ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ N-95 ಮಾಸ್ಕ್‌ನಲ್ಲಿ ಅಕ್ರಮ ಚಿನ್ನ ಸಾಗಣೆ: ವಿಮಾನ ಪ್ರಯಾಣಿಕನ ಬಂಧನ

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 30: ಎನ್‌-95 ಮಾಸ್ಕ್‌ನಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡುತ್ತಿದ್ದ ವಿಮಾನ ಪ್ರಯಾಣಿಕನನ್ನು ಬಂಧಿಸಿದ್ದಾರೆ.

ಈ ಘಟನೆಯು ಕೋಳಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆತ ಯುಎಇಯಿಂದ ವಾಪಸಾಗುತ್ತಿದ್ದ ಎಂದು ಹೇಳಲಾಗಿದ್ದು ಏರ್ ಇಂಟೆಲಿಜೆನ್ಸ್ ಯುನಿಟ್ ಬಂಧಿಸಿದೆ.

ಚಿನ್ನದ ಸ್ಮಗಲಿಂಗ್ ಕೇಸ್: ಕೇರಳ ಸಚಿವ ಕೆಟಿ ಜಲೀಲ್ ವಿಚಾರಣೆ ಚಿನ್ನದ ಸ್ಮಗಲಿಂಗ್ ಕೇಸ್: ಕೇರಳ ಸಚಿವ ಕೆಟಿ ಜಲೀಲ್ ವಿಚಾರಣೆ

ಆತ ಕರ್ನಾಟಕದ ಭಟ್ಕಳದವನಾಗಿದ್ದು, ದುಬೈನಿಂದ ಕೇರಳಕ್ಕೆ ಬಂದಿದ್ದ, ಸುಮಾರು 2 ಲಕ್ಷ ಬೆಲೆ ಬಾಳುವ 40 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ.

Air Passenger Smuggling 40 Grams Gold Inside His N-95 Face Mask, Arrested In Kozhikode

ಕೋಳಿಕ್ಕೋಡ್ ಅಥವಾ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.ಸೆಪ್ಟೆಂಬರ್ ಆರಂಭದಲ್ಲಿ ಸೌದಿ ಅರೇಬಿಯಾದಿಂದ ಕರಿಪುರಕ್ಕೆ ಬಂದ ಪ್ರಯಾಣಿಕರೊಬ್ಬರ ಬಳಿ 30 ಲಕ್ಷ ಬೆಲೆ ಬಾಳುವ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು, ಅದನ್ನು ಕುಕ್ಕರ್‌ನೊಳಗಿರಿಸಲಾಗಿತ್ತು.

ಒಂದೆರೆಡು ದಿನಗಳಲ್ಲಿ ಮತ್ತೆ 1 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು, ಮತ್ತೊಂದು ಘಟನೆಯಲ್ಲಿ 653 ಗ್ರಾಂ ಚಿನ್ನ ಹಾಗೂ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

Recommended Video

ಚಳಿಗಾಲದಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ ಕೊರೊನಾ ಸೋಂಕು | Oneindia Kannada

ಸೌದಿ ಅರೇಬಿಯಾದಿಂದ ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಬಂದಿಳಿದ ಪ್ರಯಾಣಿಕನಿಂದ 325 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಹಾಗೂ ದುಬೈನಿಂದ ಬಂದಿದ್ದ ಮೂವರು ಪ್ರಯಾಣಿಕರು ಟ್ರಾಲಿ ಹಾಗೂ ಸ್ಪೀಕರ್‌ನಲ್ಲಿ ಚಿನ್ನವಿಟ್ಟಿದ್ದರು.

English summary
An air passenger was arrested for attempting to conceal 40 grams of smuggled gold in his N-95 mask in Kerala. The incident took place at the Kozhikode International Airport located in Karipur and the passenger who had flown in from the United Arab Emirates (UAE) has been arrested by the Air Intelligence Unit of the Calicut airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X