ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಸೆರೊಸರ್ವೇ; 82% ಮಂದಿಯಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 11: ಕೆಲವೇ ದಿನಗಳ ಹಿಂದೆ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯವೆಂದು ಗುರುತಿಸಿಕೊಂಡಿದ್ದ ಕೇರಳದಲ್ಲಿ ಇದೀಗ ಹೆಚ್ಚಿನ ಮಂದಿಯಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಯಾಗಿರುವುದಾಗಿ ತಿಳಿದುಬಂದಿದೆ.

ಈಚೆಗೆ ರಾಜ್ಯದಲ್ಲಿ ಸೆರೊಸರ್ವೇ ನಡೆಸಲಾಗಿದ್ದು, 18 ವರ್ಷ ಮೇಲ್ಪಟ್ಟ ಸುಮಾರು 82% ಜನರು ಕೊರೊನಾ ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವುದಾಗಿ ಸಮೀಕ್ಷೆ ತಿಳಿಸಿದೆ. ಇದರೊಂದಿಗೆ, 5-17 ವಯೋಮಾನದ ಸುಮಾರು 40% ಮಕ್ಕಳು ಸೋಂಕಿಗೆ ಒಡ್ಡಿಕೊಂಡಿದ್ದಾರೆ ಎಂಬ ಅಂಶವನ್ನು ಹೇಳಿದೆ.

ತಮಿಳುನಾಡಿನ 70% ಜನಸಂಖ್ಯೆ ಕೊರೊನಾಗೆ ಒಡ್ಡಿಕೊಂಡಿದೆ; ಸೆರೊ ಸರ್ವೇತಮಿಳುನಾಡಿನ 70% ಜನಸಂಖ್ಯೆ ಕೊರೊನಾಗೆ ಒಡ್ಡಿಕೊಂಡಿದೆ; ಸೆರೊ ಸರ್ವೇ

ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸೆರೊಸರ್ವೇ ನಡೆಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ನೀಡಿತ್ತು. ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಸೆರೊ ಸಮೀಕ್ಷಾ ವರದಿಯನ್ನು ಪ್ರಸ್ತುತಪಡಿಸಿದ್ದಾರೆ.

82 Percent People In Kerala Have Covid 19 Antibodies Says Serosurvey

ರಾಜ್ಯದಲ್ಲಿ 18 ವರ್ಷಕ್ಕಿಂತ ಕೆಳಗಿನವರಿಗೆ ಇನ್ನೂ ಸಂಪೂರ್ಣವಾಗಿ ಕೊರೊನಾ ಲಸಿಕೆ ನೀಡಲಾಗಿಲ್ಲ. ಸೋಂಕಿನಿಂದ ಗುಣಮುಖರಾದ ನಂತರ ಪ್ರತಿಕಾಯಗಳ ಸೃಷ್ಟಿಯಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಜುಲೈ ಮೊದಲ ವಾರದಲ್ಲಿ ಹಾಗೂ ಆಗಸ್ಟ್‌ ತಿಂಗಳಿನಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, 13,000 ಮಾದರಿಗಳನ್ನು ರಾಜ್ಯದ ವಿವಿಧ ಭಾಗಗಳಿಂದ ಸಂಗ್ರಹಿಸಲಾಗಿದೆ.

ರಾಜ್ಯದಲ್ಲಿ ಸುಮಾರು 60% ಮಕ್ಕಳು ಸೋಂಕಿಗೆ ತುತ್ತಾಗಿಲ್ಲ. ನವೆಂಬರ್ 1ರಿಂದ ಶಾಲೆಗಳನ್ನು ತೆರೆಯುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಪರಿಸ್ಥಿತಿಯನ್ನು ಗಮನಿಸಿಯೇ ಸರ್ಕಾರ 'ಶಾಲೆಗೆ ಮರಳಿ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ವೀಣಾ ಜಾರ್ಜ್ ವಿವರಣೆ ನೀಡಿದರು.

ಕೋವಿಡ್ ಸಾವನ್ನು ಪಿಣರಾಯಿ ವಿಜಯನ್ ಮರೆ ಮಾಚಿದ್ದಾರೆ: UDFಕೋವಿಡ್ ಸಾವನ್ನು ಪಿಣರಾಯಿ ವಿಜಯನ್ ಮರೆ ಮಾಚಿದ್ದಾರೆ: UDF

'ಶಾಲೆಗಳಿಗೆ ಮಕ್ಕಳು ಬರುವುದನ್ನು ಕಡ್ಡಾಯಗೊಳಿಸಿಲ್ಲ. ಪೋಷಕರ ಸಂಪೂರ್ಣ ಅನುಮತಿ ಮೇರೆಗೆ ಮಕ್ಕಳು ಶಾಲೆಗೆ ಬರಬಹುದಾಗಿದೆ. ಶಾಲೆಗೆ ಬರಲು ಸಿದ್ಧವಿರದ ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ಮುಂದುವರೆಸಲಾಗುತ್ತದೆ' ಎಂದು ತಿಳಿಸಿದರು.

