• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತ್ಯಾಚಾರ ಪ್ರಕರಣ: ಇಂದು ನಟ ವಿಜಯ್‌ಬಾಬು ಜಾಮೀನು ಅರ್ಜಿ ವಿಚಾರಣೆ

|
Google Oneindia Kannada News

ತಿರುವನಂತಪುರಂ, ಮೇ 27; ಯುವತಿ ಮೇಳೆ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಆರೋಪದಲ್ಲಿ ನಟ, ನಿರ್ಮಾಪಕ ವಿಜಯ್‌ ಬಾಬು ಮೇಲೆ ಪ್ರಕರಣ ದಾಖಲಾಗಿದೆ. ನಟ ಸಲ್ಲಿಕೆ ಮಾಡಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ಕೇರಳ ಹೈಕೋರ್ಟ್‌ನಲ್ಲಿ ನಡೆಯಲಿದೆ.

ಗುರುವಾರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಕೇರಳ ಹೈಕೋರ್ಟ್‌ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು. ಗುರುವಾರದ ವಿಚಾರಣೆ ವೇಳೆ ವಿಜಯ್ ಬಾಬುಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೋರ್ಟ್‌ ಪ್ರಾಸಿಕ್ಯೂಷನ್‌ ಅಭಿಪ್ರಾಯ ಕೇಳಿತ್ತು.

ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಲೈಂಗಿಕ ಕಿರುಕುಳ ಕೇಸ್ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಲೈಂಗಿಕ ಕಿರುಕುಳ ಕೇಸ್

ವಿಚಾರಣೆ ವೇಳೆ ನ್ಯಾಯಮೂರ್ತಿ ಗೋಪಿನಾಥ್ ಅವರಿದ್ದ ಏಕಸದಸ್ಯ ಪೀಠ, "ಪ್ರಕರಣ ದಾಖಲಾದ ಬಳಿಕ ಆರೋಪಿ ದುಬೈನಲ್ಲಿದ್ದಾರೆ, ಆರೋಪಿ ಭಾರತಕ್ಕೆ ಹಿಂತಿರುಗಲು ಮಧ್ಯಂತರ ರಕ್ಷಣೆ ನೀಡುವುದು ಉತ್ತಮ. ನಂತರ ಕಠಿಣ ಷರತ್ತುಗಳನ್ನು ವಿಧಿಸಬಹುದು ಮತ್ತು ನಂತರ ನ್ಯಾಯಾಲಯ ಅರ್ಜಿದಾರರ ಜಾಮೀನು ಅರ್ಜಿಯನ್ನು ನಿರ್ಧರಿಸಬಹುದು" ಎಂದು ಹೇಳಿತ್ತು.

ಕೋರ್ಟ್‌ನ ಅಭಿಪ್ರಾಯವನ್ನು ಪ್ರಾಸಿಕ್ಯೂಷನ್ ವಿರೋಧಿಸಿದ ನಂತರ ಗರಂ ಆದ ನ್ಯಾಯಮೂರ್ತಿ, "ಗ್ಯಾಲರಿಯಲ್ಲಿ ಕುಳಿತು ಆಟ ಆಡುತ್ತಿದ್ದೀರಾ, ಸಂತ್ರಸ್ತೆಗೆ ನ್ಯಾಯ ಸಿಗುವಂತೆ ಮಾಡಲು ನೀವು ನಿಜವಾಗಿಯೂ ಪ್ರಯತ್ನಿಸುತ್ತಿದ್ದೀರಾ?. ಆರೋಪಿಯನ್ನು ಇಲ್ಲಿಗೆ ಕರೆತರದಿದ್ದರೆ ಆಕೆಗೆ ನ್ಯಾಯ ಹೇಗೆ ಸಿಗುತ್ತದೆ?" ಎಂದು ಖಾರವಾಗಿ ಪ್ರಶ್ನಿಸಿದ್ದರು.

