ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಕ್ಕಿ ಜ್ವರ ನಿಯಂತ್ರಣಕ್ಕೆ ಕೇರಳದಲ್ಲಿ 12 ಸಾವಿರ ಕೋಳಿ, ಪಕ್ಷಿಗಳ ಹತ್ಯೆ

|
Google Oneindia Kannada News

ಕಲ್ಲಿಕೋಟೆ, ಮಾರ್ಚ್ 9: ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾಕಿದ ಕೋಳಿಗಳು ಮತ್ತು ಹಕ್ಕಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗುತ್ತಿದೆ.

ವೆಂಗೆರಿ ಮತ್ತು ಕೊಡಿಯಾಥೂರ್ ಪ್ರದೇಶದಲ್ಲಿ 1 ಕಿ.ಮೀ ಅಂತರದಲ್ಲಿ ಎರಡು ಪೌಲ್ಟ್ರಿಯಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಹತ್ಯೆ ಮಾಡಲಾಗಿದೆ.

ಕೊರೊನಾ ವೈರಸ್ ಭೀತಿಯ ನಡುವೆ ಕೇರಳದಲ್ಲಿ ಹಕ್ಕಿ ಜ್ವರ!ಕೊರೊನಾ ವೈರಸ್ ಭೀತಿಯ ನಡುವೆ ಕೇರಳದಲ್ಲಿ ಹಕ್ಕಿ ಜ್ವರ!

ಇದರಲ್ಲಿ ಹೆಚ್ಚಿನವು ಸಾಕು ಕೋಳಿ, ಟರ್ಕಿ ಮತ್ತು ಲವ್ ಬರ್ಡ್‌ಗಳಾಗಿವೆ. ಈ ಕಾರ್ಯದಲ್ಲಿ ತರಬೇತಿ ಪಡೆದ 200 ಸಿಬ್ಬಂದಿ ಹಾಗೂ ಕ್ಷಿಪ್ರ ನಿರ್ವಹಣೆ ಪಡೆಯ ಸಿಬ್ಬಂದಿ ಭಾಗಿಯಾಗಲಿದ್ದಾರೆ. ಜೊತೆಗೆ ಪಕ್ಷಿಗಳನ್ನು ಇರಿಸಿದ್ದ ಪಂಜರವನ್ನು ಸುಡುವಂತೆ ಸೂಚನೆ ನೀಡಲಾಗಿದೆ.

Bird Flu Kerala Government Killed More than 2 Thousand Birds

ಕೋಳಿ ಫಾರಂ ಸುತ್ತ ಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಹಕ್ಕಿ ಜ್ವರ ಮತ್ತು ಹಕ್ಕಿ ಜ್ವರಕ್ಕೆ ಕಾರಣವಾಗುವ H5N1 ವೈರಾಣುವನ್ನು ತಡೆಗಟ್ಟಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಕ್ಕಿ ಜ್ವರ ಸೋಂಕು ತಗುಲಿರುವ ಎಲ್ಲಾ ಕೋಳಿಗಳನ್ನು ಸಂಹಾರ ಮಾಡಲು ಆದೇಶಿಸಲಾಗಿದೆ.

200 ಕೋಳಿಗಳು ಪ್ರತಿದಿನ ಸಾವನ್ನಪ್ಪುತ್ತಿರುವುದರಿಂದ ಅನುಮಾನಗೊಂಡು ಕಣ್ಣೂರು ಲ್ಯಾಬ್ ಮತ್ತು ಭೋಪಾಲ್ ಲ್ಯಾಬ್ ಗಳಿಗೆ ಪರೀಕ್ಷಾ ಸ್ಯಾಂಪಲ್ ಗಳನ್ನು ಕಳುಹಿಸಿಕೊಡಲಾಗಿತ್ತು. ಸ್ಯಾಂಪಲ್ ಗಳಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಆದ್ರೆ, ಆತಂಕ ಪಡುವ ಅಗತ್ಯ ಇಲ್ಲ ಎಂದು ಸಚಿವ ಕೆ.ರಾಜು ತಿರುವನಂತಪುರಂನಲ್ಲಿ ತಿಳಿಸಿದ್ದಾರೆ.

English summary
Breeding chickens and birds are being massacred as a precautionary measure in the wake of bird flu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X