ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೊರೊನಾ ವಿರುದ್ಧ ಸೆಣಸಾಡಿ ಗೆದ್ದು ಬಂದ 93 ವರ್ಷದ ವ್ಯಕ್ತಿ

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 2: ಕೊರೊನಾ ವೈರಸ್‌ಗೆ ಇದುವರೆಗೂ ಬಲಿಯಾದವರ ಪೈಕಿ ಬಹುತೇಕ ಮಂದಿ ಹಿರಿಯ ನಾಗರಿಕರು. ಕೊರೊನಾ ಸೋಂಕು ಹರಡಿರುವುದರ ಅಂಕಿ ಅಂಶ ಗಮನಿಸಿದರೂ 50, 60, 70 ವರ್ಷದ ವಯಸ್ಸಿನವರೇ ಹೆಚ್ಚು.

ಇದೀಗ, ಕೇರಳದಲ್ಲಿ 93 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇಟಲಿಯಲ್ಲಿ ಬಂದಿದ್ದ ಆ ವ್ಯಕ್ತಿ ಮತ್ತು ಆತನ ಪತ್ನಿಗೂ ಸೋಂಕು ತಗುಲಿತ್ತು. ಇದೀಗ, ಇವರಿಬ್ಬರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಮೆರಿಕಾ ಹೊಸ 'ಅಸ್ತ್ರ'ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಮೆರಿಕಾ ಹೊಸ 'ಅಸ್ತ್ರ'

ಕೇರಳದ ಪಥನಮತ್ತಟ್ಟ ಜಿಲ್ಲೆಯ ಥಾಮಸ್ ಅಬ್ರಾಹಿಂ ಮತ್ತು ಆತನ 88 ವರ್ಷದ ಪತ್ನಿ ಮರಿಯಮ್ಮಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇಟಲಿಯಿಂದ ಬಂದಿದ್ದ ಈ ದಂಪತಿ ಮಗ, ಸೊಸೆ ಮತ್ತು ಮೊಮ್ಮಗನ ಜೊತೆ ಸಂಪರ್ಕದಲ್ಲಿದ್ದರು. ಆದರೆ, ಇಬ್ಬರಿಗೂ ಸೋಂಕು ದೃಢವಾಗಿತ್ತು. ಇದೀಗ, ಕೊವಿಡ್ ಸೋಂಕಿನಿಂದ ಈ ದಂಪತಿ ಚೇತರಿಸಿಕೊಂಡಿದ್ದಾರೆ.

93 Year Old Man Recovered From Covid 19 in Kerala

93 ವರ್ಷದ ಥಾಮಸ್ ಅಬ್ರಾಹಿಂ ಅವರು ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳಲು ಅವರ ಆರೋಗ್ಯಕರ ಜೀವನ ಶೈಲಿ ಪ್ರಮುಖ ಕಾರಣ ಎಂದು ಮೊಮ್ಮಗ ಹೇಳಿದ್ದಾರೆ. 'ಧೂಮ್ರಪಾನ ಮಾಡುತ್ತಿರಲಿಲ್ಲ, ಜಿಮ್‌ಗೆ ಹೋಗದೆ ಅವರು ಸಿಕ್ಸ್ ಪ್ಯಾಕ್ ಹೊಂದಿದ್ದರು' ಎಂದು ಮೊಮ್ಮಗ ತಿಳಿಸಿದ್ದಾರೆ.

ಥಾಮಸ್ ಅಬ್ರಾಹಿಂ ಅವರಿಗೆ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಗೆ ಕೃತಜ್ಞತೆ ಎಂದು ಮೊಮ್ಮಗ ಹೇಳಿದ್ದಾರೆ. ಅಂದ್ಹಾಗೆ, ಈ ದಂಪತಿ ಇಟಲಿಯಿಂದ ಆಗಸ್ಟ್ ನಲ್ಲಿ ಬರಬೇಕಿತ್ತು. ಆದರೆ, ಅಜ್ಜನ ಒತ್ತಡದಿಂದ ಬೇಗ ಹೋಗೋಣ ಎಂದು ನಿರ್ಧರಿಸಿದರು. ಇಲ್ಲವಾದಲ್ಲಿ ಇಷ್ಟೊತ್ತಿಗೆ ನಾವು ಇಟಲಿಯಲ್ಲೇ ಇರ್ತಿದ್ವಿ ಎಂದು ಮೊಮ್ಮಗ ಮಾಹಿತಿ ನೀಡಿದ್ದಾರೆ.

93 Year Old Man Recovered From Covid 19 in Kerala

ಇಟಲಿ ಬಳಿಕ ಸ್ಪೇನ್‌ನಲ್ಲಿ ನರಬಲಿ: 10 ಸಾವಿರ ದಾಟಿದ ಸಾವಿನ ಸಂಖ್ಯೆಇಟಲಿ ಬಳಿಕ ಸ್ಪೇನ್‌ನಲ್ಲಿ ನರಬಲಿ: 10 ಸಾವಿರ ದಾಟಿದ ಸಾವಿನ ಸಂಖ್ಯೆ

ಸದ್ಯ ಇಟಲಿ ದೇಶದಲ್ಲಿ 110,574 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 13,155 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ ದೇಶದಲ್ಲಿ ಇಟಲಿ ಅಗ್ರಸ್ಥಾನದಲ್ಲಿದೆ.

English summary
93 Year Old Man Thomas Abraham and his 88 year old wife Mariyamma Recovered From Covid 19 At Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X