ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಟ್ಯೂಬ್ ನೋಡಿ ವೈನ್ ತಯಾರಿಸಿದ ಬಾಲಕ: ಕುಡಿದು ಅಸ್ವಸ್ಥನಾದ ಸ್ನೇಹಿತ

|
Google Oneindia Kannada News

ತಿರುವನಂತಪುರ, ಆಗಸ್ಟ್ 7: ಬೆರಳ ತುದಿಯಲ್ಲೇ ಎಲ್ಲಾ ಮಾಹಿತಿ ಸಿಗುವಷ್ಟು ಮಟ್ಟಿಗೆ ತಂತ್ರಜ್ಞಾನ ಮುಂದುವರೆದಿದೆ. ಇಂದು ಅಂತರ್ಜಾಲದಲ್ಲಿ ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟದ್ದೇ ಸಿಗುತ್ತದೆ. ಆಯ್ಕೆ ಯಾವಾಗಲೂ ಒಳ್ಳೆಯದೇ ಆಗಿರಬೇಕು. ಯೂಟ್ಯೂಬ್‌ನಲ್ಲಿ ಕೂಡ ಸ್ವಯಂ ಚಿಕಿತ್ಸೆಗೆ ಮನೆ ಔಷಧಿ ತಯಾರಿಕೆಯಿಂದ ಹಿಡಿದು ಹಲವು ರೆಸಿಪಿಗಳು ಕೂಡ ಲಭ್ಯವಿರುತ್ತವೆ. ಈಗ ಇಂತಹದ್ದೇ ವಿಡಿಯೋ ಒಂದನ್ನು ನೋಡಿದ ಬಾಲಕ ಈಗ ಸಮಸ್ಯೆಗೆ ಸಿಲುಕಿದ್ದಾನೆ.

ಆಘಾತಕಾರಿ ಘಟನೆಯೊಂದರಲ್ಲಿ, ಕೇರಳದ ಬಾಲಕನೊಬ್ಬ ಯುಟ್ಯೂಬ್ ಟ್ಯುಟೋರಿಯಲ್ ಅನ್ನು ನೋಡುವ ಮೂಲಕ ಮನೆಯಲ್ಲಿ ವೈನ್ ತಯಾರಿಸಿದ್ದಾನೆ. ತಯಾರಿಸಿದ್ದು ಮಾತ್ರವಲ್ಲದೆ ಅದನ್ನು ತನ್ನ ಸ್ನೇಹಿತರಿಗೆ ಕುಡಿಸಿದ್ದಾನೆ. ಬಾಲಕ ತಯಾರಿಸಿದ ವೈನ್ ಕುಡಿದಿರುವ ಆತನ ಸ್ನೇಹಿತ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ವಿಚಿತ್ರ ಫ್ಯಾಷನ್; ಶೂ ಒಳಗೆ ಬಿಯರ್ ಹಾಕಿ ಮಾರಾಟ..ವಿಚಿತ್ರ ಫ್ಯಾಷನ್; ಶೂ ಒಳಗೆ ಬಿಯರ್ ಹಾಕಿ ಮಾರಾಟ..

ಪಿಟಿಐ ವರದಿಯ ಪ್ರಕಾರ, 12 ವರ್ಷದ ಯುವಕ ಯುಟ್ಯೂಬ್ ವಿಡಿಯೋ ನೋಡಿಕೊಂಡು ದ್ರಾಕ್ಷಿ ವೈನ್ ತಯಾರಿಸಲು ಸ್ವತಃ ಪ್ರಯತ್ನಿಸಿದನು. ನಂತರ ಅದನ್ನು ಸ್ನೇಹಿತರಿಗೆ ನೀಡಿದ್ದಾನೆ. ಅದನ್ನು ಕುಡಿದ ಆತನ ಸ್ನೇಹಿತರು ಸುಸ್ತು, ವಾಕರಿಕೆಯಿಂದ ಬಳಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದೂರು ದಾಖಲಸಿಕೊಂಡಿದ್ದಾರೆ.

 ಪೋಷಕರು ತಂದಿದ್ದ ದ್ರಾಕ್ಷಿಯಿಂದ ವೈನ್ ತಯಾರು

ಪೋಷಕರು ತಂದಿದ್ದ ದ್ರಾಕ್ಷಿಯಿಂದ ವೈನ್ ತಯಾರು

''ವಿಚಾರಣೆ ವೇಳೆ ತಂದೆ-ತಾಯಿ ಖರೀದಿಸಿದ ದ್ರಾಕ್ಷಿಯನ್ನು ಬಳಸಿ ವೈನ್ ತಯಾರಿಸಿರುವುದಾಗಿ ಬಾಲಕ ಒಪ್ಪಿಕೊಂಡಿದ್ದು, ತಾನು ಸ್ಪಿರಿಟ್ ಅಥವಾ ಇನ್ಯಾವುದೇ ಮದ್ಯವನ್ನು ಪದಾರ್ಥವಾಗಿ ಬಳಸಿಲ್ಲ ಎಂದು ತಿಳಿಸಿದ್ದಾನೆ. ಯೂಟ್ಯೂಬ್ ವಿಡಿಯೋದಲ್ಲಿ ತೋರಿಸಿರುವಂತೆ ವೈನ್ ತಯಾರಿಸಿದ ಬಳಿಕ ಬಾಟಲಿಯಲ್ಲಿ ತುಂಬಿ ಹೂತಿಟ್ಟಿದ್ದಾನೆ." ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

