ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಸೋಂಕಿತರ ಸಂಖ್ಯೆ ಏರಿಕೆ, ಆಕ್ವಿವ್ ಕೇಸ್ ಇಳಿಕೆ

|
Google Oneindia Kannada News

ತಿರುವನಂತಪುರಂ, ಮೇ 10: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 62 ಸಾವಿರ ದಾಟಿ ಮುನ್ನುಗ್ಗುತ್ತಿದೆ. ಮುಂಬೈ, ತಮಿಳುನಾಡು, ದೆಹಲಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.

ಈ ಕಡೆ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಇಂದು ಕೇರಳದಲ್ಲಿ ಹೊಸದಾಗಿ 7 ಪ್ರಕರಣ ದಾಖಲಾಗಿತ್ತು. ಇದರಲ್ಲಿ ಅಬುದಾಬಿಯಿಂದ ಬಂದ ಮೂವರು ಒಳಗೊಂಡಿದ್ದಾರೆ. ತ್ರಿಶೂರ್ ಗೆ ಇಬ್ಬರು, ಮಲಪ್ಪೂರಂನಲ್ಲಿ ಒಬ್ಬರು ಅಬುಬಾಬಿಯಿಂದ ಆಗಮಿಸಿದ್ದಾರೆ.

ಕೊರೊನಾ ಮುಕ್ತ ರಾಜ್ಯಗಳ ಪಟ್ಟಿಗೆ ಸೇರಿದ ಮತ್ತೊಂದು ರಾಜ್ಯಕೊರೊನಾ ಮುಕ್ತ ರಾಜ್ಯಗಳ ಪಟ್ಟಿಗೆ ಸೇರಿದ ಮತ್ತೊಂದು ರಾಜ್ಯ

ಈ ಬಗ್ಗೆ ಆರೋಗ್ಯ ಸಚಿವೆ ಕೆ ಶೈಲಜಾ ಮಾಹಿತಿ ನೀಡಿದ್ದು, ಪ್ರಸ್ತುತ ಕೇರಳದಲ್ಲಿ ಕೇವಲ 20 ಕೇಸ್‌ಗಳು ಮಾತ್ರ ಸಕ್ರಿಯವಾಗಿದೆ. ಈವರೆಗೂ 489 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

7-new-covid19-positive-cases-confirmed-in-kerala-today

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 26,712 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 26,350 ಜನರು ಮನೆಗಳಲ್ಲಿ ಮತ್ತು 362 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು.135 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ, 37,464 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 36,630 ಮಾದರಿಗಳ ತಪಾಸಣಾ ಫಲಿತಾಂಶ ಋಣಾತ್ಮಕವಾಗಿದೆ.

ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 3815 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 3525 ಮಾದರಿಗಳು ನಕಾರಾತ್ಮಕವಾಗಿವೆ.ರಾಜ್ಯದಲ್ಲಿ ಭಾನುವಾರ ಹೊಸ ಹಾಟ್ ಸ್ಪಾಟ್‌ಗಳಿಲ್ಲ. ಪ್ರಸ್ತುತ ಒಟ್ಟು 33 ಹಾಟ್ ಸ್ಪಾಟ್‌ಗಳಿವೆ.

ಕೇರಳದಲ್ಲಿ ಇದುವರೆಗೂ ಒಟ್ಟು ಸೋಂಕಿತರ ಸಂಖ್ಯೆ 513ಕ್ಕೆ ಏರಿಕೆಯಾಗಿದೆ. ನಾಲ್ಕು ಜನ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈಗಾಗಲೇ ದೇಶದಲ್ಲಿ ಈಶಾನ್ಯ ಭಾಗದ ಐದು ರಾಜ್ಯಗಳು ಕೊರೊನಾ ಸೋಂಕಿನಿಂದ ಮುಕ್ತವಾಗಿದೆ. ಸಿಕ್ಕಿಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಲ್ಯಾಂಡ್ ಹಾಗೂ ಮಿಜೋರಾಂ ಕೊವಿಡ್ ಮುಕ್ತವಾಗಿದೆ. ಅಂಕಿ ಅಂಶ ನೋಡಿದ್ರೆ, ಸದ್ಯದಲ್ಲಿ ಕೇರಳ ಕೊರೊನಾ ಮುಕ್ತವಾದರೂ ಅಚ್ಚರಿ ಇಲ್ಲ.

English summary
7 new COVID19 positive cases have been confirmed in Kerala today. taking the total active cases in the state to 20. Four people recovered today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X