• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾದಕವಸ್ತು ದಂಧೆಯಲ್ಲಿ ತೊಡಗಿದ್ದ ನಟಿ ಅಶ್ವಥಿ ಬಾಬು ಬಂಧನ

|

ಕೊಚ್ಚಿ, ಡಿಸೆಂಬರ್ 17 : ನಿಷೇಧಿತ ಮಾದಕವಸ್ತು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೇ ಜನಪ್ರಿಯ ಕಿರುತೆರೆ ಮತ್ತು ಹಿರಿತೆರೆ ನಟಿ ಅಶ್ವಥಿ ಬಾಬು ಮತ್ತು ಅವರ ವಾಹನ ಚಾಲಕ ಬಿನೋಯ್ ಅಬ್ರಹಾಂನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ವ್ಯಕ್ತಿಯ ಮೂಡ್ ಅನ್ನು ಬದಲಿಸುವಂಥ, ಆತನಿಗೆ ವಿಚಿತ್ರ ಖುಷಿಯನ್ನು ನೀಡುವಂಥ ಸಾಮರ್ಥ್ಯವುಳ್ಳ ಎಂಡಿಎಂಎ ಎಂಬ ಡ್ರಗ್ ಅನ್ನು ಗ್ರಾಹಕನೊಬ್ಬನಿಗೆ ನೀಡುವುದಕ್ಕಾಗಿ ತಮ್ಮ ನಿವಾಸದೆದಿರು ಅವರು ಕಾಯುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್ ಕೇಸಿನಲ್ಲಿ ಬಾಲಿವುಡ್ ನಟ ಏಜಾಜ್ ಖಾನ್ ಬಂಧನ

ಲಕ್ಷಾಂತರ ರುಪಾಯಿ ಬೆಲೆಬಾಳುವ 58 ಗ್ರಾಂ ಎಂಡಿಎಂಎ ಡ್ರಗ್ ಅನ್ನು 22 ವರ್ಷದ ನಟಿಯಿಂದ ವಶಪಡಿಸಿಕೊಳ್ಳಲಾಗಿದೆ. ಇಂಥ ಪಾರ್ಟಿಗಳನ್ನು ಹೆಚ್ಚಾಗಿ ಫ್ಲಾಟ್ ಗಳಲ್ಲಿಯೇ ನಡೆಸಲಾಗುತ್ತದೆ. ಆಘಾತಕಾರಿ ಸಂಗತಿಯೆಂದರೆ, ಈ ದಂಧೆಯಲ್ಲಿ ನಟಿಗೆ ಸಹಾಯ ಮಾಡಿದ ಬಿನೋಯ್ ಈ ಡ್ರಗ್ ಅನ್ನು ಬೆಂಗಳೂರಿನಿಂದ ತರಿಸಿಕೊಂಡಿದ್ದ.

ತ್ರಿಕ್ಕಕ್ಕಾರ ಪೊಲೀಸ್ ಸ್ಟೇಷನ್ ಈ ಬಂಧನವನ್ನು ದೃಢೀಕರಿಸಿದ್ದು, ಪೊಲೀಸರು ತನಿಖೆಯನ್ನು ಈಗಾಗಲೆ ಆರಂಭಿಸಿದ್ದಾರೆ. ಹಲವಾರು ಚಲನಚಿತ್ರ ಮತ್ತು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಶ್ವಥಿ ಅವರು ಈ ಜಾಲದಲ್ಲಿ ಹೇಗೆ ಸಿಲುಕಿದರು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಡ್ರಗ್ ಕೇಸ್ : ಮುಗುಳ್ನಗುತ್ತಾ ವಿಚಾರಣೆಗೆ ಹಾಜರಾದ ಸ್ಟಾರ್ ನಟ

ಪೊಲೀಸರ ಪ್ರಕಾರ ಎಂಡಿಎಂಎ ಎಂಬ ಈ ಡ್ರಗ್ ಅನ್ನು ತಡರಾತ್ರಿಯ ಪಾರ್ಟಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅಶ್ವಥಿ ಬಾಬು ಅವರು ಡ್ರಗ್ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಪೊಲೀಸರು ಆಕೆಯನ್ನು ಮತ್ತು ಡ್ರೈವರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಕೆಲವು ವಾರಗಳಿಂದ ಪೊಲೀಸರು ಅಶ್ವಥಿಯ ಚಲನವಲನಗಳನ್ನು ಗಮನಿಸುತ್ತಿದ್ದರು. ಕೊಟ್ಟಾಯಂನ ಚಿಂಗಾವಣಂ ನಿವಾಸಿಯಾಗಿರುವ ಅಶ್ವಥಿ ಕೆಲ ತಿಂಗಳ ಹಿಂದೆಯಷ್ಟೇ ಕೊಚ್ಚಿಯಲ್ಲಿ ಫ್ಲಾಟ್ ನಟ್ಟಿ ಬಾಡಿಗೆ ಪಡೆದಿದ್ದರು.

ಈ ಡ್ರಗ್ ದಂಧೆಯ ಹಿಂದೆ ಭಾರೀ ತಂಡವೇ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆ ಮಾದಕವಸ್ತುವನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗಿರುವುದರಿಂದ ಬೆಂಗಳೂರಿನಲ್ಲಿಯೂ ಈ ಬಗ್ಗೆ ತನಿಖೆ ನಡೆಯಬೇಕಿದೆ. ಕಳೆದ ವರ್ಷವಷ್ಟೇ 280 ಕೋಟಿ ರುಪಾಯಿ ಬೆಲೆ ಬಾಳುವ ಮಾದಕ ವಸ್ತುಗಳನ್ನು ಕೇರಳ ಪೊಲೀಸರು ವಶಪಡಿಸಿಕೊಂಡಿದ್ದರು.

English summary
Malayalam actress Ashwaty Babu arrested along with her vehicle driver Binoy Abraham for drug peddling in Kochi. They were arrested red handed when driver was handing over the MDMA, which he purchased from Bengaluru, to the actress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more