ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಡಂಬಿ ಕಾರ್ಮಿಕರ ಜೊತೆಗೆ ರಾಹುಲ್ ಮಾತು, ಸಮಸ್ಯೆ ಬಗೆಹರಿಸುವ ಭರವಸೆ

|
Google Oneindia Kannada News

ತಿರುವನಂತಪುರಂ, ಸೆ.16: ಕೇರಳದ ಸಾಂಪ್ರದಾಯಿಕ ಉದ್ಯಮವಾಗಿರುವ ಗೋಡಂಬಿ ವಲಯವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕಾರ್ಮಿಕರ ಕುಂದುಕೊರತೆಗಳನ್ನು ಮಂಡಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

'ಭಾರತ್ ಜೋಡೋ ಯಾತ್ರೆ'ಗೆ ಎಂಟು ದಿನಗಳು ಪೂರ್ಣಗೊಂಡಿವೆ ಯಾತ್ರೆಯ ಅಂಗವಾಗಿ ರಾಹುಲ್ ಗಾಂಧಿ ಶುಕ್ರವಾರ ಕೊಲ್ಲಂ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಕೊಲ್ಲಂನ ನೀಂದಕರದಲ್ಲಿ ಆಯ್ದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಧಿಕಾರಕ್ಕೆ ಬಂದರೆ ಅವರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.

Breaking News: 'ಭಾರತ್ ಜೋಡೋ ಯಾತ್ರೆ'ಗೆ ಬಲವಂತದ ದೇಣಿಗೆ ಸಂಗ್ರಹ: 3 ಕಾಂಗ್ರೆಸ್ ಕಾರ್ಯಕರ್ತರ ಅಮಾನತುBreaking News: 'ಭಾರತ್ ಜೋಡೋ ಯಾತ್ರೆ'ಗೆ ಬಲವಂತದ ದೇಣಿಗೆ ಸಂಗ್ರಹ: 3 ಕಾಂಗ್ರೆಸ್ ಕಾರ್ಯಕರ್ತರ ಅಮಾನತು

ಸೌಕರ್ಯಗಳಿಂದ ವಂಚಿತವಾಗಿರುವ ಗೋಡಂಬಿ ಕಾರ್ಮಿಕರು

ಸೌಕರ್ಯಗಳಿಂದ ವಂಚಿತವಾಗಿರುವ ಗೋಡಂಬಿ ಕಾರ್ಮಿಕರು

ಬಿಕ್ಕಟ್ಟಿನಿಂದಾಗಿ ಹೆಚ್ಚಿನ ಕಾರ್ಖಾನೆಗಳು ಬೀಗ ಹಾಕಿದ್ದರೇ, ಕೆಲವು ಕಾರ್ಮಿಕರು ಕಳೆದ ಏಳು ವರ್ಷಗಳಿಂದ ತಮ್ಮ ವೇತನವನ್ನು ಪರಿಷ್ಕರಿಸಿಲ್ಲ ಎಂದು ಅಳಲು ಹೇಳಿಕೊಂಡಿದ್ದಾರೆ. ಈ ವೇಳೆ ಅನೇಕ ಗೋಡಂಬಿ ಕಾರ್ಮಿಕರು ಇಪಿಎಫ್ ಪಿಂಚಣಿ ಮತ್ತು ಇಎಸ್‌ಐ ಸವಲತ್ತುಗಳು ಸೇರಿದಂತೆ ಯಾವುದೇ ಪ್ರಯೋಜನಗಳನ್ನು ಪಡೆಯುತ್ತಿಲ್ಲ ಎಂದು ರಾಹುಲ್ ಗಾಂಧಿ ಗಮನಕ್ಕೆ ತಂದರು.

"ಚಿಕಿತ್ಸೆ ಬಿಡಿ, ಇಎಸ್‌ಐ ಆಸ್ಪತ್ರೆಗಳು ಔಷಧಗಳನ್ನೂ ನೀಡುತ್ತಿಲ್ಲ. ನಮ್ಮ ಕೆಲಸದ ದಿನಗಳು ತುಂಬಾ ಕಡಿಮೆಯಿರುವುದರಿಂದ, ನಾವು ಯಾವುದೇ ಪ್ರಯೋಜನಗಳನ್ನು ಪಡೆಯುವುದಿಲ್ಲ" ಎಂದು ಗೋಡಂಬಿ ಕಾರ್ಮಿಕರು ಆರೋಪಿಸಿದ್ದು, ಸಮಸ್ಯೆ ಬಗೆ ಹರಿಸುವಲ್ಲಿ ಮಧ್ಯಪ್ರವೇಶಿಸಲು ವಿನಂತಿಸಿದರು.

ಅಧಿವೇಶನದಲ್ಲಿ ಕಾರ್ಮಿಕರ ಸಮಸ್ಯೆ ಪ್ರಸ್ತಾವದ ಭರವಸೆ ನೀಡಿದ ರಾಹುಲ್

ಅಧಿವೇಶನದಲ್ಲಿ ಕಾರ್ಮಿಕರ ಸಮಸ್ಯೆ ಪ್ರಸ್ತಾವದ ಭರವಸೆ ನೀಡಿದ ರಾಹುಲ್

"ತೆಂಗಿನಕಾಯಿ ಕ್ಷೇತ್ರದಂತೆ ಗೋಡಂಬಿ ಉದ್ಯಮವೂ ಕುಸಿಯುವ ಆತಂಕವಿದೆ. ಈಗಿನ ಸ್ಥಿತಿಯಲ್ಲಿ, ಉದ್ಯಮವು ಬಹುಶಃ ಒಂದು ವರ್ಷಕ್ಕಿಂತ ಹೆಚ್ಚು ಉಳಿಯುವುದಿಲ್ಲ. ಕೆಲಸದ ದಿನಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು, ನಮ್ಮ ಜೀವನೋಪಾಯಕ್ಕೆ ಅವಕಾಶವನ್ನು ಒದಗಿಸಬೇಕು" ಎಂದು ಪೆರಿನಾಡು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಸಿಂಧು ಹೇಳಿದರು.

