• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಕೋಳಿ ಮೊಟ್ಟೆಯಲ್ಲಿ ಹಳದಿ ಬದಲು ಹಸಿರು ಪದರ: ಏನಿದು ಅಚ್ಚರಿ

|

ಮಲಪ್ಪುರಂ, ಮೇ 28: ಮೊಟ್ಟೆಯ ಒಳಗೆ ಸಾಮಾನ್ಯವಾಗಿ ಹಳದಿ ಮತ್ತು ಬಿಳಿ ಪದರವಿರುತ್ತದೆ. ಆದರೆ ಈ ಮೊಟ್ಟೆಯಲ್ಲಿ ಹಳದಿ ಪದರದ ಬದಲಾಗಿ ಹಸಿರು ಪದರವಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

   ಕಲಬುರಗಿಯಲ್ಲೊಂದು ಕರುಳು ಕಿವಿಚುವ ದೃಶ್ಯ | Oneindia Kannada

   ಕೇರಳದ ಮಲಪ್ಪುರಂನ ಒತ್ತುಕ್ಕುಂಗಲ್ ನಲ್ಲಿರುವ ಕೋಳಿ ಫಾರಂ ನಲ್ಲಿ ಕೋಳಿಯೊಂದು ಇಟ್ಟಿರುವ ಮೊಟ್ಟೆಯೊಳಗೆ ಹಸಿರು ಬಣ್ಣದ ಲೋಳೆ ಕಂಡುಬಂದಿದೆ, ಎಕೆ ಶಹೀಬುದ್ದೀನ್ ಎಂಬುವವರಿಗೆ ಸೇರಿರುವ ಕೋಳಿ ಫಾರಂನಲ್ಲಿ ಇಂತಹ ಘಟನೆ ಕಂಡುಬಂದಿದ್ದು, ಹಸಿರು ಬಣ್ಣದ ಲೋಳೆಯ ಮೊಟ್ಟೆಯ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

   ಜೊತೆಗೆ, ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ವಿಶೇಷ ಕೋಳಿಗಳ ಮೊಟ್ಟೆಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಕೆಲವು ವಿಶೇಷ ಫೀಡ್‌ಗಳನ್ನು ಕೋಳಿ ಸೇವಿಸುವುದರಿಂದ ಅವುಗಳು ಹಳದಿ ಭಾಗವಿರುವ ಮೊಟ್ಟೆಯನ್ನು ಇಡುವ ಸಾಧ್ಯತೆ ಇದೆ' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

   ಕೋಳಿ ಮಾಂಸ, ಮೊಟ್ಟೆ ಸುರಕ್ಷಿತ: ಕೊರೊನಾ ಭೀತಿ ಬೇಡ ಪ್ರಭು ಚವ್ಹಾಣ್

   ಈ ಸುದ್ದಿ ತಿಳಿದ ಹಲವರು ಶಹೀಬುದ್ದೀನ್ ಅವರಿಗೆ ಕರೆ ಮಾಡಿದ್ದು, ಹಸಿರು ಬಣ್ಣದ ಲೋಳೆಯ ಮೊಟ್ಟೆಯ ಕುರಿತು ವಿಚಾರಿಸುತ್ತಿದ್ದಾರೆ.

   ಹಸಿರು ಪದರವಿರುವ ಮೊಟ್ಟೆ ಇಡುವ ಕೋಳಿ

   ಹಸಿರು ಪದರವಿರುವ ಮೊಟ್ಟೆ ಇಡುವ ಕೋಳಿ

   ಪ್ರಸ್ತುತ ಹಸಿರು ಬಣ್ಣದ ಲೋಳೆಯಿರುವ ಮೊಟ್ಟೆಗಳಿಡುವ ಕೋಳಿಗಳನ್ನು ಮತ್ತು ಮೊಟ್ಟೆಗಳ ಉತ್ಪಾದನೆ ಹೆಚ್ಚಿಸಿ ಇದರ ವ್ಯಾಪಾರ ಮಾಡುವ ಕುರಿತು ಶಹೀಬುದ್ದೀನ್ ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಹಲವಾರು ಮಂದಿ ತಮಗೆ ಹಸಿರು ಬಣ್ಣದ ಲೋಳೆ ಇರುವ ಮೊಟ್ಟೆಗಳು ಮತ್ತು ಅದರ ಕೋಳಿಗಳು ಬೇಕು ಹೇಳಿದ್ದಾರೆ. ಹೀಗಾಗಿ ತಾವು ಈ ಉತ್ಪಾದನೆಯನ್ನು ಹೆಚ್ಚಿಸಿ ಅದರ ವ್ಯಾಪಾರ ಮಾಡಬೇಕು ಎಂದು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

