ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.17ಕ್ಕೆ ಶಬರಿಮಲೆ ಯಾತ್ರೆ ಆರಂಭ; 10ರಿಂದ 50 ವರ್ಷದ 560 ಮಹಿಳೆಯರ ನೋಂದಣಿ

|
Google Oneindia Kannada News

ತಿರುವನಂತಪುರಂ, ನವೆಂಬರ್ 9: ಇದೇ ತಿಂಗಳ 17ನೇ ತಾರೀಕು ಬಾಗಿಲು ತೆರೆಯುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕಾಗಿ 10ರಿಂದ 50 ವರ್ಷ ವಯೋಮಾನದ 560 ಮಹಿಳೆಯರು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ.

ಮೂರು ದಿನಗಳ ಹಿಂದಷ್ಟೇ ಕೇರಳ ಪೊಲೀಸರು ಪೋರ್ಟಲ್ ಆರಂಭಿಸಿದ್ದು, ಮೂರು ತಿಂಗಳ ಕಾಲ ನಡೆಯುವ ಪುಣ್ಯಕ್ಷೇತ್ರ ದರ್ಶನಕ್ಕೆ ಈ ಮೂಲಕವೇ ನಿಯಂತ್ರಣ ಮಾಡಲಾಗುತ್ತದೆ. 3.5 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಈ ವೆಬ್ ಸೈಟ್ ನಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. ಆ ಪೈಕಿ 560 ಮಹಿಳೆಯರು 10ರಿಂದ 50 ವರ್ಷ ವಯೋಮಾನದವರು.

ಶಬರಿಮಲೆ: ದೇವಸ್ಥಾನದ ಬಳಿ ಕರ್ತವ್ಯಕ್ಕೆ 50 ವರ್ಷ ಮೀರಿದ ಮಹಿಳಾ ಪೊಲೀಸರುಶಬರಿಮಲೆ: ದೇವಸ್ಥಾನದ ಬಳಿ ಕರ್ತವ್ಯಕ್ಕೆ 50 ವರ್ಷ ಮೀರಿದ ಮಹಿಳಾ ಪೊಲೀಸರು

ದೇವಸ್ಥಾನವನ್ನು ನಿರ್ವಹಣೆ ಮಾಡುತ್ತಿರುವ ತಿರುವಾಂಕೂರ್ ದೇವಸ್ವಂ ಮಂಡಳಿ ಪ್ರಕಾರ, ಕಳೆದ ವರ್ಷ ಈ ರೀತಿಯ ನೋಂದಣಿಯ ಮೂಲಕ 16 ಲಕ್ಷ ಮಂದಿ ದರ್ಶನ ಮಾಡಿದ್ದಾರೆ. ಈ ರೀತಿ ವೈಯಕ್ತಿಕವಾಗಿ ನೋಂದಣಿ ಮಾಡಿದ ನಂತರ ಸರಕಾರ ನೀಡುವ ಗುರುತಿನ ಪತ್ರ ಮತ್ತಿತರ ದಾಖಲೆಗಳನ್ನು ನೀಡಬೇಕಾಗುತ್ತದೆ.

Sabarimala

ಪಂಬಾದಲ್ಲಿ ಭಕ್ತರಿಗೆ ಚೀಟಿ ಕೊಡಲಾಗುತ್ತಿದೆ. ಅದರಲ್ಲಿ ದರ್ಶನದ ಸಮಯ ಮತ್ತಿತರ ವಿವರಗಳಿರುತ್ತವೆ. ಆನ್ ಲೈನ್ ನಲ್ಲಿ ನೋಂದಣಿ ಮಾಡುವ ಭಕ್ತರಿಗೆ ಪ್ರತ್ಯೇಕ ಸಾಲಿರುತ್ತದೆ. ಮತ್ತು ಈ ಆನ್ ಲೈನ್ ಸೇವೆ ಉಚಿತವಾಗಿರುತ್ತದೆ.

ಎಲ್ಲ ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಆದರೆ ಪ್ರತಿಭಟನೆ-ಹಿಂಸಾಚಾರದ ಮೂಲಕ ತಡೆಯುತ್ತಿರುವುದರಿಂದ 10ರಿಂದ 50 ವರ್ಷ ವಯೋಮಾನದವರು ಈ ವರೆಗೆ ದೇಗುಲ ಪ್ರವೇಶ ಮಾಡಲು ಸಾಧ್ಯವಾಗಿಲ್ಲ.

ಶಬರಿಮಲೆ ಗಲಾಟೆ ಅಜೆಂಡಾದ ಭಾಗ ಎಂದ ಬಿಜೆಪಿ: ವಿಡಿಯೋದಲ್ಲಿ ಬಹಿರಂಗಶಬರಿಮಲೆ ಗಲಾಟೆ ಅಜೆಂಡಾದ ಭಾಗ ಎಂದ ಬಿಜೆಪಿ: ವಿಡಿಯೋದಲ್ಲಿ ಬಹಿರಂಗ

ಸುಪ್ರೀಂ ಕೋರ್ಟ್ ಆದೇಶ ಸೆಪ್ಟೆಂಬರ್ ನಲ್ಲಿ ಬಂದಿದ್ದು, ಆ ನಂತರ ಎರಡು ಬಾರಿ ದೇಗುಲದ ಬಾಗಿಲು ತೆರೆಯಲಾಯಿತು. ಕನಿಷ್ಠ ಹದಿನೈದು ಮಹಿಳೆಯರು ದೇಗುಲ ಪ್ರವೇಶಿಸಲು ಮುಂದೆ ಬಂದಿದ್ದರು.

ಶಬರಿಮಲೆ ದೇಗುಲದ ವಾರ್ಷಿಕ ಕ್ಷೇತ್ರ ದರ್ಶನಕ್ಕೆ ಎಂಟು ದಿನಗಳಷ್ಟೇ ಬಾಕಿ ಇದೆ. ನವೆಂಬರ್ 13ರಂದು ಸುಪ್ರೀಂ ಕೋರ್ಟ್ ತೀರ್ಪು ಪರಿಶೀಲನಾ ಅರ್ಜಿ ಕೈಗೆತ್ತಿಕೊಳ್ಳಲಿದೆ. ದೇಗುಲ ಪ್ರವೇಶ ಎಂಬುದು ಭಾವನಾತ್ಮಕ ವಿಚಾರವಾಗಿದ್ದು, ರಾಜಕೀಯ ಪಕ್ಷಗಳ ಮುಖಂಡರು ಇದರ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಎಲ್ಲ ವಯಸ್ಸಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಇನ್ನಷ್ಟು ಕಾಲಾವಕಾಶ ನೀಡಬಹುದು ಎಂಬುದು ಪೊಲೀಸರು ಸೇರಿದಂತೆ ಹಲವರ ಭರವಸೆ.

English summary
At least 560 women in the age-group of 10-50 years have enrolled to have a ‘darshan’ of Lord Ayyappa in Sabarimala temple when it opens for a three-month period from November 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X