ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಜೈಲಿನಲ್ಲಿ 350 ಕೋವಿಡ್ ಸೋಂಕಿನ ಪ್ರಕರಣ ದಾಖಲು

|
Google Oneindia Kannada News

ತಿರುವನಂತಪುರಂ, ಆಗಸ್ಟ್ 17 : ಕೇರಳದ ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ 350ಕ್ಕೂ ಹೆಚ್ಚು ಕೈದಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಕೈದಿಯೊಬ್ಬ ಭಾನುವಾರ ಮೃತಪಟ್ಟಿದ್ದಾನೆ.

ತಿರುವನಂತಪುರಂನಲ್ಲಿರುವ ಕಾರಾಗೃಹದಲ್ಲಿ ಭಾನುವಾರ 145 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. "ವಿಚಾರಣಾಧೀನ ಕೈದಿಯೊಬ್ಬನಿಗೆ ಮೊದಲು ಜೈಲಿನಲ್ಲಿ ಕೋವಿಡ್ ಸೋಂಕು ತಗುಲಿದ್ದು ಖಚಿತವಾಗಿತ್ತು. ಬಳಿಕ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ" ಎಂದು ಸೂಪರಿಟೆಂಡೆಟ್ ಎಸ್. ಸಂತೋಷ್ ಹೇಳಿದ್ದಾರೆ.

 ಬಳ್ಳಾರಿ; ವಾರದ ಹಿಂದೆ ಹೆಂಡತಿ ಕೊಂದು ಜೈಲು ಸೇರಿದ್ದವನಿಗೆ ಕೊರೊನಾ ಬಳ್ಳಾರಿ; ವಾರದ ಹಿಂದೆ ಹೆಂಡತಿ ಕೊಂದು ಜೈಲು ಸೇರಿದ್ದವನಿಗೆ ಕೊರೊನಾ

ಕೋವಿಡ್ ಸೋಂಕಿತ ಮೂವರು ಕೈದಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರನ್ನು ಜೈಲಿನಲ್ಲಿಯೇ ವಿಶೇಷ ಐಸೊಲೇಷನ್ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್‌ಕೋಟ್‌ ಜೈಲಿನಲ್ಲಿ 23 ಕೈದಿಗಳಿಗೆ ಕೋವಿಡ್ ಸೋಂಕು ರಾಜ್‌ಕೋಟ್‌ ಜೈಲಿನಲ್ಲಿ 23 ಕೈದಿಗಳಿಗೆ ಕೋವಿಡ್ ಸೋಂಕು

350 Inmates In Kerala Thiruvananthapuram Jail Tested Positive For COVID 19

"ಮೊದಲು ಕೋವಿಡ್ ಸೋಂಕು ಕಾಣಿಸಿಕೊಂಡಿದ್ದ ವಿಚಾರಣಾಧೀನ ಕೈದಿಯನ್ನು ಆಗಸ್ಟ್ 10ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ" ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ.25ರಿಂದ ಕೇರಳ-ಕರ್ನಾಟಕ ನಡುವೆ ಬಸ್ ಸೇವೆ ಆ.25ರಿಂದ ಕೇರಳ-ಕರ್ನಾಟಕ ನಡುವೆ ಬಸ್ ಸೇವೆ

ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ 970 ಕೈದಿಗಳಿದ್ದಾರೆ. ಬುಧವಾರ ಮತ್ತು ಗುರುವಾರ 197 ಕೈದಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು. ಮೊದಲು 100 ಕೈದಿಗಳಿಗೆ ಸೋಂಕು ತಗುಲಿದ್ದು ಖಚಿತವಾಗಿಯಿತು. ಮರುದಿನ 113 ಜನರ ವರದಿ ಪಾಸಿಟೀವ್ ಬಂದಿದೆ.

ಭಾನುವಾರ 298 ಜನರ ಪರೀಕ್ಷೆ ಮಾಡಲಾಗಿದ್ದು 145 ಪಾಸಿಟೀವ್ ಬಂದಿದೆ. ಜೈಲಿನ ಸಿಬ್ಬಂದಿಗಳು ಸೇರಿ ಒಟ್ಟು ಸೋಂಕಿತರ ಸಂಖ್ಯೆ 350ರ ಗಡಿ ದಾಟಿದೆ. ಸೋಂಕಿನ ಲಕ್ಷಣಗಳು ಇಲ್ಲದಿರುವ ಕೈದಿಗಳಿಗೆ ಜೈಲಿನಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ.

ಮೇ ತಿಂಗಳ ಬಳಿಕ ಜೈಲಿಗೆ ಕಳಿಸುವ ಮುನ್ನ ಎಲ್ಲಾ ಆರೋಪಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಕೇರಳದಲ್ಲಿ ಭಾನುವಾರ 1,530 ಹೊಸ ಪ್ರಕರಣ ದಾಖಲಾಗಿದ್ದು,ಇವುಗಳಲ್ಲಿ 519 ತಿರುವನಂತಪುರಂನಲ್ಲಿಯೇ ವರದಿಯಾಗಿದೆ.

English summary
350 inmates of the Poojappura central jail in Kerala's Thiruvananthapuram have tested positive for the COVID 19. 145 fresh cases were detected on August 16, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X