ಅವರ ಬೇಡಿಕೆಗಳನ್ನು ಗಮನಿಸಿದ ರಾಹುಲ್ ಗಾಂಧಿ, ಗೋಡಂಬಿ ಕಾರ್ಮಿಕರ ಸಮಸ್ಯೆಗಳನ್ನು ಮುಂದಿನ ಲೋಕಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಭರವಸೆ ನೀಡಿದರು. ಯುಡಿಎಫ್ ಸರಕಾರ ಕಾರ್ಮಿಕರೊಂದಿಗೆ ನಿಲ್ಲುತ್ತದೆ. ಸಂಸತ್ತು ಮತ್ತು ಕೇರಳ ವಿಧಾನಸಭೆಯಲ್ಲಿ ಅವರ ಹಕ್ಕುಗಳಿಗಾಗಿ ಹೋರಾಡುತ್ತದೆ. ಬೇಡಿಕೆಗಳು ಈಡೇರುವವರೆಗೆ ಉಭಯ ಸದನಗಳ ಒಳಗೆ ಮತ್ತು ಹೊರಗೆ ಪ್ರತಿಭಟನೆಗಳನ್ನು ತೀವ್ರಗೊಳಿಸುತ್ತೇವೆ ಎಂದು ತಿಳಿಸಿದರು.

ಶಾಲಾ ಬಸ್ ಹತ್ತಿ ವಿದ್ಯಾರ್ಥಿಗಳನ್ನು ಮಾತನಾಡಿಸಿದ ರಾಹುಲ್

ಭಾರತ್ ಜೋಡೋ ಯಾತ್ರೆ ವೇಳೆ ಶಾಲಾ ಕಾಲೇಜು ವಿದ್ಯಾರ್ಥಿಗಳು ರಾಹುಲ್ ಗಾಂಧಿ ಅವರನ್ನು ಕಂಡು ಉತ್ಸಾಹದಿಂದ ಕೂಗಿರುವ ಮತ್ತು ತಮ್ಮ ಸ್ನೇಹಿತರಿಗೆ 'ಅಲ್ಲಿ ನೋಡು ರಾಹುಲ್ ಗಾಂಧಿ' ಎಂದು ಕೂಗಿ ಹೇಳುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ.

ಈ ವೇಳೆ ರಾಹುಲ್ ಗಾಂಧಿ ಶಾಲಾ ಬಸ್ ಹತ್ತಿ ವಿದ್ಯಾರ್ಥಿಗಳಿಗೆ ಹಸ್ತಲಾಘವ ನೀಡಿ ಮಾತನಾಡಿಸಿದ್ದಾರೆ. ವಿಡಿಯೋ ನೋಡಿ

ಮೂವರು ಕಾಂಗ್ರೆಸ್ ಕಾರ್ಯಕರ್ತರ ಅಮಾನತು

ಮೂವರು ಕಾಂಗ್ರೆಸ್ ಕಾರ್ಯಕರ್ತರ ಅಮಾನತು

ಇತ್ತ, ಕಾಂಗ್ರೆಸ್ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ ನಡುವೆ ಕೇರಳದ ಕೊಲ್ಲಂನಲ್ಲಿ ಪಕ್ಷದ ಮೆರವಣಿಗೆಗೆ ಬಲವಂತವಾಗಿ ದೇಣಿಗೆ ಸಂಗ್ರಹ ನಡೆಸಿರುವ ಘಟನೆ ನಡೆದಿದೆ. ತರಕಾರಿ ಅಂಗಡಿಯ ಮಾಲೀಕರಿಗೆ ಹಣದ ನೆರವು ನೀಡದಿದ್ದರೆ ಅವರ ಅಂಗಡಿ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುವ ವಿಡಿಯೊ ವೈರಲ್ ಆಗಿದೆ. ಘಟನೆ ಬಳಿಕ ಕಾಂಗ್ರೆಸ್ ಮೂವರು ಕಾರ್ಯಕರ್ತರ ಮೇಲೆ ಕ್ರಮ ಕೈಗೊಂಡಿದ್ದು, ಪಕ್ಷದಿಂದ ಅಮಾನತು ಮಾಡಿದೆ.


ರಾಜ್ಯ ಘಟಕದ ರಾಜಕೀಯವು ಸಣ್ಣ ದೇಣಿಗೆಯ ಮೇಲೆ ನಡೆಯುತ್ತದೆ ಎಂದು ವಿವರಿಸಿದ ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್, "ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು ವರ್ಷಗಳಿಂದ ಕ್ರೌಡ್‌ಫಂಡಿಂಗ್ ಮಾಡುತ್ತಿದೆ. ಅವರ ರಾಜಕೀಯವು ತಳಮಟ್ಟದಲ್ಲಿ ಸಣ್ಣ ದೇಣಿಗೆಗಳ ಮೇಲೆ ನಡೆಯುತ್ತದೆ. ಆದರೆ ಇದು ಆಗಬಾರದಿತ್ತು. ಈ ಮೂವರ ವಿರುದ್ಧ ಪಿಸಿಸಿ ಅಧ್ಯಕ್ಷರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

English summary
Bharat Jodo Yatra: congress leader Rahul Gandhi meets cashew workers in Kollam. This morning the students spoke to him enthusiastically. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X