ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಯನ್ ಮಯೂಖಾ ಜಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

|
Google Oneindia Kannada News

ಕೊಚ್ಚಿ, ಜುಲೈ 16: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಸ್ನೇಹಿತೆಯ ಅನುಭವವನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಒಲಿಂಪಿಯನ್ ಮಯೂಖಾ ಜಾನಿ ವಿರುದ್ಧ ಪೊಲೀಸರು ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಾರೆ.

ಚಲಕುಡಿ ನ್ಯಾಯಾಲಯದ ಆದೇಶದಂತೆ ಆಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿವಶಂಕರ್ ಬಾಬಾ ವಿರುದ್ಧ ಲೈಂಗಿಕ ಕಿರುಕುಳ ಆರೋಪಶಿವಶಂಕರ್ ಬಾಬಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಮಯೂಖಾ ಜಾನಿ ಸೇರಿದಂತೆ ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮರಿಯಾಡ್ ಚಕ್ರವರ್ತಿ ಎಮ್ಯಾನ್ಯುಯಲ್ ಚಳವಳಿಯ ನಿಶಾ ಸೆಬಾಸ್ಟಿಯನ್, ಟ್ರಸ್ಟಿಗಳಾದ ಉಮೇಶ್ ಜೋಸ್, ನವೀನ್ ಪಾಲ್, ಪಿಪಿ ಶಾಂತೊ ಹಾಗೂ ಇತರೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ದೇಶನ ನೀಡಿದೆ.

Case Against Olympian Mayookha Johnny For Disclosing Friends Sexual Abuse

ಇಲ್ಲಿನ ಟ್ರಸ್ಟಿ ಸಾಬು ಎಂಬುವರು ನೀಡಿದ ದೂರಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಇಲ್ಲಿನ ಮಾಜಿ ಟ್ರಸ್ಟಿ ಚುಂಕಾತ್ ಜಾನ್ಸನ್ ಎಂಬುವರು ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಕಲಿ ದಾಖಲೆ ಸೃಷ್ಟಿ ಮಾಡಿ ದೂರು ನೀಡಲಾಗಿದೆ ಎಂದು ಸಾಬು ಆರೋಪಿಸಿದ್ದಾರೆ.

ಈ ಸಂಗತಿ ನಡೆದಿದ್ದು 2016ರಲ್ಲಿ. ಚುಂಕಾತ್ ಜಾನ್ಸನ್ ಎಂಬುವರು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಮಹಿಳೆ ವಿವಾಹಿತರಾಗಿದ್ದರಿಂದ ದೂರು ನೀಡಲಿಲ್ಲ. ಆದರೆ ಪದೇ ಪದೇ ಆಕೆಗೆ ಕಿರುಕುಳ ನೀಡಲು ಆರಂಭಿಸಿದರು. ಈ ಅನುಭವದಿಂದ ಅವರಿಗೆ ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗಿಲ್ಲ. ಆನಂತರ ಮಾರ್ಚ್ 2021ರಲ್ಲಿ ತಮ್ಮ ಪತಿಯೊಂದಿಗೆ ಮಹಿಳೆ ದೂರು ನೀಡಿದ್ದರು. ಚಲಕುಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರ ಹೇಳಿಕೆಯನ್ನು ದಾಖಲಿಸಿತ್ತು. ಆದರೆ ಆರೋಪಿಯನ್ನು ಬಂಧಿಸಿರಲಿಲ್ಲ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಮಯೂಖಾ, ಆರೋಪಿಗೆ ಸಚಿವರ ಮಟ್ಟದಲ್ಲಿ ಬೆಂಬಲ ದೊರೆಯುತ್ತಿದೆ ಎಂದು ಆರೋಪಿಸಿದ್ದರು.

English summary
Police registers case against Olympian Mayookha Johnny who disclosed friend’s sexual abuse,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X