 ಯುವತಿ ಹಣೆಗೆ ಗನ್‌ಯಿಟ್ಟು ಬೆದರಿಸಿ ಅತ್ಯಾಚಾರ, ಆರೋಪಿ ಬಂಧನ ಯುವತಿ ಹಣೆಗೆ ಗನ್‌ಯಿಟ್ಟು ಬೆದರಿಸಿ ಅತ್ಯಾಚಾರ, ಆರೋಪಿ ಬಂಧನ

ಗುರುವಾರ ಆರೋಪಿ ವಿಜಯ್ ಬಾಬು ಪರ ವಕೀಲರು ಮೇ 30 ರಂದು ವಿಜಯ್ ದುಬೈನಿಂದ ಹಿಂತಿರುಗುತ್ತಿದ್ದಾರೆ ಎಂದು ಹೇಳಿ ಪೂರಕವಾದ ವಿಮಾನದ ಟಿಕೆಟ್ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು.

ಈ ಹಿಂದೆ ದಕ್ಷಿಣ ಎರ್ನಾಕುಲಂ ಪೊಲೀಸರು ನಟಿಯ ದೂರಿನ ಮೇರೆಗೆ ವಿಜಯ್ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ನಂತರ, ಫೇಸ್‌ಬುಕ್ ಮೂಲಕ ದೂರುದಾರರ ಗುರುತನ್ನು ಬಹಿರಂಗಪಡಿಸಿದ್ದಕ್ಕಾಗಿ ಪೊಲೀಸರು ವಿಜಯ್‌ ವಿರುದ್ಧ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಾರೆ.

Actor Vijay Babu Case: Kerala High Court To Hear Anticipatory Bail Plea Today

ಏನಿದು ಪ್ರಕರಣ?; ಸಿನಿಮಾಗಳಲ್ಲಿ ನಟಿಸುವ ಅವಕಾಶ ನೀಡುವುದಾಗಿ ಭರವಸೆ ನೀಡಿ ಎರ್ನಾಕುಲಂನ ಫ್ಲ್ಯಾಟ್ ಒಂದರಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಯುವತಿಯೊಬ್ಬಳು ಮಲಯಾಳಂ ನಟ ಹಾಗೂ ನಿರ್ದೇಶಕ ವಿಜಯ್ ಬಾಬು ವಿರುದ್ಧ ಆರೋಪ ಮಾಡಿದ್ದರು. ಕೋಯಿಕ್ಕೋಡ್ ನಿವಾಸಿಯಾಗಿರುವ ಸಂತ್ರಸ್ತ ಯುವತಿ ಎರ್ನಾಕುಲಂ ಸೌತ್ ಪೊಲೀಸ್ ಸ್ಟೇಷನ್‌ನಲ್ಲಿ ಏಪ್ರಿಲ್ 22ರಂದು ದೂರು ದಾಖಲಿಸಿದ್ದರು.

ಫ್ರೈಡೆ ಫಿಲ್ಮ್ ಹೌಸ್ ಸಿನಿಮಾ ನಿರ್ಮಾಣ ಸಂಸ್ಥೆ ಸ್ಥಾಪಕರಾಗಿರುವ ವಿಜಯ್ ಬಾಬು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. 1983ರಲ್ಲಿ ಬಾಲನಟನಾಗಿ ಮಲಯಾಳಂ ಸಿನಿಮಾ ರಂಗಕ್ಕೆ ಬಂದಿದ್ದ ವಿಜಯ್ ಬಾಬು ಬೇಡಿಕೆಯ ನಟನಾಗಿದ್ದರು.

ಅತ್ಯಾಚಾರ ಹಾಗೂ ದೈಹಿಕ ಹಲ್ಲೆ ದೂರು ನೀಡಿದ್ದರೂ. ನಟನನ್ನು ಪೊಲೀಸರು ವಿಚಾರಣೆ ಮಾಡದಿರುವುದು ಆಕ್ರೋಶಕ್ಕೆ ಕಾರವಾಗಿತ್ತು. ಈ ವಿಚಾರ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ನಟ ವಿಜಯ್ ಬಾಬು ಹುಡುಕಾಟದಲ್ಲಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ನಟ ವಿಜಯ್ ತಲೆಮರೆಸಿಕೊಂಡಿದ್ದಾರೆ. ಈ ಅತ್ಯಾಚಾರ ಪ್ರಕರಣ ಬಳಿಕ ಮತ್ತೋರ್ವ ಮಹಿಳೆ ಕೂಡ ವಿಜಯ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ.

English summary
Kerala High Court will hear the anticipatory bail plea of Malayalam actor and producer Vijay Babu in the sexual assault case against him on May 27th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X