ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಸಿಲ್ವರ್‌ಲೈನ್ ಆಂದೋಲನದ ಹಿಂದೆ ಉಗ್ರಗಾಮಿ ಗುಂಪು: ಸಿಪಿಐ(ಎಂ) ಪಾಲಿಟ್ ಬ್ಯೂರೋ

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 22: "ಕಾಂಗ್ರೆಸ್, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ಮುಸ್ಲಿಂ ಉಗ್ರಗಾಮಿ ಗುಂಪುಗಳು ಜೊತೆಯಾಗಿ ಕೇರಳದಲ್ಲಿ ಸಿಲ್ವರ್‌ಲೈನ್ ವಿರೋಧಿ ಪ್ರತಿಭಟನೆ, ಆಂದೋಲನವನ್ನು ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಮುಸ್ಲಿಂ ಉಗ್ರಗಾಮಿ ಗುಂಪುಗಳು ಕೂಡಾ ಜೊತೆಯಾಗಿದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಎ. ವಿಜಯರಾಘವನ್ ಆರೋಪ ಮಾಡಿದ್ದಾರೆ.

ತಿರುವನಂತಪುರಂ ಪ್ರೆಸ್ ಕ್ಲಬ್ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಎ. ವಿಜಯರಾಘವನ್, "ರಾಜ್ಯದ ಅಭಿವೃದ್ಧಿಗೆ ಅಡ್ಡಿಪಡಿಸಲು ಮತ್ತು ಹಿಂಸಾತ್ಮಕ ಮಾರ್ಗಗಳ ಮೂಲಕ ಶಾಂತಿಯನ್ನು ಹಾಳುಮಾಡಲು ಅಪವಿತ್ರ ಸಂಬಂಧವನ್ನು ರಚಿಸಲಾಗಿದೆ," ಎಂದು ಕಾಂಗ್ರೆಸ್, ಬಿಜೆಪಿ, ಯುಡಿಐ ಹಾಗೂ ಕೆಲವು ಮುಸ್ಲಿಂ ಸಂಘಟನೆಗಳ ವಿರುದ್ಧ ಟೀಕೆ ಮಾಡಿದ್ದಾರೆ.

ಮುಸ್ಲಿಂ ಯುವಕನೊಂದಿಗೆ ಕ್ರಿಶ್ಚಿಯನ್ ಯುವತಿ ಮದುವೆಗೆ ಹೈಕೋರ್ಟ್ ಅನುಮತಿಮುಸ್ಲಿಂ ಯುವಕನೊಂದಿಗೆ ಕ್ರಿಶ್ಚಿಯನ್ ಯುವತಿ ಮದುವೆಗೆ ಹೈಕೋರ್ಟ್ ಅನುಮತಿ

ಈ ವೇಳೆಯ ಪ್ರತಿಭಟನಾಕಾರರ ಮೇಲೆ ಪೋಲೀಸರ ದೌರ್ಜನ್ಯದ ವರದಿಗಳನ್ನು ನಿರಾಕರಿಸಿದ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಎ. ವಿಜಯರಾಘವನ್ ಸಂಘಟಿತ ಪ್ರತಿಭಟನೆಗಳ ಮುಖಾಂತರ ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕಾನೂನು ಪಾಲಕರು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರ ಮೇಲೆ ಬಲವಂತವಾಗಿ ಕ್ರಮ ಕೈಗೊಳ್ಳುವುದನ್ನು ನಮ್ಮ ರಾಜ್ಯ ಸರ್ಕಾರ ಎಂದಿಗೂ ಕೂಡಾ ಒಪ್ಪುವುದಿಲ್ಲ ಎಂದು ಆರೋಪಿಸಿದರು.

Congress, BJP, extremist outfits behind SilverLine agitation in Kerala Alleges CPI(M) Polit Bureau member

ಸೆಮಿ ಹೈಸ್ಪೀಡ್ ರೈಲ್ವೇ ಕಾರಿಡಾರ್ ಯೋಜನೆ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಆರಂಭಿಸಿರುವ ಅಭಿಯಾನ ವೇಗ ಪಡೆಯುತ್ತಿದ್ದಂತೆ ವಿವಿಧ ವಲಯಗಳಲ್ಲಿ ಮೂಡಿರುವ ಆತಂಕಗಳು ಕಡಿಮೆಯಾಗಲಿವೆ ಎಂದು ಸಿಪಿಐ(ಎಂ) ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಎಲ್‌ಡಿಎಫ್ ಸಂಚಾಲಕ ಇ.ಪಿ. ಜಯರಾಜನ್ ಅವರ ಬಗ್ಗೆ ಪ್ರಸ್ತಾಪ ಮಾಡಿದ ಎ. ವಿಜಯರಾಘವನ್ ಯುಡಿಎಫ್ ಘಟಕದ ಬಗ್ಗೆ ಸಿಪಿಐ(ಎಂ) ನ ರಾಜಕೀಯ ನಿಲುವು ಬದಲಾಗದೆ ಉಳಿದಿದೆ ಎಂದು ತಿಳಿಸಿದರು.

