ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರೀಕ್ಷಾರ್ಥ ಸಂಚಾರ ಮುಗಿಸಿ ಹಿಂದಿರುಗಿದ ಐಎಸಿ ವಿಕ್ರಾಂತ್ ವಿಮಾನವಾಹಕ ನೌಕೆ

|
Google Oneindia Kannada News

ಕೊಚ್ಚಿ, ಆಗಸ್ಟ್ 09: ಭಾರತದ ಹೆಮ್ಮೆಯ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎಸಿ ವಿಕ್ರಾಂತ್ ಪರೀಕ್ಷಾರ್ಥ ಸಂಚಾರ ಮುಗಿಸಿ ಸೇವೆಗೆ ಸಿದ್ಧವಾಗಿದೆ.

ಮುಂದಿನ ವರ್ಷ ಆಗಸ್ಟ್ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸುವ ಹಿನ್ನಲೆಯಲ್ಲಿ ಅದಕ್ಕೂ ಮುಂಚಿತವಾಗಿ ನಿರ್ಣಾಯಕ ಸಮುದ್ರ ಪ್ರಯೋಗಗಳಿಗಾಗಿ ಆಗಸ್ಟ್ 4 ರಂದು ಕೊಚ್ಚಿಯಿಂದ ಐಎಸಿ ವಿಕ್ರಾಂತ್ ಪ್ರಯಾಣ ಬೆಳೆಸಿತ್ತು.

ಸುಮಾರು 40,000 ಟನ್​ ತೂಕದ ಈ ಯುದ್ಧನೌಕೆಯ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು, ಐದು ದಿನಗಳ ಸಮುದ್ರ ಪ್ರಯೋಗ ಕಳೆದ ಬುಧವಾರದಿಂದ ಪ್ರಾರಂಭವಾಗಿತ್ತು. ಇಂದು ತನ್ನ ಪರೀಕ್ಷಾರ್ಥ ಪ್ರಯಾಣ ಪೂರ್ಣಗೊಳಿಸಿ ನೌಕೆ ಹಿಂದಿರುಗಿದೆ.

Aircraft Carrier Vikrant Returns After Sea Trials

ಭಾರತದ ಮೊದಲ ದೇಶೀಯ ವಿಮಾನ ವಾಹಕ ಯುದ್ಧನೌಕೆ ವಿಕ್ರಾಂತ್ ತನ್ನ ಐದು ದಿನಗಳ ಪರೀಕ್ಷಾರ್ಥ ಸಂಚಾರ ಮುಗಿಸಿ ಹಿಂದಿರುಗಿದೆ. ಈ ನೌಕೆಯನ್ನು ಸುಮಾರು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಈ ಯುದ್ಧನೌಕೆ 262 ಮೀಟರ್​ ಉದ್ದವಿದ್ದು, 62 ಮೀಟರ್​ ಅಗಲವಾಗಿದೆ. 59 ಮೀಟರ್​ ಎತ್ತರವಿದೆ.

ಒಟ್ಟಾರೆ 14 ಡೆಕ್​ಗಳಿವೆ. ಈ ಯುದ್ಧನೌಕೆಯಲ್ಲಿ ಮಿಗ್ -29 ಕೆ ಯುದ್ಧ ವಿಮಾನಗಳು, ಕಮೋವ್-31 ಹೆಲಿಕಾಪ್ಟರ್‌ಗಳು, ಎಂಎಚ್ -60 ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳು ಕಾರ್ಯ ನಿರ್ವಹಿಸುತ್ತವೆ.

ಇದು ಸುಮಾರು 28 ನಾಟಿಕಲ್ ಗರಿಷ್ಠ ವೇಗವನ್ನು ಹೊಂದಿದ್ದು, ಸುಮಾರು 7,500 ನಾಟಿಕಲ್ ಮೈಲುಗಳನ್ನು 18 ನಾಟಿಕಲ್ ವೇಗದೊಂದಿಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

Aircraft Carrier Vikrant Returns After Sea Trials

ಈ ನೌಕೆಯಲ್ಲಿ 2,300 ಕ್ಕೂ ಹೆಚ್ಚು ಕಂಪಾರ್ಟ್ ಮೆಂಟ್ ಗಳಿದ್ದು, ಸುಮಾರು 1,700 ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ. ಮಹಿಳಾ ಅಧಿಕಾರಿಗಳಿಗೆ ಲಿಂಗ-ಸೂಕ್ಷ್ಮ ವಸತಿ ಸೌಕರ್ಯಗಳಿವೆ. ಯಂತ್ರೋಪಕರಣಗಳ ಕಾರ್ಯಾಚರಣೆ, ಹಡಗು ಸಂಚರಣೆ ಮತ್ತು ಬದುಕುಳಿಯುವಿಕೆಗೆ ಹೆಚ್ಚಿನ ಮಟ್ಟದ ಯಾಂತ್ರೀಕೃತಗೊಂಡ ಹಡಗನ್ನು ಸ್ಥಿರ-ವಿಂಗ್ ಮತ್ತು ರೋಟರಿ ವಿಮಾನಗಳ ವಿಂಗಡಣೆಗಾಗಿ ವಿನ್ಯಾಸಗೊಳಿಸಲಾಗಿದೆ.

