ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸರಗೋಡು; ವಧು, ವರ ಸೇರಿ 43 ಜನರಿಗೆ ಕೋವಿಡ್ ಸೋಂಕು

|
Google Oneindia Kannada News

ಕಾಸರಗೋಡು, ಜುಲೈ 27: ಕಾಸರಗೋಡಿನಲ್ಲಿ ನವ ವಿವಾಹಿತರು ಸೇರಿದಂತೆ ಮದುವೆಯಲ್ಲಿ ಪಾಲ್ಗೊಂಡಿದ್ದ 43 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಪೊಲೀಸರು ವಧುವಿನ ತಂದೆಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಜುಲೈ 17ರಂದು ಕರ್ನಾಟಕ-ಕೇರಳ ಗಡಿ ಜಿಲ್ಲೆಯಾದ ಕಾಸರಗೋಡಿನಲ್ಲಿ ವಿವಾಹ ನಡೆದಿತ್ತು. ಈ ವಿವಾಹದಲ್ಲಿ ಪಾಲ್ಗೊಂಡಿದ್ದ 43 ಜನರಿಗೆ ಈಗ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ.

ಮದುವೆ ಕುರಿತು ಹೊಸ ಆದೇಶ ಹೊರಡಿಸಿದ ಕಲಬುರಗಿ ಜಿಲ್ಲಾಡಳಿತಮದುವೆ ಕುರಿತು ಹೊಸ ಆದೇಶ ಹೊರಡಿಸಿದ ಕಲಬುರಗಿ ಜಿಲ್ಲಾಡಳಿತ

ಕಾಸರಗೋಡು ಜಿಲ್ಲಾಡಳಿತ ಇಷ್ಟು ಜನರಿಗೆ ಕೋವಿಡ್ ಸೋಂಕು ತಗುಲಿರುವುದನ್ನು ಖಚಿತಪಡಿಸಿದೆ. ಕೇರಳ ಸಾಂಕ್ರಾಮಿಕ ರೋಗಗಳ ಕಾಯ್ದೆ ಪ್ರಕಾರ ವಧುವಿನ ತಂದೆಯ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದಾರೆ.

ಮದುವೆ ತಂದ ಆಪತ್ತು: ರಾಣೇಬೆನ್ನೂರಿನ ಒಂದೇ ಕುಟುಂಬದ 32 ಜನರಿಗೆ ಕೊರೊನಾ ಸೋಂಕುಮದುವೆ ತಂದ ಆಪತ್ತು: ರಾಣೇಬೆನ್ನೂರಿನ ಒಂದೇ ಕುಟುಂಬದ 32 ಜನರಿಗೆ ಕೊರೊನಾ ಸೋಂಕು

43 People Who Attended Wedding Tested Positive For COVID 19

ವಧುವಿನ ಮನೆಯಲ್ಲಿಯೇ ವಿವಾಹ ನಡೆದಿತ್ತು. ನವ ವಧುವರ ಸೇರಿದಂತೆ ಈ ವಿವಾಹದಲ್ಲಿ ಪಾಲ್ಗೊಂಡಿದ್ದ 43 ಜನರಿಗೆ ಸೋಂಕು ತಗುಲಿದೆ. ಸೋಂಕಿನ ಮೂಲ ಯಾವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ.

ಮಂಗಳೂರು-ಕಾಸರಗೋಡು ನಿತ್ಯ ಸಂಚಾರಕ್ಕೆ ಕೇರಳದ ತಡೆ ಮಂಗಳೂರು-ಕಾಸರಗೋಡು ನಿತ್ಯ ಸಂಚಾರಕ್ಕೆ ಕೇರಳದ ತಡೆ

ಕೇರಳದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 19,026. ಕಾಸರಗೋಡು ಜಿಲ್ಲೆಯಲ್ಲಿ 1438 ಪ್ರಕರಣಗಳಿವೆ. ಕಾಸರಗೋಡು ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಕದಲ್ಲಿಯೇ ಇದ್ದು, ಪ್ರತಿದಿನ ನೂರಾರು ಜನರು ಅಕ್ಕ-ಪಕ್ಕದ ಜಿಲ್ಲೆಗಳಿಗೆ ಸಂಚಾರ ನಡೆಸುತ್ತಾರೆ.

English summary
43 people along with newly wed couple tested positive for COVID - 19 in Kasargod, Kerala. Wedding ceremony held on 17 July 2020. Police registered a case against bride's father.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X