ಸುದ್ದಿ ಹರಡುತ್ತಿದೆ. ಕೋವಿಡ್ ಅಲೆ ತಗ್ಗಿದ ಕೂಡಲೇ ಸಿಎಎ ಜಾರಿಗೆ ತರುತ್ತೇವೆ. ಸಿಎಎ ವಾಸ್ತವಿಕವಾಗಿತ್ತು. ಮುಂದೆಯೂ ಅದು ವಾಸ್ತವವೇ ಆಗಿರಲಿದೆ. ತೃಣಮೂಲ ಪಕ್ಷ ಏನೂ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದರು.

ಸಿಎಎ ಜಾರಿಗೆ ತರುತ್ತೇವೆ ಎಂದು ಅಮಿತ್ ಶಾ ಹೇಳಿಕೆ ನೀಡುತ್ತಿದ್ದಂತೆಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿ "ಇದು ಅವರ ಪ್ಲಾನ್. ಸಂಸತ್‌ಗೆ ಈ ಮಸೂದೆಯನ್ನು ಯಾಕೆ ತರುತ್ತಿಲ್ಲ ಅವರು?. 2024ರಲ್ಲಿ ಅವರು ಅಧಿಕಾರಕ್ಕೆ ಬರುವುದಿಲ್ಲ. ಯಾವುದೇ ನಾಗರಿಕರು ಕಷ್ಟಕ್ಕೊಳಗಾಗುವುದು ನಮಗೆ ಬೇಕಿಲ್ಲ. ಒಗ್ಗಟ್ಟೇ ನಮ್ಮ ಬಲ. ಒಂದು ವರ್ಷದ ಬಳಿಕ ಅವರು ಬಂದಿದ್ದಾರೆ. ಪ್ರತೀ ಬಾರಿ ಬಂದಾಗಲೂ ಅಸಂಬದ್ಧ ಮಾತುಗಳನ್ನೇ ಆಡಿ ಹೋಗುತ್ತಾರೆ" ಎಂದು ತಿರುಗೇಟು ನೀಡಿದ್ದರು.

English summary
"The government does not enforce the controversial Citizenship (Amendment) Act (CAA)," Kerala Chief Minister Pinarayi Vijayan said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X