• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂಸಾಚಾರಕ್ಕೆ ತಿರುಗಿದ ಕೇರಳ ಬಂದ್‌: ಶಬರಿಮಲೆ ಬೂದಿ ಮುಚ್ಚಿದ ಕೆಂಡ

|

ತಿರುವನಂತಪುರಂ, ಜನವರಿ 03: ಶಬರಿಮಲೆಗೆ ಇಬ್ಬರು ನಡುವಯಸ್ಸಿನ ಹೆಣ್ಣುಮಕ್ಕಳು ಪ್ರವೇಶಿಸಿದ್ದನ್ನು ವಿರೋಧಿಸಿ ಇಂದು ಕರೆ ನೀಡಿದ್ದ ಬಂದ್‌ನಲ್ಲಿ ಹಿಂಸಾಚಾರ ನಡೆಯಿತು.

ಬಿಜೆಪಿಯ ನಾಲ್ಕು ಕಾರ್ಯಕರ್ತರಿಗೆ ಚಾಕು ಇರಿಯಲಾಗಿದೆ. ಒಬ್ಬ ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಹಲವು ಸಿಪಿಐಎಂ ಕಾರ್ಯಕರ್ತರಿಗೂ ಗಾಯಗಳಾಗಿವೆ. ಹಲವೆಡೆ ಬಿಜೆಪಿ ಮತ್ತು ಸಿಪಿಐಎಂ ಕಾರ್ಯಕರ್ತರ ನಡುವೆ ಗಲಾಟೆಗಳು ನಡೆದವು.

ಮತ್ತೆ ರಣರಂಗವಾದ ಶಬರಿಮಲೆ, ಇಂದು ಕೇರಳ ಬಂದ್!

ಮೊನ್ನೆ ಇಳಿ ರಾತ್ರಿ 3:45 ರ ವೇಳೆಗೆ ಇಬ್ಬರು ಮಹಿಳೆಯರು ಅಯ್ಯಪ್ಪ ದೇವಾಲಯ ಪ್ರವೇಶಿಸಿದ್ದಕ್ಕೆ ಅಯ್ಯಪ್ಪ ದೇವಾಲಯವನ್ನು ಶುದ್ಧೀಕರಿಸಲಾಗಿತ್ತು. ಇದನ್ನು ಸಿಎಂ ಪಿಣರಾಯಿ ವಿಜಯನ್ ಅವರು ತೀವ್ರವಾಗಿ ವಿರೋಧಿಸಿದ್ದಾರೆ.

ಸುಪ್ರಿಂಕೋರ್ಟ್‌ ತೀರ್ಪು ಇಷ್ಟವಾಗಲಿಲ್ಲವೆಂದರೆ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕರೇ ರಾಜೀನಾಮೆ ನೀಡಲಿ ಎಂದು ಪಿಣರಾಯಿ ವಿಜಯನ್ ಹೇಳಿದರು.

ಬೇಕಿದ್ದರೆ ಶಬರಿಮಲೆ ಮುಖ್ಯ ಅರ್ಚಕ ರಾಜೀನಾಮೆ ನೀಡಲಿ: ಕೇರಳ ಸಿಎಂ

ಕೇರಳದಲ್ಲಿ ಶಬರಿಮಲೆ ವಿವಾದದಿಂದಾಗಿ ಬುಗಿಲೆದ್ದಿರುವ ಹಿಂಸಾಚಾರದಿಂದಾಗಿ ಕರ್ನಾಟಕ ಸಾರಿಗೆ ಸಂಸ್ಥೆಯು ಕೇರಳಕ್ಕೆ ಕರ್ನಾಟಕ ಸಾರಿಗೆ ಬಸ್‌ ತೆರಳುತ್ತಿಲ್ಲ, ಖಾಸಗಿ ಬಸ್‌ಗಳೂ ಸಹ ತೆರಳುತ್ತಿಲ್ಲ.

ಶಬರಿಮಲೆ ದೇವಾಲಯ ಪ್ರವೇಶಿಸಿದ 'ಅವಳು' ಬ್ರಾಹ್ಮಣ ಕುಟುಂಬದವಳು

ರಾತ್ರೋ ರಾತ್ರಿ ಶಬರಿಮಲೆಗೆ ತೆರಳಿದ ಬಿಂದು ಮತ್ತು ಕನಕದುರ್ಗ ಅವರ ಬಗ್ಗೆ ಹಲವು ಮಾಹಿತಿಗಳು ಇಂದು ಹೊರಬಿದ್ದವು. ಇಬ್ಬರಲ್ಲಿ ಬಿಂದು ದಲಿತ ಸಮುದಾಯದವರಾಗಿದ್ದರೆ, ಕನಕದುರ್ಗ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಇಬ್ಬರೂ ಶಬರಿಮಲೆಗೆ ತೆರಳುವ ಮುಂಚೆ ಕೊಡಗಿನ ವಿರಾಜಪೇಟೆಯಲ್ಲಿ ತಂಗಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ.

ತಿರುವನಂತಪುರಂ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2019
ಶಶಿ ತರೂರ್ ಐ ಎನ್ ಸಿ ಗೆದ್ದವರು 4,16,131 41% 99,989
ಕುಮ್ಮಣಂ ರಾಜಶೇಖರನ್ ಬಿ ಜೆ ಪಿ ರನ್ನರ್ ಅಪ್ 3,16,142 31% 99,989
2014
ಡಾ. ಶಶಿ ತರೂರ್ ಐ ಎನ್ ಸಿ ಗೆದ್ದವರು 2,97,806 34% 15,470
ಶ್ರೀ ಓ ರಾಜಗೋಪಾಲ ಬಿ ಜೆ ಪಿ ರನ್ನರ್ ಅಪ್ 2,82,336 32% 0
2009
ಶಶಿ ತರೂರ್ ಐ ಎನ್ ಸಿ ಗೆದ್ದವರು 3,26,725 44% 99,998
ಅಡ್ವೊಕೇಟ್ ಪಿ. ರಾಮಚಂದ್ರನ್ ನಾಯರ್ ಸಿ ಪಿ ಐ ರನ್ನರ್ ಅಪ್ 2,26,727 31% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sabarimala bandh turned into violence. Several BJP and CPIM party workers gets injuired. One BJP paty worker died.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more