ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಲಿಫ್ಟ್: ಅಬುದಾಬಿಯಿಂದ ಕೊಚ್ಚಿಗೆ ಬಂದಿಳಿದ 177 ಭಾರತೀಯರು

|
Google Oneindia Kannada News

ತಿರುವನಂತಪುರಂ, ಮೇ 7: ಅಬುದಾಬಿಯಿಂದ ಭಾರತೀಯರನ್ನು ಹೊತ್ತು ತಂದ ಏರ್ ಇಂಡಿಯಾ ವಿಮಾನ ಕೇರಳದ ಕೊಚ್ಚಿ ತಲುಪಿದೆ. ಭಾರತ ಹಮ್ಮಿಕೊಂಡಿದ್ದ ಬಹುದೊಡ್ಡ ಏರ್‌ಲಿಫ್ಟ್ ಕಾರ್ಯಾಚರಣೆಯಲ್ಲಿ ಭಾರತ ತಲುಪಿದ ಮೊದಲ ವಿಮಾನ ಇದಾಗಿದೆ.

ಕೊರೊನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆ ವಿದೇಶಗಳಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು, ಯಾತ್ರಿಕರು ಹಾಗೂ ಇನ್ನಿತರ ಭಾರತೀಯರನ್ನು ವಾಪಸ್ ಕರೆತರುವ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿತ್ತು.

ವಿದೇಶದಿಂದ ಏರ್‌ಲಿಫ್ಟ್: ಬೆಂಗಳೂರಿಗೆ ಎಷ್ಟು ಜನ ಬರ್ತಿದ್ದಾರೆ?ವಿದೇಶದಿಂದ ಏರ್‌ಲಿಫ್ಟ್: ಬೆಂಗಳೂರಿಗೆ ಎಷ್ಟು ಜನ ಬರ್ತಿದ್ದಾರೆ?

ಈ ನಿಟ್ಟಿನಲ್ಲಿ ಮೊದಲನೇ ಹಂತವಾಗಿ 12 ದೇಶಗಳಿಂದ 14 ಸಾವಿರಕ್ಕೂ ಅಧಿಕ ಭಾರತೀಯರನ್ನು ದೇಶಕ್ಕೆ ಕರೆತರುವ ಯೋಜನೆ ರೂಪಿಸಿತ್ತು. ಇಂದಿನಿಂದ ಸುಮಾರು ಏಳು ದಿನಗಳ ಕಾಲ 64 ವಿಮಾನಗಳು ಈ ಏರ್‌ಲಿಫ್ಟ್‌ನಲ್ಲಿ ಭಾಗವಹಿಸಲಿವೆ.

ಇದೀಗ, ಕೊರೊನಾ ಲಾಕ್‌ಡೌನ್‌ ಏರ್‌ಲಿಫ್ಟ್ ಕಾರ್ಯಾಚರಣೆಯಲ್ಲಿ ಮೊದಲ ವಿಮಾನ ಭಾರತೀಯರ ಜೊತೆ ಕೊಚ್ಚಿ ತಲುಪಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಐಎಕ್ಸ್ 452 ರಾತ್ರಿ 10.09ಕ್ಕೆ 177 ಪ್ರಯಾಣಿಕರು ಹಾಗೂ ನಾಲ್ಕು ಮಕ್ಕಳ ಜೊತೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಸಿಯಾಲ್) ಬಂದಿಳಿದಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.

First repatriation Air India Express Flight From Abu Dhabi Lands In Kochi

177 ಪ್ರಯಾಣಿಕರು ಮತ್ತು ದುಬೈನ ಐದು ಮಕ್ಕಳೊಂದಿಗೆ ಮತ್ತೊಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಐಎಕ್ಸ್ 344 ರಾತ್ರಿ 10.45 ಕ್ಕೆ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲುಪಿಲಿದೆ ಎಂಬ ಮಾಹಿತಿ ಇದೆ.

ಕೊಚ್ಚಿನ್‌ಗೆ ಬಂದಿರುವ ಭಾರತೀಯರನ್ನು ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಆಯಾ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿರುವ ಕ್ವಾರೆಂಟೈನ್‌ ಕೇಂದ್ರಗಳಲ್ಲಿ ಇರಿಸಲಾಗುವುದು ಎಂದು ಕೇರಳ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

English summary
First repatriation Air India Express flight from Abu Dhabi lands at Cochin International Airport in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X