   ಈ ಕೋಳಿಯ ತಳಿಯೇ ಬೇರೆ

   ಈ ಕೋಳಿಯ ತಳಿಯೇ ಬೇರೆ

   ಇತ್ತೀಚೆಗೆ ಶಹೀಬುದ್ದೀನ್ ಕೋಳಿಯೊಂದರ ಮೊಟ್ಟೆಯನ್ನು ಬೇಯಿಸಿದ್ದರು. ಆಗ ಮೊಟ್ಟೆಯ ಲೋಳೆ ಹಸಿರು ಬಣ್ಣದಿಂದ ಇತ್ತು. ಇದರಿಂದ ಗಾಬರಿಯಾದ ಅವರ ಕುಟುಂಬ ಅದನ್ನು ತಿನ್ನದೇ ಹಾಗೆಯೇ ಬಿಟ್ಟಿತ್ತು. ಅಚ್ಚರಿ ಎಂದರೆ ಈ ಹಸಿರು ಬಣ್ಣದ ಲೋಳೆಯ ಮೊಟ್ಟೆ ಇಟ್ಟಿದ್ದ ಕೋಳಿಯ ಇತರೆ ಮೊಟ್ಟೆಗಳಿಂದ ಮರಿಗಳು ದೊಡ್ಡದಾಗಿ ಅವುಗಳೂ ಕೂಡ ಹಸಿರು ಬಣ್ಣದ ಲೋಳೆಯಿರುವ ಮೊಟ್ಟೆಗಳನ್ನು ಇಡುತ್ತಿವೆ. ಈ ಘಟನೆ ಬಳಿಕ ಶಹೀಬುದ್ದೀನ್ ಕುಟುಂಬ ಹಸಿರು ಬಣ್ಣದ ಲೋಳೆ ಇರುವ ಮೊಟ್ಟೆಗಳನ್ನು ನಿರಾಂತಕವಾಗಿ ತಿನ್ನ ತೊಡಗಿದ್ದಾರೆ. ಈ ವರೆಗೂ ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾಗಿಲ್ಲವಂತೆ. ಅಲ್ಲದೆ ಹಸಿರು ಲೋಳೆಯ ಮೊಟ್ಟೆ ಕೂಡ ಹಳದಿ ಬಣ್ಣದ ಲೋಳೆಯ ಮೊಟ್ಟೆಯನ್ನೇ ಹೋಲುತ್ತಿದೆ. ರುಚಿಯಲ್ಲೂ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.

   ಬೇರೆ ಆಹಾರ ತಿಂದಿರಬಹುದು

   ಬೇರೆ ಆಹಾರ ತಿಂದಿರಬಹುದು

   ಬಹುಶಃ ಕೋಳಿ ಸಾಮಾನ್ಯ ಆಹಾರಕ್ಕಿಂತ ಬೇರೆ ಎನ್ನಾದರೂ ತಿಂದರಬೇಕು ಎಂಬ ಶಂಕೆ ಇದೆ. ಅಧ್ಯಯನದಿಂದ ಈ ಬಗ್ಗೆ ಮಾಹಿತಿ ಪಡೆಯುತ್ತೇವೆ. ಮೂರು ವಾರಗಳ ಬಳಿಕವೂ ಕೋಳಿಗಳು ಇದೇ ರೀತಿಯ ಮೊಟ್ಟೆ ಇಟ್ಟರೆ ಆಗ ಬೇರೆ ರೀತಿಯ ಅಧ್ಯಯನ ನಡೆಸ ಬೇಕಾಗುತ್ತದೆ ಎಂದು ಹೇಳಿದ್ದಾರೆ.

   ಎಲ್ಲಾ ರಾಜ್ಯಗಳಲ್ಲೂ ಇದೇ ಸುದ್ದಿ

   ಎಲ್ಲಾ ರಾಜ್ಯಗಳಲ್ಲೂ ಇದೇ ಸುದ್ದಿ

   ಇದೇ ವಿಚಾರ ಈಗ ಕೇರಳದಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಕೇರಳ ಕೆಲ ವಿಜ್ಞಾನಿಗಳು ಈ ಕೋಳಿ ಮತ್ತು ಮೊಟ್ಟೆಗಳ ಮೇಲೆ ಸಂಶೋಧನೆ ಆರಂಭಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪಶು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹರಿಕಷ್ಣ ಎಸ್ ಅವರು, ಹಸಿರು ಬಣ್ಣದ ಲೋಳೆಯ ಮೊಟ್ಟೆ ಮತ್ತು ಅದರ ಕೋಳಿಯ ಮೇಲಿನ ಸಂಶೋಧನೆ ಪ್ರಗತಿಯಲ್ಲಿದೆ. ಈ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಅಧ್ಯಯನ ಪ್ರಗತಿಯಲ್ಲಿದ್ದು, ಮೂರು ನಾಲ್ಕು ವಾರಗಳ ನಿರಂತರ ಅಧ್ಯಯನದ ಬಳಿಕ ಇದಕ್ಕೆ ಉತ್ತರ ಸಿಗಬಹುದು ಎಂದು ಹೇಳಿದ್ದಾರೆ.

   English summary
   After six hens in a small poultry farm in Kerela laid eggs with green yolk, social media went berserk with the photos of this bizarre phenomenon. The incident has happened in the poultry farm of A K Shihabudheen, a native of Othukkungal in Malappuram in Kerala.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more