ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್ ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 480 ಮಂದಿ ಮೇಲೆ ಪ್ರಕರಣ ದಾಖಲು

|
Google Oneindia Kannada News

ತಿರುವನಂತಪುರಂ, ಮೇ 06: ಕೇರಳದ ಮುನ್ನಾರ್‌ನ ಚರ್ಚ್‌ ಒಂದರಲ್ಲಿ ಕೋವಿಡ್ ನಿಯಮ ಮೀರಿ ರಿಟ್ರೀಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 480 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿಎಸ್ಐ ಕ್ರೈಸ್ಟ್ ಚರ್ಚ್ ನ ಪಾದ್ರಿಗಳು, ಸಿಬ್ಬಂದಿಗಳು, ಪದಾಧಿಕಾರಿಗಳು ಸೇರಿ 480 ಮಂದಿಯ ವಿರುದ್ಧ ಕೇಸ್ ದಾಖಲಾಗಿದೆ.

ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕಳೆದ ತಿಂಗಳು ದಕ್ಷಿಣ ಕೇರಳದ ಮುನ್ನಾರ್ ನಲ್ಲಿರುವ ಚರ್ಚ್ ನಲ್ಲಿ ನಡೆದಿದ್ದ ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

480 Persons Including CSI Priests Booked For Violating Covid Protocol During Munnar Retreat

ಇಡುಕ್ಕಿ ಜಿಲ್ಲಾಧಿಕಾರಿ ಹೆಚ್ ದಿನೇಶನ್ , ಈ ಬಗ್ಗೆ ಮೇ.05 ರಂದು ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ದೇವಿಕುಲಮ್ ಉಪ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. "ಚರ್ಚ್ ನಲ್ಲಿ ನಡೆದ ರಿಟ್ರಿಟ್ ಕಾರ್ಯಕ್ರಮ ಕೋವಿಡ್-19 ಶಿಷ್ಟಾಚಾರ (ನಿಯಮ)ಗಳನ್ನು ಉಲ್ಲಂಘನೆ ಮಾಡಲಾಗಿದೆ" ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪಾದ್ರಿಗಳು ಹಾಗೂ ಪದಾಧಿಕಾರಿಗಳ ವಿರುದ್ಧ ಕೇರಳ ಎಪಿಡಮಿಕ್ ಡಿಸೀಸಸ್ ಆರ್ಡಿನೆನ್ಸ್, 2020 ರ ಪ್ರಕಾರ ಕೇಸ್ ದಾಖಲಿಸಲಾಗಿದೆ. ಈ ಕಾರ್ಯಕ್ರಮದ ಬಗ್ಗೆ ಪೊಲೀಸರಿಗೂ ಯಾವುದೇ ಮಾಹಿತಿ ಇರಲಿಲ್ಲ.

ಈ ಹಿನ್ನೆಲೆಯಲ್ಲಿ ಎಫ್ಐಆರ್ ಒಂದನ್ನು ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಡಿವೈಎಸ್ ಪಿ ಆರ್ ಸುರೇಶ್ ಹೇಳಿದ್ದಾರೆ. ಕಾರ್ಯಕ್ರಮ ಆಯೋಜಕರಿಗೂ ಕೋವಿಡ್-19 ಸೋಂಕು ತಗುಲಿದೆ.

ದೇವಿಕುಲಮ್ ತಹಶೀಲ್ದಾರ್ ಸಲ್ಲಿಸಿದ ಪ್ರಾಥಮಿಕ ವರದಿಯ ಆಧಾರದಲ್ಲಿ ಈ ಕೇಸ್ ದಾಖಲಾಗಿದೆ.

English summary
The police have registered a case against 480 people including priests, church staff and the office-bearers of CSI Christ church in connection with the annual retreat of CSI South Kerala diocese which took place in Munnar last month allegedly violating the Covid-19 protocol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X