ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಲ್ಲಿ ಉದ್ಯೋಗ ಕಳೆದುಕೊಂಡ 56 ಸಾವಿರ ಕೇರಳಿಗರು

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 30 : ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ಅಪಾರವಾದ ನಷ್ಟಕ್ಕೆ ಕಾರಣವಾಗಿದೆ. ಇದರಿಂದಾಗಿ ಉದ್ಯೋಗಗಳು ಕಡಿತವಾಗುತ್ತಿವೆ. ಕೇರಳದ 56 ಸಾವಿರ ಜನರು ಉದ್ಯೋಗ ಕಳೆದುಕೊಂಡಿದ್ದು, ರಾಜ್ಯಕ್ಕೆ ವಾಪಸ್ ಆಗಲು ನೋಂದಣಿ ಮಾಡಿಸಿದ್ದಾರೆ.

Recommended Video

ಕೆಲಸ ಕಳೆದುಕೊಂಡ ಸಾಫ್ಟ್ ವೇರ್ ಉದ್ಯೋಗಿಗಳಿಗೆ ಪ್ರಾಮಿಸ್ ಮಾಡಿದ ಕುಮಾರಣ್ಣ | Kumarswamy | IT | Jobs

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಮಾಹಿತಿ ನೀಡಿದ್ದಾರೆ. ವಿವಿಧ ದೇಶಗಳಲ್ಲಿ ಇರುವ ಕೇರಳದವರನ್ನು ವಾಪಸ್ ಕರೆತರಲು ಆನ್‌ಲೈನ್ ಮೂಲಕ ನೋಂದಣಿ ಆರಂಭಿಸಲಾಗಿದೆ. ಭಾನುವಾರದಿಂದ ಬುಧವಾರದ ತನಕ 3,20,463 ಜನರು ಹೆಸರು ನೋಂದಣಿ ಮಾಡಿಸಿದ್ದಾರೆ.

ಕರ್ನಾಟಕ, ತಮಿಳುನಾಡು ಗಡಿ ಮುಚ್ಚಲು ಮುಂದಾದ ಕೇರಳ ಕರ್ನಾಟಕ, ತಮಿಳುನಾಡು ಗಡಿ ಮುಚ್ಚಲು ಮುಂದಾದ ಕೇರಳ

ನಾನ್‌ ರೆಸಿಡೆಂಟ್‌ ಕೇರಳೈಟ್ಸ್ ಅಫೈರ್ಸ್‌ (ನೋರ್ಕಾ) ಆನ್‌ಲೈನ್ ನೋಂದಣಿಯ ಜವಾವ್ದಾರಿ ಹೊತ್ತಿದೆ. ಉದ್ಯೋಗ ಕಡಿತ, ವೀಸಾ ಅವಧಿ ಅಂತ್ಯ, ವಾರ್ಷಿಕ ರಜೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಕೇರಳದ ಜನರು ವಾಪಸ್ ಬರುತ್ತಿದ್ದಾರೆ.

ಕೇರಳಕ್ಕೆ ವಾಪಸ್ ಆಗಲು 1 ಲಕ್ಷ ಜನರ ನೋಂದಣಿ ಕೇರಳಕ್ಕೆ ವಾಪಸ್ ಆಗಲು 1 ಲಕ್ಷ ಜನರ ನೋಂದಣಿ

56 Thousand People Of Kerala Lost Jobs In Foreign Countries

"ಇದುವರೆಗೂ ನೋಂದಣಿ ಮಾಡಿಸಿದವರಲ್ಲಿ 9561 ಮಕ್ಕಳು, 9515 ಗರ್ಭಿಣಿ ಮಹಿಳೆಯರು ಸೇರಿದ್ದಾರೆ. 56,114 ಜನರು ಉದ್ಯೋಗ ಕಳೆದುಕೊಂಡಿದ್ದು ವಾಪಸ್ ಬರಲು ನೋಂದಣಿ ಮಾಡಿಸಿದ್ದಾರೆ" ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಲಾಕ್ ಡೌನ್; ಬೆಂಗಳೂರಿಂದ ವಿದೇಶಕ್ಕೆ ಮರಳಿದ್ದು 3 ಸಾವಿರ ಜನರು ಲಾಕ್ ಡೌನ್; ಬೆಂಗಳೂರಿಂದ ವಿದೇಶಕ್ಕೆ ಮರಳಿದ್ದು 3 ಸಾವಿರ ಜನರು

58,823 ಜನರು ವಾರ್ಷಿಕ ರಜೆ ಮೇಲೆ ಕೇರಳಕ್ಕೆ ವಾಪಸ್ ಬರಲು ನೋಂದಣಿ ಮಾಡಿಸಿದ್ದಾರೆ. ಈಗ ನೋಂದಣಿ ಮಾಡಿಸಿಕೊಂಡಿರುವ 3 ಲಕ್ಷ ಜನರನ್ನು ಹೊರತುಪಡಿಸಿ ಇನ್ನೂ ಅನೇಕರು ನೋಂದಣಿ ಮಾಡಿಕೊಳ್ಳಲಿದ್ದಾರೆ ಎಂದು ನೋರ್ಕಾ ಹೇಳಿದೆ.

ವ್ಯಾಸಂಗ ಮುಗಿಸಿರುವ 2448 ವಿದ್ಯಾರ್ಥಿಗಳು, ಜೈಲಿನಿಂದ ಬಿಡುಗಡೆಗೊಂಡಿರುವ 748 ಕೈದಿಗಳು ಕೇರಳಕ್ಕೆ ಬರಲು ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಸಿದ್ದಾರೆ. 41,236 ಜನರ ವೀಸಾ ಅವಧಿ ಮುಕ್ತಾಯಗೊಂಡಿದ್ದು ಅವರು ಕೇರಳಕ್ಕೆ ವಾಪಸ್ ಆಗುತ್ತಿದ್ದಾರೆ.

ಕೇಂದ್ರ ಸರ್ಕಾರ ಮೇ 3ರ ಬಳಿಕ ವಿದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರುವ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಹೇಳಿದೆ. ಎಲ್ಲಾ ರಾಜ್ಯಗಳು ಸಹ ವಿದೇಶದಿಂದ ಆಗಮಿಸುವವರ ನೋಂದಣಿ ಕಾರ್ಯವನ್ನು ಆರಂಭಿಸಿದೆ.

ಕೇರಳ ಸರ್ಕಾರ ಈಗಾಗಲೇ ವಿದೇಶದಿಂದ ಬಂದವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಯಾರೂ ಬರುವಂತಿಲ್ಲ ಎಂದು ತಿಳಿಸಿದೆ. ವಿದೇಶದಿಂದ ಬಂದವರನ್ನು ಮೊದಲು ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ ಬಳಿಕ ಮನೆಗೆ ಕಳಿಸಲಾಗುತ್ತದೆ.

English summary
Kerala chief minister Pinarayi Vijayan said that 3,20,463 Kerala expatriates have registered to return to state. 56,114 people who lost jobs in foreign countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X