ಈ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಮುಂದಿನ ವರ್ಷ ಆಗಸ್ಟ್​​ನಿಂದ ಭಾರತೀಯ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಯುದ್ಧ ನೌಕೆಯೀಗ ಯಶಸ್ವಿಯಾಗಿ ಪರೀಕ್ಷಾರ್ಥ ಸಂಚಾರವನ್ನು ಪೂರ್ಣಗೊಳಿಸಿದೆ.

ಐಎಸಿ ವಿಕ್ರಾಂಕ್ ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯಾಗಿದ್ದು, ಅಂದಾಜು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಕ್ರಾಂತ್​ ಯುದ್ಧನೌಕೆಯನ್ನು ತಯಾರಿಸಲಾಗಿದ್ದು.

Aircraft Carrier Vikrant Returns After Sea Trials

ಈ ಹಿಂದೆ 1961ರಿಂದ 1997ರವರೆಗೂ ಐಎನ್ಎಸ್ ವಿಕ್ರಾಂತ್ ಭಾರತೀಯ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಿತ್ತು. ಈ ನೌಕೆಯ ಗೌರವಾರ್ಥ ಮತ್ತು ಸ್ಮರಣಾರ್ಥವಾಗಿ ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಗೆ ಅದೇ ಹೆಸರನ್ನಿಡಲಾಗಿದೆ.

'ಈ ಯುದ್ಧನೌಕೆ 262 ಮೀಟರ್​ ಉದ್ದವಿದ್ದು, 62 ಮೀಟರ್​ ಅಗಲವಾಗಿದೆ. 59 ಮೀಟರ್​ ಎತ್ತರವಿದೆ. ಒಟ್ಟಾರೆ 14 ಡೆಕ್​ಗಳಿವೆ. ಯುದ್ಧ ನೌಕೆಯ ಸಿಸ್ಟಂ ಪ್ಯಾರಾಮೀಟರ್​ಗಳು ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿವೆ.

ವಿಕ್ರಾಂತ್ ಸೇರ್ಪಡೆಯೊಂದಿಗೆ ಭಾರತವು ಸ್ಥಳೀಯವಾಗಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿರುವ ಆಯ್ದ ಕೇಲವೇ ರಾಷ್ಟ್ರಗಳ ಗುಂಪಿಗೆ ಸೇರಿದಂತಾಗಿದೆ. ಇದು ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಉತ್ತೇಜನ ನೀಡುತ್ತದೆ. ಐಎಸಿಯ ಸೇರ್ಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇದು ಭಾರತದ ಪಾಲಿಗೆ ಐತಿಹಾಸಿಕ ದಿನ. ಯುದ್ಧನೌಕೆಯ ಐದು ದಿನಗಳ ಪ್ರಯೋಗದ ನಂತರ ನಾವೀಗ ಕೊಚ್ಚಿಗೆ ವಾಪಸ್​ ಆಗುತ್ತಿದ್ದೇವೆ. ನಮಗೀಗ ಸಂಪೂರ್ಣ ತೃಪ್ತಿಯಿದೆ. ಇಡೀ ತಂಡದ ಶ್ರಮದಿಂದ ಇಂಥದ್ದೊಂದು ಮಹತ್ವದ ಕಾರ್ಯ ಸಾಧಿಸಲು ಸಾಧ್ಯವಾಗಿದೆ ಎಂದು ಉಪ ನೌಕಾ ಸೇನಾಪತಿ ಎ.ಕೆ.ಚಾವ್ಲಾ ತಿಳಿಸಿದ್ದಾರೆ

English summary
Indigenous Aircraft Carrier (IAC) Vikrant returned after five-day sea trial to test the performance of the 40,000-tonne warship. IAC Vikrant, built at a cost of around ₹23,000 crore, set sail from Kochi on August 4 for the crucial sea trials ahead of its planned induction into the Indian Navy by August next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X