ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಎನ್ಡಿಎ ಅಭ್ಯರ್ಥಿ ಘೋಷಣೆ

|
Google Oneindia Kannada News

ವಯನಾಡು(ಕೇರಳ), ಏಪ್ರಿಲ್ 01: ಕೇರಳದ ವಯಾನಾಡ್​ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ಅಧ್ಯಕ್ಷ ರಾಹುಲ್​ಗಾಂಧಿ ಅವರು ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ಎನ್ಡಿಎ ಕೂಡಾ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ರಾಹುಲ್ ವಿರುದ್ಧ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ಸೋಮವಾರದಂದು ತೆರೆ ಎಳೆಯಲಾಗಿದೆ.

ವಯಾನಾಡ್​ನಲ್ಲಿ ರಾಹುಲ್​ಗಾಂಧಿಗೆ ಪ್ರತಿಸ್ಪರ್ಧಿಯಾಗಿ ಎನ್​ಡಿಎ ಅಭ್ಯರ್ಥಿ ತುಷಾರ್​ವೆಳ್ಳಪಲ್ಲಿ ಅವರನು ಕಣಕ್ಕಿಳಿಸಲಾಗಿದೆ. ತುಷಾರ್​ಅವರು ಭಾರತ್​ ಧರ್ಮ ಜನ ಸೇನಾದ ಅಧ್ಯಕ್ಷರಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚಿತ್ರರಂಗದ ಸೂಪರ್ ಸ್ಟಾರ್ ನಟ ಸುರೇಶ್ ಗೋಪಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿರುವ ಸುದ್ದಿ ಬಂದಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ ಅವರು ಪಕ್ಷ ಬಯಸಿದರೆ ಕಣಕ್ಕಿಳಿಯಲು ಸಿದ್ಧ ಎಂದು ಘೋಷಿಸಿದ್ದರು.

BJP picks Thushar Vellappally against Rahul Gandhi in Wayanad

ಆದರೆ, ತುಷಾರ್​ಅವರನ್ನು ವಯಾನಾಡ್​ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಹೆಮ್ಮೆಯೆನಿಸುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ರಾಹುಲ್ ಸೋಲಿಸಿ, ನಮ್ಮ ಎಡಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕಿದೆ : ವಿಜಯನ್ ರಾಹುಲ್ ಸೋಲಿಸಿ, ನಮ್ಮ ಎಡಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕಿದೆ : ವಿಜಯನ್

ತುಷಾರ್​ಅವರು ಕ್ರಿಯಾತ್ಮಕ ಯುವ ನಾಯಕ. ಬಿಜೆಪಿಯ ಮೊದಲ ಆದ್ಯತೆಯಾಗಿರುವ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದೆಡೆಗಿನ ಬದ್ಧತೆಯನ್ನು ಅವರು ಪ್ರತಿಬಿಂಬಿಸುತ್ತಾರೆ ಎಂದು ಅಮಿತ್ ಟ್ವೀಟ್ ಮಾಡಿದ್ದಾರೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಇದಕ್ಕೂ ಮುನ್ನ ಬಿಡಿಜೆಎಸ್ ನಿಂದ ಈ ಕ್ಷೇತ್ರಕ್ಕೆ ಉಪಾಧ್ಯಕ್ಷ ಪೈಲಿ ವಾತಿಯಾಟ್ಟು ಅವರ ಹೆಸರು ನಿಗದಿಯಾಗಿತ್ತು. ಆದರೆ, ರಾಹುಲ್ ಗಾಂಧಿ ಉಮೇದುವಾರಿಕೆ ಪಕ್ಕಾ ಆದ ಬಳಿಕ ಅಭ್ಯರ್ಥಿಯನ್ನು ಬದಲಾಯಿಸಲಾಗಿದೆ.

ಈ ಕ್ಷೇತ್ರದಲ್ಲಿ ಶೇ 50 ರಷ್ಟು ಮುಸ್ಲಿಮರು ಮಿಕ್ಕಂತೆ ಕ್ರೈಸ್ತರು ಅಲ್ಪಸಂಖ್ಯಾತರಿದ್ದು, ಬಿಜೆಪಿಗೆ ಅಸ್ತಿತ್ವ ಇಲ್ಲವಾಗಿದೆ. ರಾಹುಲ್ ಗಾಂಧಿಗೆ ಸಿಪಿಐ ಅಭ್ಯರ್ಥಿ ಸಿ.ಪಿ ಸುನೀರ್ ಅವರು ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.

English summary
As the first phase of polling for the Lok Sabha elections draws closer, the Bharatiya Janata Party (BJP) has chosen the president of Bharat Dharma Jana Sena, Thushar Vellapally, as its candidate from Wayanad seat, where Congress chief Rahul Gandhi is set to contest from.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X