• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತ್ಯಾಚಾರ ಪ್ರಕರಣ: ನಟ ವಿಜಯ್ ಬಾಬು ಪಾಸ್ ಪೋರ್ಟ್ ಜಪ್ತಿ?

|
Google Oneindia Kannada News

ತಿರುವನಂತಪುರಂ/ದುಬೈ, ಮೇ 1: ಅತ್ಯಾಚಾರ, ಲೈಂಗಿಕ ಕಿರುಕಳ ಪ್ರಕರಣದಲ್ಲಿ ಸಿಲುಕಿರುವ ಮಲಯಾಳಂ ನಟ-ನಿರ್ಮಾಪಕ ವಿಜಯ್ ಬಾಬು ಪಾಸ್ ಪೋರ್ಟ್ ಜಪ್ತಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಸದ್ಯ ದುಬೈನಲ್ಲಿರುವ ವಿಜಯ್ ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.

ದುಬೈನಲ್ಲಿದ್ದುಕೊಂಡೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್‌ ಬಾಬು ಅವರು ವಕೀಲ ಎಸ್‌ ರಾಜೀವ್‌ ಸಲ್ಲಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿಯಾದ್ ರಹಮಾನ್ ಎ ಎ, ನ್ಯಾಯಾಲಯಗಳ ಬೇಸಿಗೆ ರಜೆ ಮುಗಿದ ಬಳಿಕ ಅರ್ಜಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಲೈಂಗಿಕ ಕಿರುಕುಳ ಕೇಸ್ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಲೈಂಗಿಕ ಕಿರುಕುಳ ಕೇಸ್

ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕವಾಗಿ ನಡೆದ ಮಾಧ್ಯಮ ವಿಚಾರಣೆ ಮತ್ತು ಊಹಾಪೋಹಗಳಿಂದ ಪೊಲೀಸರು ಪ್ರಚೋದಿತರಾಗಿದ್ದಾರೆ. ಹಾಗಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 438ರ ಅಡಿ ನಿರೀಕ್ಷಣಾ ಜಾಮೀನು ಕೋರುತ್ತಿರುವುದಾಗಿ ವಿಜಯ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ನಟನೆಗೆ ಅವಕಾಶ ನೀಡುವ ನೆಪದಲ್ಲಿ ತನ್ನನ್ನು ಬಾಬು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಚೊಚ್ಚಲ ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ನಟಿಯೊಬ್ಬರು ಮೀ ಟೂ ಆರೋಪ ಮಾಡಿದ್ದರು. ಇದನ್ನು ಆಧರಿಸಿ ಬಾಬು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಎರ್ನಾಕುಲಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಬಾಬು ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಇದೇ ವೇಳೆ ಫೇಸ್‌ಬುಕ್‌ ನೇರಪ್ರಸಾರದ ಮೂಲಕ ತನ್ನ ವಿರುದ್ಧದ ಆರೋಪ ನಿರಾಕರಿಸಿದ್ದಾರೆ. ಆದರೆ ಈವೇಳೆ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ ಆರೋಪ ವಿಜಯ್ ಮೇಲೆ ಕೇಳಿ ಬಂದಿದೆ. ವಿಜಯ್ ವಿರುದ್ಧ ಐಪಿಸಿ ಸೆಕ್ಷನ್‌ 228 ಎ ಅಡಿ ಕೂಡ ಪ್ರಕರಣ ದಾಖಲಿಸಲಾಗಿದೆ. ಭಾರಿ ಪ್ರತಿರೋಧದ ಹಿನ್ನೆಲೆಯಲ್ಲಿ ಫೇಸ್ ಬುಕ್ ಲೈವ್‌ ವೀಡಿಯೊವನ್ನು ಅವರು ಫೇಸ್‌ಬುಕ್‌ ಖಾತೆಯಿಂದ ಅಳಿಸಿಹಾಕಿದ್ದಾರೆ. ಕೆಲ ವರ್ಷಗಳ ಹಿಂದೆ ಎಂದು ನಟ ಮತ್ತು ಸಹ ನಿರ್ಮಾಪಕ ಸಾಂಡ್ರಾ ಥಾಮಸ್‌ ಅವರು ಬಾಬು ವಿರುದ್ಧ ಹಲ್ಲೆಯ ಆರೋಪ ಮಾಡಿದ್ದರು. ಆದರೆ ಆಗ ದೂರನ್ನು ಹಿಂಪಡೆಯಲಾಗಿತ್ತು.

2018ರಿಂದ ನಟರಾಗಿ ಕೂಡಾ ವಿಜಯ್ ಬಾಬು ಕಾಣಿಸಿಕೊಂಡಿದ್ದಾರೆ. ದೂರು ನೀಡಿರುವ ನಟಿ ಜೊತೆ 2021ರ ನಂತರ ಚಾಟ್ ಮಾಡಿಲ್ಲ, ಆಕೆ ನನ್ನ ಫ್ಲಾಟಿಗೆ ಬಂದಿದ್ದು ನಿಜ, ಆಡಿಷನ್ ಮುಗಿದ ಬಳಿಕ ಆಕೆಗೆ ನಟನೆಗೆ ಸೂಕ್ತ ಅವಕಾಶ ಕಲ್ಪಿಸಲಾಗಿತ್ತು. ಅದು ಬಿಟ್ಟರೆ, ಈ ಕಾಸ್ಟಿಂಗ್ ಕೋಚ್ ಆರೋಪ, ಮೀಟೂ ಆರೋಪ ಎಲ್ಲವೂ ಸುಳ್ಳು ಎಂದಿದ್ದಾರೆ.

ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA) ಈ ಘಟನೆ ಬಗ್ಗೆ ತನ್ನ ವರದಿಯನ್ನು ಸಲ್ಲಿಸಿದೆ. ವಿಜಯ್ ಬಾಬು ವಿರುದ್ಧ ಯಾವ ರೀತಿ ಕ್ರಮ ಜರುಗಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ನಟಿ ಶ್ವೇತಾ ಮೆನನ್ ಹೇಳಿದ್ದಾರೆ.

English summary
Even as the Kerala Police has launched efforts to bring back film producer and actor Vijay Babu from Dubai in connection with a sexual assault case...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X