• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ: 24 ಹೊಸ ಕೋವಿಡ್ 19 ಕೇಸ್, 28 ಹಾಟ್ ಸ್ಪಾಟ್

|

ತಿರುವನಂತಪುರಂ, ಮೇ 21: ಕೇರಳದಲ್ಲಿ 24 ಜನರಿಗೆ ಕೋವಿಡ್ -19 ಪಾಸಿಟಿವ್ ಕೇಸ್ ದೃಢಪಡಿಸಲಾಗಿದೆ. 3 ಹೊಸ ಹಾಟ್ ಸ್ಪಾಟ್ ಸೇರ್ಪಡೆಗೊಂಡು ಒಟ್ಟು 28 ಹಾಟ್ ಸ್ಪಾಟ್ ಗಳಿವೆ. 8 ಜನರು ಗುಣಮುಖರಾಗಿದ್ದಾರೆ. ಒಟ್ಟು 177 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಒಟ್ಟು ಕೇಸುಗಳ ಸಂಖ್ಯೆ 666ಕ್ಕೇರಿದೆ. ಈವರೆಗೆ ಗುಣಮುಖರಾದವರು 510,ನಾಲ್ವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ಹೇಳಿದರು.

ಮಲಪ್ಪುರಂ ಜಿಲ್ಲೆಯಿಂದ ಐದು ಮಂದಿ, ಕಣ್ಣೂರು ಜಿಲ್ಲೆಯಿಂದ 4 ಮಂದಿಗೆ, ಕೊಟ್ಟಾಯಂ, ತ್ರಿಶೂರ್ ಜಿಲ್ಲೆಗಳಿಂದ ತಲಾ ಮೂವರಿಗೆ ಮತ್ತು ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಜಿಲ್ಲೆಗಳಿಂದ ತಲಾ ಇಬ್ಬರಿಗೆ ಇಡುಕ್ಕಿ,ಪಾಲಕ್ಕಾಡ್, ಕಾಸರಗೋಡು ಜಿಲ್ಲೆಯಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಢಪಟ್ಟಿದೆ. ಈ ಪೈಕಿ 14 ಮಂದಿ ವಿದೇಶದಿಂದ (ಯು.ಎ.ಇ -8, ಕುವೈತ್ -4, ಕತಾರ್ -1, ಮಲೇಷ್ಯಾ -1) ಮತ್ತು 10 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -5, ತಮಿಳುನಾಡು -3, ಗುಜರಾತ್ -1 ಮತ್ತು ಆಂಧ್ರಪ್ರದೇಶ -1)ಬಂದವರು.

ಕೇರಳದಲ್ಲಿ ಹೊಸ ಆತಂಕ ಸೃಷ್ಟಿಸುತ್ತಾ ಕೊರೊನಾ ವೈರಸ್ 3ನೇ ಅಲೆ?

 177 ಜನರಿಗೆ ಈ ರೋಗ ಪತ್ತೆ

177 ಜನರಿಗೆ ಈ ರೋಗ ಪತ್ತೆ

ಅದೇಸಮಯ, ರೋಗ ದೃಢಪಡಿಸಿ ಚಿಕಿತ್ಸೆಯಲ್ಲಿದ್ದ 8 ಮಂದಿಯ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ವಯನಾಡ್ ಜಿಲ್ಲೆಯಿಂದ ಐದು ಜನರ(ಮಲಪ್ಪುರಂ ನಿವಾಸಿ 1), ಕೊಟ್ಟಾಯಂನಿಂದ ಒಬ್ಬರು, ಎರ್ನಾಕುಲಂನಿಂದ ಒಬ್ಬರು (ಮಲಪ್ಪುರಂ ನಿವಾಸಿ) ಮತ್ತು ಕೋಳಿಕೋಡ್‌ ಜಿಲ್ಲೆಯಿಂದ ಒಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಈವರೆಗೆ 177 ಜನರಿಗೆ ಈ ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿರುವರು. ಈವರೆಗೆ 510 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

