ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಗಲಭೆ: ಏಷ್ಯಾನೆಟ್, ಮೀಡಿಯಾ ಒನ್ ವಾಹಿನಿಗಳು ಬ್ಯಾನ್

|
Google Oneindia Kannada News

ಮಲಯಾಳಂನ 'ಏಷ್ಯಾನೆಟ್ ನ್ಯೂಸ್' ಮತ್ತು 'ಮೀಡಿಯಾ ಒನ್' ವಾಹಿನಿಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬ್ಯಾನ್ ಮಾಡಿದೆ. ವಾಹಿನಿಗಳ ಪ್ರಸಾರದ ಮೇಲೆ 48 ಗಂಟೆಗಳ ಕಾಲ ನಿರ್ಬಂಧ ಹೇರಿದ್ದು, ಈ ವಾಹಿನಿಗಳು ಮಾರ್ಚ್ 8 ರಂದು ಸಂಜೆ 7.30ಕ್ಕೆ ಪ್ರಸಾರವನ್ನು ಪುನರಾರಂಭಿಸಬಹುದಾಗಿದೆ.

'ದೆಹಲಿ ಗಲಭೆ'ಗಳ ಪ್ರಸಾರ ವಿಚಾರವಾಗಿ ಈ ಎರಡು ವಾಹಿನಿಗಳ ಮೇಲೆ ನಿರ್ಬಂಧ ಹೇರಲಾಗಿದೆ. ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಪ್ರಚೋದನಕಾರಿ ವರದಿಗಳನ್ನು ಹಾಗೂ ಪಕ್ಷಪಾತ ವರದಿಗಳನ್ನು ಪ್ರಸಾರ ಮಾಡಿದೆ ಎಂಬ ಕಾರಣಕ್ಕೆ ಈ ವಾಹಿನಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Asianet News And Media One Channels banned

ಆರ್‌ಎಸ್‌ಎಸ್ ಮತ್ತು ದೆಹಲಿ ಪೊಲೀಸರನ್ನು ಟೀಕಿಸಬಹುದು, ನಿರ್ದಿಷ್ಟ ಸಮುದಾಯದ ಪರವಾಗಿರಬಹುದು ಎಂಬ ಸುದ್ದಿಗಳು ಈ ವಾಹಿನಿಯಲ್ಲಿ ಪ್ರಸಾರ ಆಗಿತ್ತು. ಈಶಾನ್ಯ ದೆಹಲಿ ಹಿಂಸಾಚಾರದ ವರದಿಗಳ ಪ್ರಸಾರವನ್ನು ಪೂಜಾ ಸ್ಥಳಗಳ ಮೇಲಿನ ದಾಳಿ ಮತ್ತು ನಿರ್ದಿಷ್ಟ ಸಮುದಾಯದ ಕಡೆಗೆ ಎತ್ತಿ ತೋರಿಸುವ ರೀತಿಯಲ್ಲಿ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮುಸ್ಲಿಮರ ಮನೆಗಳ ಮೇಲೆ ದಾಳಿ ಮಾಡಿರುವುದು, ಗಲಭೆಕೋರರು ಪ್ರಯಾಣಿಕರನ್ನು ನಿರ್ಬಂಧಿಸುವುದು ಮತ್ತು ಅವರ ಧರ್ಮಕ್ಕಾಗಿ ಅವರ ಮೇಲೆ ಹಲ್ಲೆ ನಡೆಸುವುದು ಹೀಗೆ ಏಷ್ಯನೆಟ್ ದೆಹಲಿ ಗಲಭೆ ಬಗ್ಗೆ ವರದಿ ಮಾಡಿತ್ತು ಎಂದು ಹಾಗೂ ಕೇಬಲ್ ಟೆಲಿವಿಷನ್ ಕಾಯ್ದೆ 1995 ಉಲ್ಲಂಘನೆ ಮಾಡಿರುವ ಕಾರಣ ಈ ಕ್ರಮ ಕೈಗೊಂಡಿದೆ.

ದೆಹಲಿ ನ್ಯಾಯಾಲಯವು ಶುಕ್ರವಾರ, ಅಂಕಿತ್ ಶರ್ಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡ ಎಎಪಿ ಕೌನ್ಸಿಲರ್ ತಾಹೀರ್ ಹುಸೇಸ್‌ನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಕಳೆದ ವಾರ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಿಂದ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 53 ಕ್ಕೆ ಏರಿದೆ. ಜಿಟಿಬಿ ಆಸ್ಪತ್ರೆಯಲ್ಲಿ 44, ಆರ್‌ಎಂಎಲ್ ಆಸ್ಪತ್ರೆಯಿಂದ 5, ಎಲ್‌ಎನ್‌ಜೆಪಿ ಆಸ್ಪತ್ರೆಯಿಂದ 3 ಮತ್ತು ಜಗ್ ಪ್ರವೀಶ್ ಚಂದ್ರ ಆಸ್ಪತ್ರೆಯಿಂದ 1 ಸಾವು ಸಂಭವಿಸಿದೆ.

English summary
Malayalam Channels Asianet news and media one banned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X