ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.25ರಿಂದ ಕೇರಳ-ಕರ್ನಾಟಕ ನಡುವೆ ಬಸ್ ಸೇವೆ

|
Google Oneindia Kannada News

ತಿರುವನಂತಪುರಂ, ಆಗಸ್ಟ್ 16 : ಓಣಂ ಹಬ್ಬದ ಹಿನ್ನಲೆಯಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 6ರ ತನಕ ಕರ್ನಾಟಕಕ್ಕೆ ಬಸ್ ಸಂಚಾರ ನಡೆಸುವುದಾಗಿ ಕೇರಳ ಸಾರಿಗೆ ಇಲಾಖೆ ಘೋಷಣೆ ಮಾಡಿದೆ. ಕೋವಿಡ್ ಭೀತಿ ಹಿನ್ನಲೆಯಲ್ಲಿ ಅಂತರರಾಜ್ಯ ಬಸ್ ಸಂಚಾರ ಸ್ಥಗಿತವಾಗಿದೆ.

ಕೇರಳದ ಸಾರಿಗೆ ಸಚಿವ ಎ. ಕೆ. ಸಸೀಂದ್ರನ್ ಈ ಕುರಿತು ಹೇಳಿಕೆ ನೀಡಿದ್ದಾರೆ. "ಈ ಬಸ್‌ಗಳಲ್ಲಿ ಸಂಚಾರ ನಡೆಸುವ ಜನರು ಕಡ್ಡಾಯವಾಗಿ ಕೇರಳ ರಾಜ್ಯಗ ಜಾಗೃತ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಪ್ರಯಾಣಿಕ ಪಾಸು ಪಡೆಯಬೇಕು" ಎಂದು ಸಚಿವರು ಹೇಳಿದ್ದಾರೆ.

ಬಸ್ ಸಂಚಾರ ಆರಂಭ; ಚೇತರಿಕೆ ಕಂಡ ಸಾರಿಗೆ ಇಲಾಖೆ ಆದಾಯ ಬಸ್ ಸಂಚಾರ ಆರಂಭ; ಚೇತರಿಕೆ ಕಂಡ ಸಾರಿಗೆ ಇಲಾಖೆ ಆದಾಯ

ಬಸ್ ಸಂಚಾರದ ವೇಳಾಪಟ್ಟಿ, ಮಾರ್ಗ

"ಆಗಸ್ಟ್ 15ರಿಂದಲೇ ಈ ಬಸ್‌ಗಳಿಗೆ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಕೇರಳ ರಾಜ್ಯದ ಕೆಎಸ್ಆರ್‌ಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಈ ವಿಶೇಷ ಸೇವೆಗೆ ಶೇ 10ರಷ್ಟು ಹೆಚ್ಚು ದರವಿದೆ" ಎಂದು ಸಚಿವರು ತಿಳಿಸಿದ್ದಾರೆ.

ಭಾನುವಾರ ಹಾಗೂ ರಾತ್ರಿ ವೇಳೆಯೂ ಸಂಚರಿಸಲಿದೆ ಕೆಎಸ್ಆರ್‌ಟಿಸಿ ಭಾನುವಾರ ಹಾಗೂ ರಾತ್ರಿ ವೇಳೆಯೂ ಸಂಚರಿಸಲಿದೆ ಕೆಎಸ್ಆರ್‌ಟಿಸಿ

Bus Service Between Kerala And Karnataka From August 25

ತಮಿಳುನಾಡು ಮತ್ತು ಕರ್ನಾಟಕದಿಂದ ಬಸ್ ಸಂಚಾರ ನಡೆಸಲಾಗುತ್ತದೆ. ಕೋವಿಡ್ ಮಾರ್ಗಸೂಚಿ ಅನ್ವಯ ಬಸ್‌ಗಳು ಸಂಚಾರ ನಡೆಸಲಿವೆ. ಒಂದು ವೇಳೆ ಯಾರಾದರೂ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದರೆ ಟಿಕೆಟ್ ರದ್ದು ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಅನ್ ಲಾಕ್ 3.0; ಅಂತರರಾಜ್ಯ ಪ್ರಯಾಣಕ್ಕೂ ಮುನ್ನ ತಿಳಿಯಿರಿ ಅನ್ ಲಾಕ್ 3.0; ಅಂತರರಾಜ್ಯ ಪ್ರಯಾಣಕ್ಕೂ ಮುನ್ನ ತಿಳಿಯಿರಿ

ಒಂದು ವೇಳೆ ಬುಕ್ ಮಾಡಿರುವ ಬಸ್‌ಗಳ ಸಂಚಾರ ಯಾವುದಾದರೂ ಕಾರಣಕ್ಕೆ ರದ್ದಾದರೆ ಸಂಪೂರ್ಣ ಹಣವನ್ನು ವಾಪಸ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಹೊಂದಿರಬೇಕು.

English summary
Kerala State Road Transport Corporation to resume the interstate bus service to Karnataka as part of the upcoming festival Onam. Bus will resume service from August 25 to September 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X