ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಬಿಜೆಪಿ ಕಿಂಗ್ ಅಥವಾ ಕಿಂಗ್ ಮೇಕರ್ ಆಗಲಿದೆ: ಕೆ ಸುರೇಂದ್ರನ್

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 2: ಕೇರಳದಲ್ಲಿ ಬಿಜೆಪಿಯು ಕಿಂಗ್ ಅಥವಾ ಕಿಂಗ್ ಮೇಕರ್ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದಾರೆ.

ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಅಥವಾ ಯಾರು ಅಧಿಕಾರ ನಡೆಸಬೇಕು ಎಂದು ಬಿಜೆಪಿ ನಿರ್ಣಯಿಸಲಿದೆ, ಬಿಜೆಪಿ ಇಲ್ಲದೆ ಕೇರಳದಲ್ಲಿ ಯಾರೂ ಅಧಿಕಾರ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಸುರೇಂದ್ರನ್ ಭರವಸೆ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್ ಗೆದ್ದರೆ ಪ್ರತಿತಿಂಗಳು ಗೃಹಿಣಿಯರ ಖಾತೆಗೆ 6000 ರೂ.ಕೇರಳದಲ್ಲಿ ಕಾಂಗ್ರೆಸ್ ಗೆದ್ದರೆ ಪ್ರತಿತಿಂಗಳು ಗೃಹಿಣಿಯರ ಖಾತೆಗೆ 6000 ರೂ.

ಎನ್‌ಡಿಎಯು ಕೇರಳ ವಿಧಾನಸಭೆಯಲ್ಲಿರಲಿದೆ, ಬಿಜೆಪಿಯು ಹತ್ತರಿಂದ 35 ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದೆ. ಕೇರಳದಲ್ಲಿ ಶೀಘ್ರವೇ ಎಲ್‌ಡಿಎಫ್, ಯುಡಿಎಫ್ ಅಧಿಕಾರ ಅಂತ್ಯಗೊಳ್ಳಲಿದೆ.

K Surendran

ಕೇರಳ ವಿಧಾನಭೆಗೆ ಚುನಾವಣೆ ನಿಗದಿಯಾಗಿದ್ದು ಏಪ್ರಿಲ್‌ ತಿಂಗಳಿನಲ್ಲಿ ಮತದಾನ ನಡೆಯಲಿದೆ. ಎಡಪಕ್ಷಗಳು ಹಾಗೂ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಇಲ್ಲಿ ಪ್ರಬಲವಾಗಿದ್ದು, ಈ ಬಾರಿ ಬೇರೂರಲು ಬಿಜೆಪಿ ಅವಿರತ ಪ್ರಯತ್ನ ನಡೆಸುತ್ತಿದೆ.

ಒಟ್ಟು 140 ವಿಧಾನಸಭಾ ಕ್ಷೇತ್ರಗಳು ಇರುವ ಕೇರಳದಲ್ಲಿ ಸರಳ ಬಹುಮತಕ್ಕೆ 71 ಸ್ಥಾನಗಳನ್ನು ಗೆಲ್ಲಬೇಕು. ಕಳೆದ ಚುನಾವಣೆಯಲ್ಲಿ ಎಲ್‌ಡಿಎಫ್‌ 91 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಪಡೆದಿತ್ತು. ಈ ಬಾರಿ ಜಿದ್ದಾ ಜಿದ್ದಿನ ಕಣ ಏರ್ಪಟ್ಟಿದ್ದು, ಮಲಯಾಳಿ ಮತದಾರ ಯಾರ ಪರ ವಾಲುತ್ತಾನೆ ಎಂದು ಕಾದು ನೋಡಬೇಕು.

ಕೇರಳ ವಿಧಾನಸಭೆ ಚುನಾವಣೆಗೆ ಮಾರ್ಚ್‌ 12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮಾರ್ಚ್‌ 19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಮಾರ್ಚ್‌ 20 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು ಮಾರ್ಚ್‌ 22 ಕೊನೆಯ ದಿನ.

ಏಪ್ರಿಲ್‌ 6 ರಂದು ಎಲ್ಲಾ ವಿಧಾನಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

English summary
BJP state president K Surendran has said that there will be no continuity of rule in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X