ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಹಿಂಸಾಚಾರ: ಪುನರ್ ಪ್ರಸಾರ ಆರಂಭಿಸಿದ ಏಷ್ಯಾನೆಟ್, ಮೀಡಿಯಾ ಒನ್

|
Google Oneindia Kannada News

ಮಾರ್ಚ್ 07: ಮಲಯಾಳಂನ ನ್ಯೂಸ್ ಚಾನೆಲ್ ಗಳಾದ ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಪುನರ್ ಪ್ರಸಾರ ಆರಂಭಿಸಿದೆ.

ದೆಹಲಿ ಗಲಭೆ ಕುರಿತು ಪಕ್ಷಪಾತದ ವರದಿ ಪ್ರಸಾರ ಮಾಡಿದ ಆರೋಪದ ಮೇಲೆ ನಿನ್ನೆ (ಶುಕ್ರವಾರ, ಮಾರ್ಚ್ 6) ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಎರಡೂ ವಾಹಿನಿಗಳನ್ನ 48 ಗಂಟೆಗಳ ಕಾಲ ಬ್ಯಾನ್ ಮಾಡಿತ್ತು.

ದೆಹಲಿ ಗಲಭೆ: ಏಷ್ಯಾನೆಟ್, ಮೀಡಿಯಾ ಒನ್ ವಾಹಿನಿಗಳು ಬ್ಯಾನ್ದೆಹಲಿ ಗಲಭೆ: ಏಷ್ಯಾನೆಟ್, ಮೀಡಿಯಾ ಒನ್ ವಾಹಿನಿಗಳು ಬ್ಯಾನ್

ನಿನ್ನೆ ಶುಕ್ರವಾರ ಸಂಜೆ 7.30 ರಿಂದ ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ವಾಹಿನಿಯ ಪ್ರಸಾರದ ಮೇಲೆ ನಿರ್ಬಂಧ ಹೇರಲಾಗಿತ್ತು. ಆದ್ರೆ, 48 ಗಂಟೆಗಳು ಪೂರ್ಣಗೊಳ್ಳುವ ಮುನ್ನವೇ ಈ ಎರಡೂ ವಾಹಿನಿಗಳು ಮತ್ತೆ ಪ್ರಸಾರ ಆರಂಭಿಸಿವೆ.

Asianet And Media One Are Back On Air

ಏಷ್ಯಾನೆಟ್ ಮತ್ತು ಮೀಡಿಯಾ ಒನ್ ಮೇಲೆ ಹೇರಿದ್ದ ನಿರ್ಬಂಧವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ವಾಪಸ್ ಪಡೆದಿದೆ.

ಸಿಎಎ ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಕುರಿತು ಏಷ್ಯಾನೆಟ್ ಮತ್ತು ಮೀಡಿಯಾ ಒನ್ ವಾಹಿನಿಗಳು ಪ್ರಚೋದನಾಕಾರಿ ವರದಿಗಳನ್ನು ಪ್ರಸಾರ ಮಾಡಿತ್ತು. ಧಾರ್ಮಿಕ ಸ್ಥಳಗಳ ಮೇಲೆ ನಡೆದ ದಾಳಿಯ ಬಗ್ಗೆ ನಿರ್ದಿಷ್ಟ ಸಮುದಾಯದ ಪರವಾಗಿ ವರದಿ ಮಾಡಿ, ಕೇಬಲ್ ಟೆಲಿವಿಷನ್ ನೆಟ್ ವರ್ಕ್ಸ್ ಆಕ್ಟ್ 1994 ರ ಅಡಿ ನಿಯಮ 6(1c) ಮತ್ತು ನಿಯಮ 6(1e) ಗಳನ್ನು ಉಲ್ಲಂಘಿಸಿತ್ತು. ಹೀಗಾಗಿ, ಈ ಎರಡು ವಾಹಿನಿಗಳ ವಿರುದ್ಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 48 ಗಂಟೆಗಳ ಕಾಲ ನಿರ್ಬಂಧ ಹೇರಿತ್ತು.

English summary
Asianet and Media one are back on air.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X