ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ವಿಮಾನ ದುರಂತದಲ್ಲಿ ಬದುಕುಳಿದ ಪ್ರಯಾಣಿಕರು ಹೇಳಿದ್ದೇನು?

|
Google Oneindia Kannada News

ಬದುಕುಳಿದ ಪ್ರಯಾಣಿಕರು ಪೈಲಟ್‌ಗಳ ವೃತ್ತಿಪರತೆ, ಸಮಯ ಪ್ರಜ್ಞೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Recommended Video

Kerala Flight Crash ನಂತರ ಮತ್ತೆ ನೆನಪಾಯ್ತು Mangalore ದುರಂತ | Oneindia Kannada

ಪೈಲಟ್‌ಗಳ ಚಾಕಚಕ್ಯತೆಯಿಂದಲೇ ನೂರಾರು ಪ್ರಯಾಣಿಕರ ಜೀವ ಉಳಿದಿದೆ ಎಂದು ಪ್ರಯಾಣಿಕರು ಹೇಳಿಕೊಂಡಿದ್ದಾರೆ. ದುಬೈನಿಂದ 190 ಮಂದಿ ಪ್ರಯಾಣಿಕರನ್ನು ಹೊತ್ತ ವಿಮಾನ ಕೇರಳದ ಕೋಳಿಕ್ಕೋಡ್‌ಗೆ ತೆರಳುತ್ತಿತ್ತು.

ಏರ್ ಇಂಡಿಯಾ ವಿಮಾನ ದುರಂತ: 14 ಸಾವು, 123ಕ್ಕೂ ಹೆಚ್ಚು ಮಂದಿ ಗಾಯಏರ್ ಇಂಡಿಯಾ ವಿಮಾನ ದುರಂತ: 14 ಸಾವು, 123ಕ್ಕೂ ಹೆಚ್ಚು ಮಂದಿ ಗಾಯ

ಭಾರಿ ಮಳೆಯಿಂದಾಗಿ ಎರಡು ಬಾರಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಗದೆ ವಾಪಸ್ ತೆರಳಿತ್ತು. ಪೈಲಟ್ ಎಲ್ಲಾ ಪ್ರಯಾಣಿಕರಿಗೂ ಈ ಕುರಿತು ಎಚ್ಚರಿಕೆ ನೀಡಿದ್ದರು.

Air India Express Flight Crash Survivors Laud Brave Pilot: He Saved Our Lives

ಹೆಚ್ಚು ಮಳೆ ಇರುವುದಾಗಿ ಸುರಕ್ಷಿತ ಲ್ಯಾಂಡಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೊದಲೇ ತಿಳಿಸಿದ್ದರು. ಪೈಲಟ್ ವೃತ್ತಿಯಲ್ಲಿ 30 ವರ್ಷ ಅನುಭವವಿಯಾಗಿರುವ ಕಾರಣ ರನ್ ವೇ ಇವರಿಗೆ ಚಿರಪರಿಚಿತ. ನಿನ್ನೆ ತೀವ್ರ ಮಳೆ ಹಾಗೂ ಮಂಜು ಆವರಿಸಿದ್ದರಿಂದ ರನ್ ವೇ ಸರಿಯಾಗಿ ಕಾಣಿಸುತ್ತಿರಲಿಲ್ಲ.

ಸುಮಾರು 20 ನಿಮಿಷ ಆಕಾಶದಲ್ಲೇ ವಿಮಾನ ಹಾರಾಟ ನಡೆಸಿದರು. ಹೆಚ್ಚು ಸಮಯ ಸುತ್ತಾಟ ನಡೆಸಲು ಸಾಧ್ಯವಿಲ್ಲದ ಕಾರಣ, ಕಂಟ್ರೋಲ್ ರೂಮಿನಿಂದ ವಿಮಾನ ಇಳಿಸಲು ಸೂಚನೆ ಸಿಕ್ಕಿತು.