ಧಾರ್ಮಿಕ ಭಯೋತ್ಪಾದನೆ ವಿರುದ್ಧ ಅಭಿಯಾನಕ್ಕೆ ಕೇರಳ ಬಿಜೆಪಿ ಸಜ್ಜು!ಧಾರ್ಮಿಕ ಭಯೋತ್ಪಾದನೆ ವಿರುದ್ಧ ಅಭಿಯಾನಕ್ಕೆ ಕೇರಳ ಬಿಜೆಪಿ ಸಜ್ಜು!

ಜಹಾಂಗೀರ್‌ಪುರಿ ಹಿಂಸಾಚಾರದ ಬಗ್ಗೆ ಉಲ್ಲೇಖ

ದೆಹಲಿಯ ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿಯಲ್ಲಿ ಕೈಗೊಂಡಿರುವ ಕಾರ್ಯಾಚರಣೆಯನ್ನು ಖಂಡಿಸಿದ ಅವರು, ಹಲವಾರು ಕಟ್ಟಡಗಳನ್ನು ಬುಲ್ಡೋಜಿಂಗ್ ಮಾಡುವುದು ಅಂಚಿನಲ್ಲಿರುವ ವರ್ಗಗಳನ್ನು ಬಲಿಪಶುವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದರು. ಇನ್ನು ವಿಜಯರಾಘವನ್ ಅವರು ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕರು, ಪೊಲೀಸರ ನಡುವೆ ಘರ್ಷಣೆ

ಕೇರಳದಲ್ಲಿ ಪುನರಾರಂಭಗೊಂಡ ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ಸಿಲ್ವರ್‌ಲೈನ್ ರೈಲು ಕಾರಿಡಾರ್ ಯೋಜನೆಗೆ ಸರ್ವೆ ಕಲ್ಲುಗಳನ್ನು ಹಾಕುವ ವೇಳೆ ಸೋಮವಾರ ರಾಜಧಾನಿ ಜಿಲ್ಲೆಯ ಕಣಿಯಾಪುರಂ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ. ಪ್ರತಿಭಟನೆ ತೀವ್ರಗೊಂಡಿದ್ದರಿಂದ ಅಧಿಕಾರಿಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಿ ಸ್ಥಳದಿಂದ ತೆರಳಿದ್ದಾರೆ.

ಸರ್ವೆ ಕಲ್ಲು ಹಾಕಲು ಆಗಮಿಸಿದ ಅಧಿಕಾರಿಗಳನ್ನು ಪ್ರತಿಪಕ್ಷ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ ಸ್ಥಳೀಯರ ಗುಂಪು ತಡೆದಿದೆ. ಅಧಿಕಾರಿಗಳನ್ನು ಕರೆದೊಯ್ದ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ತೆರಳುವಂತೆ ಹೇಳಿದಾಗ ಘರ್ಷಣೆ ಉಂಟಾಗಿದೆ. ಪ್ರತಿಭಟನಾಕಾರರು ಸ್ಥಳದಲ್ಲಿ ಜಮಾಯಿಸುವುದನ್ನು ಮುಂದುವರಿಸುತ್ತೇವೆ ಮತ್ತು ಅಧಿಕಾರಿಗಳು ಸರ್ವೆ ಕಲ್ಲುಗಳನ್ನು ಹಾಕಲು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿದರು. ಹಾಗೆಯೇ ಪೊಲೀಸರು ಬೂಟಿನಿಂದ ತುಳಿದಿದ್ದಾರೆ. ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೆಯೇ ಸರ್ವೆ ಕಲ್ಲು ಹಾಕಲು ಬಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಆದರೆ ಪೊಲೀಸರು ಪ್ರತಿಭಟನಾಕಾರರ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಯಾವುದೇ ಪ್ರತಿಭಟನಾಕಾರರನ್ನು ಉದ್ದೇಶಪೂರ್ವಕವಾಗಿ ನಾವು ತಳಿಸಿಲ್ಲ. ಅಧಿಕಾರಿಗಳಿಗೆ ರಕ್ಷಣೆ ನೀಡಲು ಮಾತ್ರ ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ. ಸುಮಾರು ಒಂದು ತಿಂಗಳ ಅಂತರದ ನಂತರ ಅಧಿಕಾರಿಗಳು ಸರ್ವೆ ಶಿಲಾನ್ಯಾಸ ಪ್ರಕ್ರಿಯೆಯನ್ನು ಪುನರಾರಂಭಿಸಿದ್ದಾರೆ. ಈ ಯೋಜನೆಯ ವಿರುದ್ಧ ಆರಂಭದಿಂದಲೂ ಕೇರಳದ ಹಲವಾರು ಭಾಗಗಳಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.

English summary
Congress, BJP, extremist outfits behind SilverLine agitation in Kerala Alleges CPI(M) Polit Bureau member A. Vijayaraghavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X