ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ 'ಪತ್ನಿ ಹಂಚಿಕೆ' ದಂಧೆ: ಭಾಗಿಯಾದ ದಂಪತಿಗಳೆಷ್ಟು?

|
Google Oneindia Kannada News

ತಿರುವನಂತಪುರಂ ಜನವರಿ 10: ಕೇರಳದಲ್ಲಿ ಪತ್ನಿ ವಿನಿಮಯ ದಂಧೆಯಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ 1000 ಕ್ಕೂ ಹೆಚ್ಚು ದಂಪತಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಚಂಗನಾಸೆರಿಯ ಮಹಿಳೆಯೊಬ್ಬರು ಕೊಟ್ಟಾಯಂ ಜಿಲ್ಲೆಯ ಕರುಕಾಚಲ್‌ನಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ಲೈಂಗಿಕತೆಗೆ ಪತ್ನಿಯ ವಿನಿಮಯ ದಂಧೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.

ಗೃಹಿಣಿಯಾಗಿರುವ ಮಹಿಳೆ 'ಕಪಲ್ ಶೇರಿಂಗ್' ಗುಂಪಿನ ಭಾಗವಾಗಿದ್ದ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದು ಆತ ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ ಎಂದು ದೂರಿದ್ದಾರೆ. ಇವರ ಪತಿ ಕರುಕಾಚಲ ಮೂಲದವರು ಎಂದು ತನಿಖೆಯಿಂದ ತಿಳಿದು ಬಂದಿದೆ. ಸಂತ್ರಸ್ತೆ ತಾನು ಅಸ್ವಾಭಾವಿಕ ಲೈಂಗಿಕತೆಗೆ ಒಳಪಟ್ಟಿರುವುದಾಗಿ ಹೇಳಿಕೊಂಡಿದ್ದಾಳೆ. ಸಂತ್ರಸ್ತೆ ದೂರಿನ ಮೇಲೆ ಆಕೆಯ ಪತಿ ಮತ್ತು ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕವಷ್ಟೇ 'ಪತ್ನಿ ಹಂಚಿಕೆ'ಯ ಹಿಂದೆ ವ್ಯಾಪಕ ಜಾಲ ಇರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದ್ದು, 25ಕ್ಕೂ ಹೆಚ್ಚು ಮಂದಿ ನಿಗಾದಲ್ಲಿದ್ದು, ಒಂದೆರಡು ದಿನಗಳಲ್ಲಿ ಹೆಚ್ಚಿನವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

1,000 ಕ್ಕೂ ಹೆಚ್ಚು ದಂಪತಿಗಳು ಈ ಗುಂಪುಗಳಲ್ಲಿದ್ದಾರೆ ಮತ್ತು ಅವರು ಮಹಿಳೆಯರನ್ನು (ಪತ್ನಿಯರ ವಿನಿಮಯ) ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ರಾಜ್ಯದ ಮೂರು ಜಿಲ್ಲೆಗಳಿಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ, ರಾಜ್ಯದಾದ್ಯಂತ ಜನರು ಈ ದಂಧೆಯ ಭಾಗವಾಗಿದ್ದಾರೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ. ಸಮಾಜದ ಉನ್ನತ ಸ್ಥಾನದಲ್ಲಿರುವ ಹಲವಾರು ಮಂದಿ ಈ ಗುಂಪಿನ ಭಾಗವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

7 held as partner swapping racket busted in Kerala, more than 1000 couples involved, say cops

ಏನಿದು ಪತ್ನಿ ವಿನಿಮಯ?

ಪತ್ನಿ ವಿನಿಮಯ ಅಂದರೆ ತಮ್ಮ ಪತ್ನಿಯನ್ನು ಪರಪುರುಷರೊಂದಿಗೆ ಹಂಚಿಕೊಳ್ಳುವುದು. ಇದನ್ನು ಹಲವಾರು ಜೋಡಿಗಳು ಸೇರಿ ಮಾಡುವ ಮೂಲಕ ಪರಸ್ಪರ ಪತ್ನಿ ವಿನಿಮಯ ಮಾಡಿಕೊಳ್ಳುವ ದಂಧೆಯಾಗಿದೆ. ಇದರಿಂದ ಗುಂಪಿನಲ್ಲೇ ಹಣ ವಿನಿಮಯ ಕೂಡ ಮಾಡಿಕೊಳ್ಳಲಾಗುತ್ತದೆ. ಪುರುಷರು ತಮಗೆ ಇಷ್ಟವಾದ ಪರರರ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಬುಕ್ ಮಾಡಬಹುದು. ಇದಕ್ಕೆ ಪರಸ್ಪರ ಸಂಪರ್ಕ ಹೊಂದಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗಿದೆ.

ಕೊಟ್ಟಾಯಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ಮಾತನಾಡಿ, "ಮೊದಲು ಟೆಲಿಗ್ರಾಂ ಮತ್ತು ಮೆಸೆಂಜರ್ ಗುಂಪುಗಳ ಮೂಲಕ ಪರಸ್ಪರ ಸಂಪರ್ಕ ಬೆಳೆಸಲಾಗುತ್ತದೆ. ನಂತರ ಎರಡು ಅಥವಾ ಮೂರು ಜೋಡಿಗಳು ಭೇಟಿಯಾಗುವುದು ವಿಧಾನವಾಗಿದೆ. ನಂತರ ಮಹಿಳೆಯರನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಓರ್ವ ಮಹಿಳೆಯನ್ನು(ಪತ್ನಿ) ಮೂವರು ಹಂಚಿಕೊಂಡ ಉದಾಹರಣೆಗಳಿವೆ. ಒಂದು ಸಮಯದಲ್ಲಿ ಪುರುಷರು, ಕೆಲವು ಪುರುಷರು ತಮ್ಮ ಹೆಂಡತಿಯರನ್ನು ಒಂದು ದಿನದ ದೈಹಿಕ ಸಂಬಂಧಕ್ಕಾಗಿ ಹಣಕ್ಕಾಗಿ ಒದಗಿಸುತ್ತಾರೆ. ಈ ಗುಂಪಿನಲ್ಲಿ ಹಣವೂ ಒಂದು ಕೈಯಿಂದ ಮತ್ತೊಂದು ಕೈ ಸೇರುತ್ತದೆ" ಎಂದು ಹೇಳಿದ್ದಾರೆ.