 ಒಟ್ಟು ಆಗಮನದ ಸಂಖ್ಯೆ 78,096

ಒಟ್ಟು ಆಗಮನದ ಸಂಖ್ಯೆ 78,096

ವಿಮಾನ ನಿಲ್ದಾಣಗಳ ಮೂಲಕ 5495 ಜನರು, ಸೀಪೋರ್ಟ್ ಮೂಲಕ 1621ಜನರು, ಚೆಕ್ ಪೋಸ್ಟ್ ಮೂಲಕ 68,844 ಜನರು ಮತ್ತು ರೈಲ್ವೆ ಮೂಲಕ 2136 ಜನರು ಸೇರಿದಂತೆ ರಾಜ್ಯಕ್ಕೆ ಒಟ್ಟು ಆಗಮನದ ಸಂಖ್ಯೆ 78,096 ಆಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 80,138 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 79,611 ಜನರು ಮನೆ /ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 527 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. 153 ಜನರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಂದೇ ಭಾರತ್ ಮಿಷನ್; ಕೇರಳಕ್ಕೆ ಬಂದ ಮೂವರ ವಿರುದ್ಧ ಎಫ್‌ಐಆರ್

 24 ಗಂಟೆಗಳಲ್ಲಿ 1798 ಮಾದರಿ ಪರೀಕ್ಷೆ

24 ಗಂಟೆಗಳಲ್ಲಿ 1798 ಮಾದರಿ ಪರೀಕ್ಷೆ

ಇಲ್ಲಿಯವರೆಗೆ, 49,833 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.ಇದರಲ್ಲಿ ಲಭ್ಯವಾದ 48,276 ಮಾದರಿಗಳ ತಪಾಸಣಾ ಫಲಿತಾಂಶಗಳು ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಕಣ್ಗಾವಲಿನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 6540 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 6265 ಮಾದರಿಗಳು ನಕಾರಾತ್ಮಕವಾಗಿವೆ. ಕಳೆದ 24 ಗಂಟೆಗಳಲ್ಲಿ 1798 ಮಾದರಿಗಳನ್ನು ಪರಿಶೀಲಿಸಲಾಯಿತು.

 3 ಹೊಸ ಹಾಟ್ ಸ್ಪಾಟ್‌ ಪ್ರದೇಶ

3 ಹೊಸ ಹಾಟ್ ಸ್ಪಾಟ್‌ ಪ್ರದೇಶ

ಹಾಟ್ ಸ್ಪಾಟ್‌ಗೆ 3 ಹೊಸ ಪ್ರದೇಶಗಳನ್ನು ಸೇರಿಸಲಾಗಿದೆ. ಪಾಲಕ್ಕಾಡ್ ಜಿಲ್ಲೆಯ ತ್ರಿಕ್ಕಡಿರಿ, ಕೃಷ್ಣಪುರಂನ ಕಣ್ಣೂರು ಜಿಲ್ಲೆಯ ಧರ್ಮದಂ ಹೊಸ ಹಾಟ್ ಸ್ಪಾಟ್‌ಗಳು. ಅದೇ ಸಮಯದಲ್ಲಿ, 8 ಪ್ರದೇಶಗಳನ್ನು ಹಾಟ್ ಸ್ಪಾಟ್ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 28 ಹಾಟ್‌ಸ್ಪಾಟ್‌ಗಳಿವೆ.ಒಟ್ಟು ಕೇಸುಗಳ ಸಂಖ್ಯೆ 666ಕ್ಕೇರಿದೆ. ಈವರೆಗೆ ಗುಣಮುಖರಾದವರು 510,ನಾಲ್ವರು ಮೃತಪಟ್ಟಿದ್ದಾರೆ.

English summary
24 new coronavirus cases reported, Hotspots increased to 28 in Kerala as on May 21. Total cases 666, 510 recovered and 4 passed away.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more