Just in: 500 ಮದ್ಯದಂಗಡಿ ತೆರೆಯಲಿರುವ ದೆಹಲಿ ಸರ್ಕಾರJust in: 500 ಮದ್ಯದಂಗಡಿ ತೆರೆಯಲಿರುವ ದೆಹಲಿ ಸರ್ಕಾರ

 ಆಲ್ಕೊಹಾಲ್, ಸ್ಪಿರಿಟ್ ಪತ್ತೆಗೆ ರಾಸಾಯನಿಕ ಪರೀಕ್ಷೆ

ಆಲ್ಕೊಹಾಲ್, ಸ್ಪಿರಿಟ್ ಪತ್ತೆಗೆ ರಾಸಾಯನಿಕ ಪರೀಕ್ಷೆ

ಪೊಲೀಸರು ಶಾಲೆಗೆ ತಂದಿದ್ದ ಬಾಟಲಿಯಿಂದ ವೈನ್ ಮಾದರಿಗಳನ್ನು ಸಂಗ್ರಹಿಸಿ ಸ್ಥಳೀಯ ನ್ಯಾಯಾಲಯದ ಅನುಮತಿಯೊಂದಿಗೆ ರಾಸಾಯನಿಕ ಪರೀಕ್ಷೆಗೆ ಕಳುಹಿಸಿದ್ದಾರೆ.

ವೈನ್‌ನಲ್ಲಿ ಸ್ಪಿರಿಟ್ ಅಥವಾ ಇನ್ನಾವುದೇ ಆಲ್ಕೋಹಾಲ್ ಬೆರೆಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಲು, ಅಂತಹದ್ದೇನಾದರೂ ಇರುವುದು ಕಂಡುಬಂದರೆ, ನಾವು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿ ತಿಳಿಸಿದ್ದಾರೆ.

 ಔಷಧಗಳ ವಿಚಾರದಲ್ಲಿ ಪ್ರಯೋಗ ಬೇಡ

ಔಷಧಗಳ ವಿಚಾರದಲ್ಲಿ ಪ್ರಯೋಗ ಬೇಡ

ಈ ಘಟನೆಯು ಮಾಧ್ಯಮ ಬಳಕೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಮಾಧ್ಯಮಗಳನ್ನು ಸರಿಯಾಗಿ ಬಳಕೆ ಮಾಡದಿದ್ದರೆ ಆಗುವ ಅನಾಹುತಕ್ಕೆ ಇದು ಉದಾಹರಣೆಯಾಗಿದೆ.

ಆನ್‌ಲೈನ್‌ನಲ್ಲಿ ಲಭ್ಯವಿರುವ ಟ್ಯುಟೋರಿಯಲ್‌ಗಳನ್ನು ಅವಲಂಬಿಸುವುದರಿಂದ ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸಬಹುದು. ವಿಶೇಷವಾಗಿ ಆರೋಗ್ಯದ ವಿಷಯದಲ್ಲಿ. ಮಕ್ಕಳು ಸಾಮಾಜಿಕ ಮಾಧ್ಯಮಗಳ ಬಳಕೆ ಮೇಲೆ ಪೋಷಕರು ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಸರಿಯಾದ ಮಾರ್ಗದರ್ಶನ ಇಲ್ಲದೆ ಕುತೂಹಲಕ್ಕೆ ಮಾಡುವ ಪ್ರಯೋಗಗಳು, ಚಟುವಟಿಕೆಗಳಿಂದ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

 ಕೆಂಪು ವೈನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದ?

ಕೆಂಪು ವೈನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದ?

ರೆಡ್ ವೈನ್ ಒಂದು ಜನಪ್ರಿಯ ಆಲ್ಕೊಹಾಲ್‌ಯುಕ್ತ ಪಾನೀಯವಾಗಿದ್ದು, ದ್ರಾಕ್ಷಿಯನ್ನು ಹೂತುಹಾಕುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಫ್ಲೇವೊನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಕಡಿಮೆ ಪ್ರಮಾಣದಲ್ಲಿ ಕೆಂಪು ವೈನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಹೃದಯದ ಆರೋಗ್ಯ ಕಾಪಾಡಲು, ರಕ್ತದೊತ್ತಡ ನಿವಾರಣೆಗಾಗಿ ಸೀಮಿತ ಪ್ರಮಾಣದಲ್ಲಿ ಕೆಂಪು ವೈನ್ ಬಳಸಬಹುದು ಎಂದು ಹೇಳಲಾಗಿದೆ. ಮಿತಿಮೀರಿದ ವೈನ್‌ ಸೇವನೆ ಕೂಡ ಆರೋಗ್ಯಕ್ಕೆ ಮಾರಕ. ಹೆಚ್ಚಿನ ವೈನ್ ಸೇವನೆಯಿಂದ ಹೃದಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ವೈನ್‌ನಲ್ಲಿ ಹೆಚ್ಚಿನ ಕ್ಯಾಲೋರಿ ಇರುವುದರಿಂದ ತೂಕ ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

English summary
The boy admitted that he had made the wine using grapes bought by his parents. He said that he did not use spirit or any other alcohol as an ingredient. And he serving it to a friend who consequently felt uneasiness and nausea after drinking it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X