ಈ ಮಹಿಳಾ ವಿನಿಮಯ ಗುಂಪಿನಲ್ಲಿ ಭಾಗಿಯಾಗಿರುವವರ ಸೂಕ್ಷ್ಮ ವಿವರಗಳನ್ನು ಪಡೆಯಲು ಮತ್ತು ಈ ಗುಂಪಿನ ಸದಸ್ಯರು ಬೇರೆ ಯಾವುದೇ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂದು ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2019ರಲ್ಲಿ ಕಾಯಂಕುಲಂನಲ್ಲಿ ಪತ್ನಿ ವಿನಿಮಯ ಜಾಲವನ್ನು ಪೊಲೀಸರು ಬೇಧಿಸಿದ್ದನ್ನು ಸ್ಮರಿಸಬಹುದಾಗಿದೆ. ಈ ಗುಂಪು ಶೇರ್‌ಚಾಟ್, ಸಾಮಾಜಿಕ ನೆಟ್‌ವರ್ಕ್ ಅಪ್ಲಿಕೇಶನ್‌ನ ಸಹಾಯದಿಂದ ತಮ್ಮ ಹೆಂಡತಿಯರನ್ನು ಲೈಂಗಿಕತೆಗಾಗಿ ವಿನಿಮಯ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಕೃತ್ಯಕ್ಕಾಗಿ ಮಹಿಳೆಯರ ಬ್ರೇನ್ ವಾಶ್

ಇನ್ನು ಬಲವಂತಪಡಿಸಿದ ಅನೇಕ ಹೆಂಡತಿಯರು ಆತ್ಮಹತ್ಯೆಯ ಮಾರ್ಗ ಅನುಸರಿಸುತ್ತಿದ್ದಾರೆ. ಇನ್ನು ಈ ಗುಂಪಿನಲ್ಲಿ ಶೇ 90 ರಷ್ಟು ಮಹಿಳೆಯರಿಗೆ ಬ್ರೈನ್ ವಾಶ್​ ಮಾಡಿ ಈ ರೀತಿ ಕಾರ್ಯಕ್ಕೆ ಮುಂದಾಗುವಂತೆ ಪ್ರೇರೆಪಿಸಲಾಗಿದೆ.ಈ ದಂಧೆಯಲ್ಲಿ 14,000 ರು ಪಾವತಿಸಬೇಕು ಎಂಬ ಅಂಶ ಬೆಳಕಿಗೆ ಬಂದಿದೆ. ಅಂತಹ ಹಲವಾರು ಯುವಕರು ಗುಂಪಿನ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಗುಜರಾತ್‌ನ ಅಹಮದಾಬಾದ್‌ನಲ್ಲೂ ಇದೇ ರೀತಿ ಪ್ರಕರಣ ದಾಖಲಾಗಿತ್ತು. 34 ವರ್ಷದ ಮಹಿಳೆಯೊಬ್ಬರು, ತನ್ನ ಗಂಡ ಆತನ ಹಿರಿಯ ಸಹೋದರನೊಂದಿಗೆ ಪತ್ನಿ ವಿನಿಮಯ ಮಾಡಿಕೊಳ್ಳಲು ಒತ್ತಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಆತನ ಮಾತಿಗೆ ಒಪ್ಪದ ಹಿನ್ನಲೆ ತನ್ನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದರು.

Recommended Video

Karnataka Minister Blackmailed: ಇದೆಲ್ಲಾ ನನ್ನ ತೇಜೋವಧೆ ಮಾಡೋಕೆ ಸಂಚು | Oneindia Kannada

ತನ್ನ ಗಂಡನ ಸಹೋದರ ಹೇಗೆ ಆಕೆಗೆ ಲೈಂಗಿಕ ಕಿರುಕುಳ ನೀಡಿದರು ಎಂಬ ಕುರಿತು ಸಂತ್ರಸ್ತ ಮಹಿಳೆ ತನ್ನ ಸ್ನೇಹಿತರ ಬಳಿಕ ವಿವರಿಸಿದ್ದರು. ಬಳಿಕ ಸ್ನೇಹಿತರು ಆಕೆಯ ಗಂಡ ಮತ್ತು ಆತನ ಅಣ್ಣನ ಜೊತೆಗೆ ಮಾತನಾಡಲು ಮುಂದಾದರು. ಆದರೆ, ಅವರು ಬೆದರಿಸಿದರು, ಬಳಿಕ ದಿಕ್ಕು ತೋಚದೆ ಮಹಿಳೆ ಪೊಲೀಸರಿಗೆ ಸಂಪರ್ಕಿಸಿದ್ದಾಗಿ ದೂರಿನಲ್ಲಿ ದಾಖಲಿಸಿದ್ದರು.

English summary
The Kerala Police have arrested seven persons in connection with the exchange of partners for sex after a woman from Changanaserry lodged a complaint with the Karukachal police in the Kottayam district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X