ಅಪಘಾತದ ಮುನ್ಸೂಚನೆ ಇದ್ದುದ್ದರಿಂದ ತನ್ನ ಅನುಭವದಿಂದ ವಿರುದ್ಧ ದಿಕ್ಕಿನಿಂದ ಕ್ರಾಶ್ ಲ್ಯಾಂಡಿಂಗ್ ಮಾಡಿರುವ ಕಾರಣದಿಂದಾಗಿ ಮರಣ ಸಂಖ್ಯೆ ಕಡಿಮೆಯಾಗಲು ಕಾರಣ ಎಂಬುವುದು ಅಭಿಪ್ರಾಯ.
ಅಗ್ನಿ ಅವಘಡವನ್ನು ತಪ್ಪಿಸಲು ವಿಮಾನದ ಇಂಜಿನ್ ಆಫ್ ಮಾಡಿದ ಪೈಲೆಟ್ ಸಮಯೋಚಿತ ನಿರ್ಧಾರ ಕೈಗೊಂಡಿದ್ದಾರೆ. ಆದರೂ ತಮ್ಮ ಜೀವವನ್ನೇ ಪಣಕ್ಕಿಟ್ಟು, ಅನೇಕ ಜೀವಗಳ ರಕ್ಷಣೆ ಮಾಡಿದ ಪೈಲಟ್ ಸಾಹಸಕ್ಕೆ ದೇಶವೇ ತಲೆದೂಗುತ್ತಿದೆ. ಅವರ ಅಗಲಿಕೆ ಗೆ ಮರುಗುತ್ತಿದೆ ಎಂದು ಹೇಳಿದ್ದಾರೆ.

ಕೇರಳ ವಿಮಾನ ದುರಂತದ ಹಿಂದಿರುವ ಮೂರು ಸಂಭಾವ್ಯ ಕಾರಣಗಳುಕೇರಳ ವಿಮಾನ ದುರಂತದ ಹಿಂದಿರುವ ಮೂರು ಸಂಭಾವ್ಯ ಕಾರಣಗಳು

ಏರ್ ಇಂಡಿಯಾ ಎಕ್ಸ್‌ಪ್ರೆಸ್ 737 ಬೋಯಿಂದ ವಿಮಾನವು 10 ಮಂದಿ ಮಕ್ಕಳು ಸೇರಿದಂತೆ 190 ಮಂದಿಯನ್ನು ಹೊತ್ತು ದುಬೈನಿಂದ ಕೋಳಿಕ್ಕೋಡ್‌ಗೆ ಬರುತ್ತಿತ್ತು. 2010ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ವಿಮಾನ ಅಪಘಾತ ಸಂಭವಿಸಿದೆ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನ ಗುಡ್ಡದಲ್ಲಿ ಪತನಗೊಂಡಿತ್ತು 158 ಮಂದಿ ಸಾವನ್ನಪ್ಪಿದ್ದರು.

ಕ್ಯಾಪ್ಟನ್ ಸಾಠೆ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಹಳೆ ವಿದ್ಯಾರ್ಥಿ. ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆಯನ್ನು ಸಲ್ಲಿಸಿದ್ದರು. 30 ವರ್ಷಗಳ ಸುದೀರ್ಘ ಮತ್ತು ಅಪಘಾತ ಮುಕ್ತ ಫ್ಲೈಯಿಂಗ್ ದಾಖಲೆಯನ್ನು ಹೊಂದಿದ್ದರು. ವಾಯುಪಡೆಯಿಂದ ನಿವೃತ್ತಿ ಹೊಂದಿದ ನಂತರ ಏರ್ ಇಂಡಿಯಾದಲ್ಲಿ ಸುಮಾರು 18 ವರ್ಷಗಳಿಂದ ಪೈಲಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

English summary
Survivors of Friday’s plane crash in Kerala’s Kozhikode said the aircraft’s captain, who was killed, helped save their lives as he used his presence of mind and averted a fire after the accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X