82 Percent People In Kerala Have Covid 19 Antibodies Says Serosurvey

ಕಳೆದ ನಾಲ್ಕು ತಿಂಗಳಿನಿಂದಲೂ ಕೇರಳದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ದೇಶದ ಒಟ್ಟಾರೆ ಪ್ರಕರಣಗಳಲ್ಲಿ ಕೇರಳ ರಾಜ್ಯವೊಂದರಿಂದಲೇ 60-70% ಪ್ರಕರಣಗಳು ದಾಖಲಾಗುತ್ತಿದ್ದವು.

ಐಸಿಎಂಆರ್ ಈ ಹಿಂದೆ ಜುಲೈ ತಿಂಗಳಿನಲ್ಲಿ ನಡೆಸಿದ್ದ ಸೆರೊ ಸರ್ವೇಯಲ್ಲಿ, ಇಡೀ ದೇಶದಲ್ಲಿಯೇ ಕೇರಳದಲ್ಲಿ ಅತಿ ಕಡಿಮೆ ಸೆರೊಪಾಸಿಟಿವಿಟಿ ಇರುವುದಾಗಿ ತಿಳಿಸಲಾಗಿತ್ತು. ಕೇರಳದಲ್ಲಿ ಆಗ 44.4% ಸೆರೊಪಾಸಿಟಿವಿಟಿ ದರವಿರುವುದಾಗಿ ತಿಳಿಸಿದ್ದು, ಇದೀಗ ಆ ದರ 82.6%ಗೆ ಏರಿಕೆಯಾಗಿದೆ.

ಕೊರೊನಾ ಲಸಿಕೆಯಿಂದ ಅಥವಾ ಸೋಂಕಿನಿಂದ ನೈಸರ್ಗಿಕವಾಗಿ ಈ ಪ್ರತಿಕಾಯಗಳು ಉತ್ಪತ್ತಿಯಾಗಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಅರ್ಹ ಜನಸಂಖ್ಯೆಯ ಸುಮಾರು 95% ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 60% ಮಂದಿ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ದತ್ತಾಂಶಗಳು ತಿಳಿಸಿವೆ.

ಸೋಮವಾರ ಕೇರಳದಲ್ಲಿ 6,996 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದು ದಿನದಲ್ಲಿ 84 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ತಮಿಳುನಾಡಿನ ಸೆರೊ ಸಮೀಕ್ಷೆ ವರದಿ:
ಕೇರಳ ನೆರೆ ರಾಜ್ಯ ತಮಿಳುನಾಡಿನಲ್ಲಿ ಶೇ 70ರಷ್ಟು ಜನಸಂಖ್ಯೆ ಕೊರೊನಾ ಸೋಂಕಿಗೆ ಒಡ್ಡಿಕೊಂಡಿದೆ ಎಂದು ಈಚೆಗೆ ರಾಜ್ಯದಲ್ಲಿ ನಡೆಸಿದ ಸೆರೊಪ್ರಿವೆಲೆನ್ಸ್ ಸಮೀಕ್ಷೆ ತಿಳಿಸಿದೆ.
ಈ ವರ್ಷದ ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆಸಿದ ಮೂರನೇ ಹಂತದ ಸಮೀಕ್ಷೆ ದತ್ತಾಂಶವನ್ನು ಆಧರಿಸಿ ವರದಿಯನ್ನು ಬಿಡುಗಡೆ ಮಾಡಲಾಗಿದೆ. 827 ಕ್ಲಸ್ಟರ್‌ಗಳಿಂದ ಸಂಗ್ರಹಿಸಲಾದ 24,586 ಮಾದರಿಗಳಲ್ಲಿ, 7090 ಜನರು ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವುದಾಗಿ ತಿಳಿದುಬಂದಿದೆ. ಇದು, ಸಂಗ್ರಹಿಸಿದ ಮಾದರಿಯ 70 ಪ್ರತಿಶತ ಸಂಖ್ಯೆಯಾಗಿದೆ.
ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯ ನಡೆಸಿದ ಸಮೀಕ್ಷೆಯು, 88% ಸೆರೊ ಪಾಸಿಟಿವಿಟಿಯೊಂದಿಗೆ, ವಿರುಧುನಗರ ಜಿಲ್ಲೆ ಅತಿ ಹೆಚ್ಚು ಸೆರೊಪಾಸಿಟಿವಿಟಿ ದಾಖಲಿಸಿದೆ. ಕರೂರ್ 51% ದಾಖಲಿಸಿದ್ದು, ಅತಿ ಕಡಿಮೆ ಸೆರೊಪಾಸಿಟಿವಿಟಿ ಪ್ರಮಾಣ ಹೊಂದಿದೆ ಎಂಬುದನ್ನು ತೋರಿದೆ.

English summary
At least 82% of people above 18 years have antibodies against Covid-19 and over 40 per cent of children in the 5-17 age group are exposed to the virus in Kerala, said the latest seroprevalence survey conducted by the state government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X