• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ ವಿಮಾನ ದುರಂತ: ಸಹಾಯಕ್ಕೆ ದೆಹಲಿ,ಮುಂಬೈನಿಂದ ವಿಶೇಷ ವಿಮಾನ

|

ತಿರುವನಂತಪುರಂ, ಆಗಸ್ಟ್ 08: ಕೇರಳದ ಕೋಳಿಕ್ಕೋಡ್ ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ.

   Kerala Flight Crash ನಂತರ ಮತ್ತೆ ನೆನಪಾಯ್ತು Mangalore ದುರಂತ | Oneindia Kannada

   ಅಲ್ಲಿನ ಪರಿಸ್ಥಿತಿ ನಿರ್ವಹಿಸಲು ಮತ್ತು ಪ್ರಯಾಣಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ದೆಹಲಿ ಮತ್ತು ಮುಂಬೈಯಿಂದ ಎರಡು ವಿಶೇಷ ವಿಮಾನಗಳನ್ನು ಕಳುಹಿಸಲಾಗಿದೆ.

   ಏರ್ ಇಂಡಿಯಾ ವಿಮಾನ ದುರಂತ: 14 ಸಾವು, 123ಕ್ಕೂ ಹೆಚ್ಚು ಮಂದಿ ಗಾಯ

   ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲು ನಾಗರಿಕ ವಿಮಾನಯಾನಗಳ ಮಹಾ ನಿರ್ದೇಶಕರು(ಡಿಜಿಸಿಎ), ವಿಮಾನ ಅಪಘಾತ ತನಿಖಾ ಸಂಸ್ಥೆ(ಎಎಐಬಿ) ಮತ್ತು ವಿಮಾನ ಸುರಕ್ಷತಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

   ಕೇರಳದ ಕೋಳಿಕ್ಕೋಡ್ ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ಅನೇಕ ಮಂದಿ ಮೃತಪಟ್ಟ ಘಟನೆ ನಡೆದ ಕೂಡಲೇ ದುಬೈ ಮತ್ತು ಶಾರ್ಜಾದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಪ್ರಯಾಣಿಕರ ಕುಟುಂಬಸ್ಥರಿಗೆ ಮಾಹಿತಿ ನೀಡಲು 5 ಸಹಾಯವಾಣಿಗಳನ್ನು ತೆರೆದಿದೆ.

   ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ನಾವು ಪ್ರಾರ್ಥಿಸಿಕೊಳ್ಳುತ್ತಿದ್ದೇವೆ. ನಮ್ಮ ಸಹಾಯವಾಣಿ +97156 5463903, +971543090572, +971543090571, +971543090575 ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸಲ್ ಜನರಲ್ ಡಾ ಅಮನ್ ಪುರಿ ಮಾಹಿತಿ ನೀಡಿದ್ದಾರೆ.

   ಶಾರ್ಜಾದಲ್ಲಿನ ಸಹಾಯವಾಣಿ +97165970303 ಆಗಿದೆ. ದುಬೈಯಿಂದ ಕಲ್ಲಿಕೋಟೆಗೆ ಬರುತ್ತಿದ್ದ ಐಎಕ್ಸ್ 1344 ಏರ್ ಇಂಡಿಯಾ ವಿಮಾನದಲ್ಲಿ 191 ಮಂದಿ ಇದ್ದರು, ಅವರಲ್ಲಿ ಇಬ್ಬರು ಪೈಲಟ್ ಗಳು, ನಾಲ್ವರು ಸಿಬ್ಬಂದಿ, 10 ಮಕ್ಕಳನ್ನೂ ಒಳಗೊಂಡಿತ್ತು.

   ರನ್ ವೇ 10ರಲ್ಲಿ ಲ್ಯಾಂಡಿಂಗ್ ಆದ ಮೇಲೆ ಬೋಯಿಂಗ್ 737 ವಿಮಾನ ರನ್ ವೇಯ ಕೊನೆಯವರೆಗೂ ಹಾರಾಡಲು ಪ್ರಯತ್ನಿಸಿತ್ತು. ಆಗ ನಿಯಂತ್ರಣ ತಪ್ಪಿ 50 ಅಡಿ ಆಳವಾದ ಕಂದಕಕ್ಕೆ ಬಿದ್ದು ಎರಡು ಹೋಳಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   English summary
   Air India Express said on Saturday that three relief flights had been arranged to Kozhikode in Kerala to assist passengers and their family members affected by the plane crash a day ago.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X