• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ ಕೊರೊನಾ ಸೋಂಕು ಗರಿಷ್ಠ ಮಟ್ಟ ತಲುಪಿಲ್ಲ: ಶೈಲಜಾ

|

ತಿರುವನಂತಪುರಂ,ಅಕ್ಟೋಬರ್ 10: ಕೇರಳದಲ್ಲಿ ಕೊರೊನಾ ಸೋಂಕು ಇನ್ನೂ ಗರಿಷ್ಠ ಮಟ್ಟ ತಲುಪಿಲ್ಲ ಎಂದು ಆರೋಗ್ಯ ಇಲಾಖೆಯು ಹೇಳಿದೆ.

ಮೊದಲು ನಾಲ್ಕೂವರೆ ತಿಂಗಳಲ್ಲಿ 10 ಸಾವಿರ ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು, ಇದೀಗ ಬುಧವಾರ ಒಂದೇ ದಿನ 10 ಸಾವಿರ ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.

ಭಾರತದಲ್ಲಿ ಇಂದು 73,272 ಕೊರೊನಾ ಸೋಂಕಿತರು ಪತ್ತೆ

ಕಳೆದ ಕೆಲ ದಿನಗಳಿಂದ ಕೇರಳ ಹಾಗೂ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ಕೇರಳದಲ್ಲಿ 1.93 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದೀಗ 2.68 ಲಕ್ಷ ಕೊರೊನಾ ಸೋಂಕಿತರಿದ್ದಾರೆ. 90 ಸಾವಿರದಷ್ಟು ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ನಂತರ ಸ್ಥಾನದಲ್ಲಿ ಕೇರಳವಿದೆ.

ಜೂನ್‌ನಿಂದ ಸೆಪ್ಟೆಂಬರ್ ವರೆಗೆ 9 ಲಕ್ಷ ಜನರು ಕೇರಳಕ್ಕೆ ವಾಪಸ್ ಬಂದಿದ್ದಾರೆ. ಓಣಂ ಸಂದರ್ಭದಲ್ಲಿ ಕೂಡ ಕೊರೊನಾ ಸೋಂಕು ಹೆಚ್ಚಳವಾಗಿದೆ. ಬಳಿಕ ಪ್ರತಿಪಕ್ಷಗಳ ಪ್ರತಿಭಟನೆಯಿಂದಲೂ ಕೊರೊನಾ ಸೋಂಕು ಹೆಚ್ಚಿದೆ.ಹೀಗಾಗಿ ಅನಿವಾರ್ಯವಾಗಿ ಜನರಿಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಸಚಿವೆ ಶೈಲಜಾ ತಿಳಿಸಿದ್ದಾರೆ.

ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಸಭೆ ಸಮಾರಂಭಗಳಿಗೆ ತೆರಳುವುದನ್ನು ಕಡಿಮೆ ಮಾಡಬೇಕು, ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದರು.

ಗರಿಷ್ಠ ಮಟ್ಟಕ್ಕೆ ಹೋಗಲು ಬಿಡುವುದಿಲ್ಲ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಮೊದಲು ಕೊರೊನಾದಿಂದ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬೇಕಿದೆ. ಮೇ ಹಾಗೂ ಜೂನ್‌ಗೆ ಹೋಲಿಸಿದರೆ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟು ಹೆಚ್ಚಾಗಿದೆ. ಆದರೆ ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಿದೆ.

English summary
Kerala, the first state to get the novel coronavirus, took four-and-a-half months to record its first 10,000 infections. This Wednesday, it reported more than 10,000 infections in a single day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X